ಉಗ್ರರ ಜೊತೆಗಿದ್ದ ದವೀಂದರ್ ಸಿಂಗ್ ಪ್ರಕರಣ ಕೈಗೆತ್ತಿಕೊಂಡ ಎನ್‍ಐಎ

ಹೊಸದಿಲ್ಲಿ: ಇತ್ತೀಚೆಗೆ ಇಬ್ಬರು ಉಗ್ರರೊಂದಿಗೆ ಕಾರಿನಲ್ಲಿ ದಿಲ್ಲಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಕಾಶ್ಮೀರ ಪೊಲೀಸರ ಕೈಗೆ ಸಿಕ್ಕಿ ಬಿದ್ದ ದವೀಂದರ್ ಸಿಂಗ್ ಪ್ರಕರಣದ ತನಿಖೆಯನ್ನು ಜಮ್ಮು ಕಾಶ್ಮೀರ ಪೊಲೀಸರಿಂದ ರಾಷ್ಟ್ರೀಯ ತನಿಖಾ ಏಜನ್ಸಿ ವಹಿಸಿಕೊಂಡಿದೆ.

ಸಿಂಗ್ ಪ್ರಕರಣದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಎನ್‍ಐಎಗೆ ಗುರುವಾರ ಸೂಚಿಸಿತ್ತಲ್ಲದೆ, ಆತನಿಗೆ ಉಗ್ರ ಸಂಘಟನೆಗಳ ಜತೆಗಿರಬಹುದಾದ ನಂಟಿನ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಸೂಚಿಸಿತ್ತು. ಈ ವರ್ಷ ಎನ್‍ಐಎ ಕೈಗೆತ್ತಿಕೊಂಡಿರುವ ಮೊದಲ ಪ್ರಕರಣ ಇದಾಗಿದೆ.

ಸಿಂಗ್ ವಿರುದ್ಧ ಈಗಾಗಲೇ ಅಕ್ರಮ ಚಟುವಟಿಕೆ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಾಗಿದೆ. ಆತನಿಗೆ ಈ ಹಿಂದೆ ನೀಡಲಾಗಿದ್ದ ಶೇರ್-ಎ-ಕಾಶ್ಮೀರ್ ಪೊಲೀಸ್ ಪದಕವನ್ನು ಬುಧವಾರ ವಾಪಸ್ ಪಡೆಯಲಾಗಿತ್ತು.

Please follow and like us:
error