ಈ ಊರಿನ ಪೋಸ್ಟಮನ್ ಮಾಡಿದ್ದನ್ನು ಕೇಳಿದರೆ ದಂಗಾಗ್ತೀರಿ !

ಯಲಬುರ್ಗಾ :  ಇಂದಿನ ಕೋರಿಯರ್, ವಾಟ್ಸಪ್ , ಇಮೇಲ್ ಕಾಲದಲ್ಲಿ ಅಂಚೆಯವರನ್ನು ಕೇಳುವವರೇ ಇಲ್ಲದಂತಾಗಿದೆ. ಆದರೂ ಸಹ ಗ್ರಾಮೀಣ ಬಾಗದಲ್ಲಿ ಈಗಲೂ ಜನ 

ನೆಚ್ಚಿಕೊಂಡಿರುವುದು ಅಂಚೆ ಇಲಾಖೆಯನ್ನೆ.   ಹೀಗಿರುವಾಗ ಯಲಬುರ್ಗಾ ತಾಲೂಕಿನ ಈ ಅಂಚೆಯಣ್ಣ ಮಾಡಿದ ಘನಂದಾರಿ ಕೆಲಸದ ಬಗ್ಗೆ ಕೇಳಿದ್ರೆ ನೀವೇ ಅಚ್ಚರಿ ಪಡ್ತೀರಿ. ಸುರೇಶ ಚಾವಡಿ ಎನ್ನುವ ಅಂಚೆಯವನು ಯಲಬುರ್ಗಾ ತಾಲೂಕಿನ ಸಂಗನಾಳದಲ್ಲಿ ಕೆಲಸ ಮಾಡ್ತಾ ಇದ್ದಾನೆ. ಇವನು ಕಳೆದ ಮೂರು ವರ್ಷಗಳಿಂದ ಅಂಚೆಗೆ ಬಂದ ಯಾವುದೇ ಪತ್ರಗಳನ್ನು, ದಾಖಲೆಗಳನ್ನು, ವಿದವಾ ವೇತನ ಯಾವುದನ್ನೂ ವಿತರಣೆ ಮಾಡಿಲ್ಲ. 

ಉದ್ಯೋಗಾಕಾಂಕ್ಷಿಗಳು ತಮ್ಮ ಆದೇಶ ಪತ್ರಗಳ ಬರಬಹುದು ಅಂತಾ, ಜನಸಾಮಾನ್ಯರು ತಮ್ಮ ಪಾನ್ ಕಾರ್ಡ, ಅದಾರ್ ಕಾರ್ಡ ಬರಬಹುದು ಅಂತಾ ಕಾದಿದ್ದೆ ಬಂತು ಆದರೆ ಬರಲೇ ಇಲ್ಲ. ವರ್ಷಗಟ್ಟಲೇ ಯಾವುದೇ ಪತ್ರಗಳ ಬರುತ್ತಿಲ್ಲ ಎಂದುಕೊಂಡು ಸುಮ್ಮನಾಗಿದ್ದರು. ಆದರೆ ಯುವಕರಿಗೆ ಏನೋ ಅನುಮಾನ ಇವನು ಯಾಕೆ ಪತ್ರಗಳನ್ನು ವಿತರಣೆ ಮಾಡ್ತಾ ಇಲ್ಲ ಅಂತಾ. ಮೇಲಾಧಿಕಾರಿಗಳಿಗೆ  ದೂರು ನೀಡಿ ಅಂಚೆ ಕಚೇರಿಯೊಳಗೆ ಹೋಗಿ ನೋಡಿದ್ರೆ ಮೂರು ವರ್ಷಗಳಿಂದ ವಿತರಣೆಯಾಗದೆ ಇದ್ದ ಪತ್ರಗಳು, ದಾಖಲೆಗಳ ರಾಶಿಯೇ ಬಿದ್ದಿತ್ತು. ಈ ಸುರೇಶ ಚಾವಡಿ ೩ ವರ್ಷಗಳಿಂದ ಯಾವದನ್ನೂ ವಿತರಣೆ ಮಾಡದೇ ಹಾಗೆಯೇ . ಬೀಸಾಡಿದ್ದ. ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.

Please follow and like us:
error