ಉಡಾನ್ ಅನುಷ್ಠಾನಕ್ಕಾಗಿ ಪೂರ್ವಭಾವಿ ಸಭೆ ಯಶಸ್ವಿ

Koppal ಕೊಪ್ಪಳದಲ್ಲಿ ಉಡಾನ್ ಅನುಷ್ಠಾನಕ್ಕಾಗಿ ಪೂರ್ವ ಭಾವಿ ಸಭೆ ನಡೆಯಿತು. ನಗರದ ಐಬಿಯಲ್ಲಿ ನಡೆದ ಸಭೆಯಲ್ಲಿ ನಗರದ ಗಣ್ಯರು, ವಕೀಲರು, ವ್ಯಾಪಾರಿಗಳು ಭಾಗವಹಿಸಿದ್ದರು. ತಮ್ಮ ತಮ್ಮ ಅಭಿಪ್ರಾಯಗಳನ್ನು, ಸಲಹೆ ಸೂಚನೆಗಳನ್ನು ನೀಡಿದರು.

ಮಂಗಳವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಯ ಆಳ ಅಗಲಗಳನ್ಬು ತಿಳಿದುಕೊಂಡು ನಂತರ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸೇರಿಕೊಂಡು ಸಂಬಂಧಿಸಿದ ಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದುವರೆಯಲು ನಿರ್ಧರಿಸಲಾಯಿತು.


ಅಸೀಪ್ ಅಲಿಯವರು ವಿಷಯದ ಪ್ರಸ್ತಾಪ ಮಾಡಿದರು. ರಾಘವೇಂದ್ರ ಪಾನಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕುರಿತು ವಾಟ್ಸಪ್ ಗ್ರೂಪ್ ರಚನೆ ಮಾಡಲಾಯಿತು. ಕೆ.ಜಿ.ಕುಲಕರ್ಣಿ, ಮಹಾವೀರ್ ಜೈನ್, ಅಭಯ್ ಜೈನ್, ಸಿದ್ದಣ್ಣ ನಾಲವಾಡ, ಪೀರಾ ಹುಸೇನ್ ಹೊಸಳ್ಳಿ, ಸಂಜಯ ಕೊತಬಾಳ, ಬಸವರಾಜ್ ಬಳ್ಳೊಳ್ಳಿ, ವಿ.ಎಂ.ಭೂಸನೂರಮಠ, ಪ್ರಹ್ಲಾದ ಅಗಳಿ, ಮಹಾಂತೇಶ ಮಲ್ಲನಗೌಡ್ರ, ಸಿರಾಜ್ ಬಿಸರಳ್ಳಿ, ರವಿ, ಗಂಗಾಧರ ಬಂಡಿಹಾಳ, ರಾಜು ಬಿ.ಆರ್, ರಾಜೇಸಾಬ ,ದೊಡ್ಡೇಶ ಯಲಿಗಾರ , ಸಲಿಂ ಅಳವಂಡಿ , ಮೌಲಾಹುಸೇನ ಜಮಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error