ಈರುಳ್ಳಿಯಲ್ಲಿ ಕೀಟ ಮತ್ತು ರೋಗಗಳ ಹತೋಟಿ ಕ್ರಮಗಳ ಕುರಿತು ರೈತರಿಗೆ ಸಲಹೆಗಳು

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ರೈತರು ಈರುಳ್ಳಿ ಬಿತ್ತನೆ ಕಾರ್ಯ ಕೈಗೊಂಡಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ವಿಷಯ ತಜ್ಞರು ಇತ್ತೀಚೆಗೆ ಈರುಳ್ಳಿ ಹೊಲಗಳನ್ನು ಪರಿಶೀಲಿಸಿ ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
ಈರುಳ್ಳಿ ಬೆಳೆಯಲ್ಲಿ ಈಗ ಕಾಣಿಸಿಕೊಂಡಿರುವ ಕೀಟಗಳಲ್ಲಿ ಥ್ರಿಪ್ಸ್ ನುಸಿ ಮತ್ತು ಹಸಿರು ಕೀಟ ತುಂಬಾ ಬಾಧೆ ಮಾಡುತ್ತದೆ. ಇದರಿಂದಾಗಿ ಎಲೆಗಳ ಮೇಲೆ ಬಿಳಿ ಗೆರೆಗಳು ಕಾಣಿಸಿಕೊಂಡು ಎಲೆ ಜೋತು ಬೀಳುತ್ತವೆ ಮತ್ತು ಒಣಗಿ ಹೋಗಿ ತೀವ್ರ ನಷ್ಟ ಉಂಟಾಗುತ್ತಿದೆ.

