ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್, 80 ಕೋಟಿ ಜನರಿಗೆ 5 ಕೆಜಿ ಅಕ್ಕಿ, ಗೋಧಿ

1.7 ಲಕ್ಷ ಕೋ.ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ: ಕೊರೊನಾವೈರಸ್ ಕಾರಣ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದ್ದು, 1.7 ಲಕ್ಷ ಕೋಟಿ ರೂ. ಮೊತ್ತದ ಪರಿಹಾರ ಪ್ಯಾಕೇಜನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಮುಂದಿನ 3 ತಿಂಗಳುಗಳ ಕಾಲ 80 ಕೋಟಿ ಬಡ ಜನರಿಗೆ 5 ಕೆಜಿ ಗೋಧಿ ಅಥವಾ ಅಕ್ಕಿ ಮತ್ತು 1 ಕೆಜಿ ಇತರ ಧಾನ್ಯಗಳು ಲಭಿಸಲಿವೆ. 80 ಕೋಟಿ ಫಲಾನುಭವಿಗಳು ಈ ಯೋಜನೆಯಡಿ ಬರಲಿದ್ದಾರೆ ಎಂದವರು ಹೇಳಿದರು.

ವೈದ್ಯರು, ಪ್ಯಾರಾಮೆಡಿಕ್ , ಆರೋಗ್ಯ ಕಾರ್ಯಕರ್ತರಿಗೆ ವ್ಯಕ್ತಿಯೊಬ್ಬರಿಗೆ 50 ಲಕ್ಷ ರೂ. ವಿಮೆ ಯೋಜನೆಯನ್ನು ಇದೇ ಸಂದರ್ಭ ಘೋಷಿಸಲಾಯಿತು.

►3 ಕೋಟಿ ಹಿರಿಯ ನಾಗರಿಕರು, ಬಡ ವಿಧವೆಯವರು ಮತ್ತು ಬಡ ವಿಕಲಚೇತನರಿಗೆ 1000 ರೂ. ಸಹಾಯಧನ

►ನರೇಗಾ ವೇತನ ದಿನವೊಂದಕ್ಕೆ 182 ರೂ.ಗಳಿಂದ 202 ರೂ.ಗಳಿಗೆ ಏರಿಕೆ, 5 ಕೋಟಿ ಕುಟುಂಬಗಳು ಫಲಾನುಭವಿಗಳು

►ಮುಂದಿನ 3 ತಿಂಗಳುಗಳ ಕಾಲ ಜನಧನ್ ಯೋಜನೆ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ತಿಂಗಳಿಗೆ 500 ರೂ.

►3 ತಿಂಗಳುಗಳ ಕಾಲ ಉಜ್ವಲ ಗ್ಯಾಸ್ ಸಬ್ಸಿಡಿ ಯೋಜನೆಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್. 8.3 ಕೋಟಿ ಬಿಪಿಎಲ್ ಕುಟುಂಬಗಳು ಫಲಾನುಭವಿಗಳು.

►3 ತಿಂಗಳು ಸಂಘಟಿತ ವಲಯದ ಕಾರ್ಮಿಕರಿಗೆ ಪಿಎಫ್ ಹಣ. ಶೇ.75ರಷ್ಟು ಡ್ರಾ ಮಾಡಲು ಅವಕಾಶ

►ಶೇ.24ರಷ್ಟು ಪಿಎಫ್ ಹಣ ಸರ್ಕಾರ ಭರಿಸುತ್ತದೆ

►ಕಿಸಾನ್ ಸಮ್ಮಾನ್ ಯೋಜನೆಯಡಿ ಎಪ್ರಿಲ್ ಮೊದಲ ವಾರದಲ್ಲಿ ರೈತರಿಗೆ 2000 ರೂ.

Please follow and like us:
error