ಉಚಿತ ಮಾಸ್ಕ್ ,ಸ್ಯಾನಿಟೈಜರ್ ವಿತರಣೆ ಮಾಡಿದ- ಸ್ವಯಂ ಸೇವಕರ ತಂಡ

ಜೀವದಾನ ಗೆಳೆಯರ ಬಳಗ ಕೊಪ್ಪಳ ಹಾಗೂ ಎನ್ ಎಸ್ ಎಸ್ ಸ್ವಯಂ ಸೇವರ ಬಳಗದಿಂದ ಕೊವಿಡ-19 ಮಾಹಾಮಾರಿ ವೈರಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕೊಪ್ಪಳ ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ಮನೆ- ಮನೆ ತೆರಳಿ ಮಾಸ್ಕ್ ವಿತರಣೆ,ಸ್ಯಾನಿಟೈಜರ್ ವಿತರಣೆ ಮಾಡುವದರ ಮೂಲಕ ಜಾಗೃತಿ ಮೂಡಿಸಲಾಯಿತು.
ಕರೋನಾ ವೈರಸ್ ಹರಡುವ ವಿಧಾನಗಳು, ತಡೆಗಟ್ಟುವ ಕ್ರಮಗಳನ್ನು ವಿವರಿಸಲಾಯಿತು,ಈ ವೈರಸ್ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಬೇಕು.ಇದು ಸಾಂಕ್ರಾಮಿಕ ವೈರಸ್ ಆಗಿರುವದ್ದರಿಂದ ಜಾಗುರುಕತೆಯಿಂದ ಇರುವದು ಅವಶ್ಯವಾಗಿದೆ ,ಕಡ್ಡಾಯವಾಗಿ ಮಾಸ್ಕ್ ದರಿಸುವದು, ಹೊರಗಡೆ ಹೊಗಿಬಂದರೆ ಸ್ಯಾನಿಟೈಜರ್ ಬಳಕೆ ಮತ್ತು ಸಮಾಜಿಕ ಅಂತರ ಕಾಪಾಡುವ ಮೂಲಕ ವೈರಸ್ ಹರಡದಂತೆ ತಡೆಗಟ್ಟಲು ಸಾದ್ಯ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು .ದೈನಂದಿನ ಜೀವನದಲ್ಲಿ ಆಹಾರ ಪದ್ಧತಿಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ವೈರಸ್ ಬರದಂತೆ ಮಾಡಬಹುದು ಬಿಸಿ ನೀರು, ಬೇಯಿಸಿ ಆಹಾರ ಸ್ವಿಕರಿಸುವದು, ಕಷಾಯ ಕಡಿಯುವದರ ಮೂಲಕ ನೆಗಡಿ,ಕೆಮ್ಮು,ಜ್ವರದಂತ ಲಕ್ಷಣಗಳನ್ನು ಹೊಗಲಾಡಿಬಹುದು ಎಂಬದನ್ನು ಗ್ರಾಮದ ಜನರಿಗೆ ಮನವರಿಕೆ ಮಾಡಲಾಯಿತು.
ಈ ಸೇವೆಯಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲದ ಪ್ರಾದ್ಯಾಪರಾದ ಶ್ರೀ ಶರಣಬಸಪ್ಪ ಬಿಳೆಯಲಿ ಹಾಗೂ ಜೀವದಾನ ಗೆಳೆಯ ಬಳಗದ ಸ್ಥಾಪಕರು ಮತ್ತು ಉಪನ್ಯಾಸಕರಾದ ಶ್ರೀ ಶಿವನಗೌಡ ಪೋಲಿಸ್ ಪಾಟೀಲ ಮಾರ್ಗದರ್ಶನ‌ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಪ್ರಾರಂಬ ಮಾಡಿದರು ನಂತರ ಸ್ವಯಂ ಸೇವಕರ ತಂಡದ ಸದಸ್ಯರುಗಳಾದ,ಅರುಣ ಜಾಲಗಾರ,ನಾಗರಾಜ ತತ್ತಿಹೊಲ, ಮಂಜುನಾಥ ತಳವಾರ ,ಹೇಮಂತ ಕೂಮಾರ ಶಿರಟ್ಟಿ,ಶರಣಪ್ಪ ಕುಂಬಾರ ,ಚಂದ್ರಶೇಖರ ಚಿಂಚರ, ಕಾವ್ಯಾ ,ಹೇಮಾ ,ಮಿನಾ ,ಸುಹಾಸಿನಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ಸೇವೆಯನ್ನು ದೇವಲಾಪೂರ ಗ್ರಾಮದ ಪಂಚಾಯತ ಸದಸ್ಯರಾದ ಶ್ರೀ ಚೇತನ ಕೂಮಾರ ವಿವರಿಸುತ್ತಾ ಈ ವಿದ್ಯಾರ್ಥಿಗಳು ನಮ್ಮ ಗ್ರಾಮದಲ್ಲಿ ಎನ್ ಎಸ್ ಎಸ್ ಕ್ಯಾಂಪ್ ಮಾಡಿರುವಾಗ 200 ಹೆಚ್ಚು ಸಸಿಗಳನ್ನು ಹಾಕಲಾಗಿತ್ತು ಅವುಗಳು ಮರಗಾಳಾಗಿ ಬೆಳೆದು ಊರಿಗೆ ತಂಪನ್ನು ನಿಡುತ್ತಿವೆ ಅದೆ ರೀತಿಯಾಗಿ ಈ ವರ್ಷವು ಸಹ ಕರೋನಾ ಮಾಹಾಮಾರಿಯಿಂದ ತಪ್ಪಿಸಿಕೊಳ್ಳಲು ಜಾಗೃತಿ ಕಾರ್ಯಕ್ರಮ‌ ಮನೆ- ಮನೆ ಜಾಗೃತಿ ಮೆಚ್ಚುವಂತದ್ದು ಎಂದು ತಿಳಿಸುವ‌ ಮೂಲಕ ಅಭಿನಂದನೆಗಳು ತಿಳಿಸಿದರು ಮತ್ತು ಗ್ರಾಮಸ್ಥರು ಅಭಿನಂದನೆಗಳು ಸಲ್ಲಿಸಿದರು.
Please follow and like us:
error