ಹತೋಟಿ ಕ್ರಮಗಳು: ಈ ಎರಡು ಕೀಟಗಳ ಹತೋಟಿಗಾಗಿ ಬಿತ್ತಿದ/ನಾಟಿ ಮಾಡಿದ 3 ವಾರಗಳಲ್ಲಿ ಪ್ರೆಫಿನೋಫಾಸ್ 50 ಇ.ಸಿ. 2 ಮೀ.ಲೀ. ಒಂದು ಲೀ. ನೀರಿಗೆ ಬೆರೆಸಿ ಸಿಂಪರಣೆ ಕೈಗೊಳ್ಳಬೇಕು. ನಂತರ ಇಮಾಮೆಕ್ಟಿನ್ ಬೆಂಜೋಯೆಟ್ 0.40 ಗ್ರಾಂ. ಅಥವಾ ಲಾಂಬ್ಡಾ ಸಿಯಾಲೋಫ್ರಿನ್ 5 ಇ.ಸಿ. ಎನ್ನುವ ಕೀಟನಾಶಕವನ್ನು 1 ಮೀ.ಲೀ. ನಷ್ಟು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಬಿತ್ತಿದ 9 ಹಾಗೂ 11 ನೇ ವಾರಗಳಲ್ಲಿ ಬಾಧೆ ಕಾಣಿಸಿದಲ್ಲಿ ಮಾತ್ರ ಟ್ರೆöÊಜೋಫಾಸ್ ಮತ್ತು ಡೆಲ್ಟಾಮಥ್ರಿನ್ ಎಂಬ ಎರಡು ಕೀಟನಾಶಕಗಳನ್ನೊಳಗೊಂಡ ಸಂಯುಕ್ತ ಕೀಟನಾಶಕವನ್ನು 1 ಮೀ.ಲೀ. ನಷ್ಟು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ಇತ್ತೀಚಿನ ದಿನಗಳಲ್ಲಿ ಜೀರುಂಡೆ ಜಾತಿಗೆ ಸೇರಿದ ವೈಯರ್ ವರ್ಮ್ ಎನ್ನುವ ಕೀಟ ಈರುಳ್ಳಿ ಬೆಳೆಯನ್ನು ನಾಶಪಡಿಸುತ್ತದೆ. ಇದು ಬೇರನ್ನು ಕಡೆದು ಸಸಿ ಪೂರ್ತಿ ಒಣಗಿ ಹೋಗುವಂತೆ ಮಾಡುತ್ತದೆ. ಇದರ ಹತೋಟಿಗಾಗಿ ಮಾಗಿ ಉಳುಮೆ ಮಾಡುವುದು ಅತೀ ಅವಶ್ಯಕ. ಎಕರೆಗೆ 1 ಕ್ವಿಂಟಾಲ್ ಬೇವಿನಹಿಂಡಿ ಬಳಸುವುದು ಸೂಕ್ತ. ಕಾರ್ಬೋಫ್ಯೂರಾನ್ ಎನ್ನುವ ಹರಳು ರೂಪದ ಕೀಟ ನಾಶಕವನ್ನು ಎಕರೆಗೆ 8 ಕೆ.ಜಿ. ಯಂತೆ ಬಳಸಬೇಕು.
ಪ್ರಮುಖ ರೋಗಗಳು: ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದಾಗಿ ನೇರಳೆ ಮಚ್ಛೆ ರೋಗ ಎಂದು ಕರೆಯಲ್ಪಡುವ ರೋಗ ಕಾಣಿಸಿಕೊಳ್ಳತ್ತದೆ. ಈ ರೋಗ ಆಲ್ಟರ್ನೇರಿಯಾ ಪೋರಿ ಎಂಬ ಶಿಲೀಂಧ್ರದಿAದ ಹರಡುತ್ತದೆ. ಇದು ತುಂಬಾ ಅಪಾಯಕಾರಿ ರೋಗ ಆಗಿದ್ದು ಶೇ.60 ರಷ್ಟು ಬೆಳೆ ಹಾನಿ ಉಂಟು ಮಾಡಬಲ್ಲದು. ಈ ರೋಗಕ್ಕೆ ಮುಂಜಾಗ್ರತೆ ಕ್ರಮವಾಗಿ ಬಿತ್ತನೆ ಮಾಡಿದ 6 ನೇ, 9 ನೇ ಮತ್ತು 11 ನೇ ವಾರಗಳಲ್ಲಿ ಮ್ಯಾಂಕೋಜೆಬ್ ಶೇ.75 ಡಬ್ಲೂö್ಯ.ಪಿ. ಎನ್ನುವ ಪುಡಿಯನ್ನು ಮತ್ತು ಕ್ಲೋರೋಥಲೋನಿಲ್ – 50. ಎನ್ನುವ ಶಿಲೀಂಧ್ರನಾಶಕವನ್ನು ಬದಲಾಯಿಸಿ 2 – 2.5 ಗ್ರಾಂ, 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಚಿಬ್ಬು ರೋಗ ಅಥವಾ ಬ್ಲೆöÊಟ್ ರೋಗ ಕೊಲಾಟಿಟ್ರಕಮ್ ಎಂದು ಕರೆಯಲ್ಪಡುವ ಶಿಲೀಂಧ್ರದಿAದ ಎಲೆಗಳಲ್ಲಿ ನೀರುಗಟ್ಟಿದ ಹಳದಿ ಬಣ್ಣದ ಚುಕ್ಕೆಗಳಾಗಿ ಎಲೆಗಳೆಲ್ಲ ಒಣಗಿ ಬಾಡುತ್ತವೆ. ಈ ರೋಗದ ಹತೋಟಿಗೂ  ಮೇಲೆ ತಿಳಿಸಿದ ಶಿಲೀಂಧ್ರನಾಶಕಗಳನ್ನೇ ಬಳಸಬಹುದಾಗಿದೆ.
ವಿಶೇಷ ಸೂಚನೆ: ಈ ಕೀಟಗಳು ಹಾಗೂ ರೋಗಗಳು ಈ ವಾತಾವರಣದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಬಹುದು. ಗಡ್ಡೆಕೊಳೆ ರೋಗಕ್ಕೆ ಮೇಲೆ ತಿಳಿಸಿದ  ಶಿಲೀಂಧ್ರ ನಾಶಕಗಳನ್ನು ಮಿಶ್ರ ಮಾಡಿ ಸಿಂಪರಣೆ/ ಡ್ರೆಂಚಿAಗ ಮಾಡಬಹುದು. ಬಿತ್ತನೆ ಮಾಡಿದ 70 ಎಸ್.ಒ.ಪಿ ಗೊಬ್ಬರವನ್ನು ಎಕರೆಗೆ 50 ಕಿ.ಗ್ರಾಂ. ಕೊಟ್ಟಲ್ಲಿ ರೋಗದ ಬಾಧೆ ಕಡಿಮೆ ಆಗಿ ಗಡ್ಡೆ ಗಾತ್ರವೂ ಹೆಚ್ಚಾಗುತ್ತದೆ. ಎರೆ ಮಣ್ಣಿನಲ್ಲಿ ಇದರ ಅರ್ಧದಷ್ಟು ಬಳಸಬೇಕು. ಇದಲ್ಲದೇ ಹೊಲವನ್ನು ಕಸಮುಕ್ತವಾಗಿಡಬೇಕು. ಬೇವಿನಹಿಂಡಿ, ಜೈವಿಕ ಗೊಬ್ಬರಗಳಾದ ಆಸ್ಪರ್ಜಿಲ್ಲಸ, ಟ್ರೆöÊಕೋಡರ್ಮಾ ಮುಂತಾದವುಗಳನ್ನು ಕೊಟ್ಟಿಗೆ ಗೊಬ್ಬರದಲ್ಲಿ ಬೆರೆಸಿ ಮಣ್ಣಿನಲ್ಲಿ ಬೆರೆಸಬೇಕು. ಇನ್ನು ಮುಂದೆ ಬಿತ್ತನೆ ಮಾಡುವ ರೈತರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದು ನೀರು ಮತ್ತು ಪೋಷಕಾಂಶಗಳ ನಿರ್ವಹಣೆ ಮಾಡಿದಲ್ಲಿ ಉತ್ತಮ ಆದಾಯ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಾ ಕಛೇರಿಗಳು ಅಥವಾ ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿಪಂ), ವಿಷಯ ತಜ್ಞ ವಾಮನಮೂರ್ತಿ ಮೊ.ಸಂ: 9982672039 ರವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

Please follow and like us:
error