ಇಸ್ಲಾಮಾಬಾದ್‌ನಲ್ಲಿ ಇಬ್ಬರು ಭಾರತೀಯ ಹೈಕಮಿಷನ್ ಅಧಿಕಾರಿಗಳು ಕಾಣೆ

ನವದೆಹಲಿ: ಇಸ್ಲಾಮಾಬಾದ್‌ನಲ್ಲಿ ಇಬ್ಬರು ಭಾರತೀಯ ಹೈಕಮಿಷನ್ ಅಧಿಕಾರಿಗಳು ಕಾಣೆಯಾಗಿದ್ದಾರೆ . ಬೆಳಿಗ್ಗೆ 8 ಗಂಟೆಯಿಂದ ಇವರಿಬ್ಬರು ನಾಪತ್ತೆಯಾಗಿದ್ದಾರೆ.ಇದರ ಬಗ್ಗೆ  ನವದೆಹಲಿ ಪಾಕಿಸ್ತಾನ ಸರ್ಕಾರಕ್ಕೆ ದೂರು ನೀಡಿದೆ.

ನವದೆಹಲಿಯ ಪಾಕಿಸ್ತಾನಿ ಹೈಕಮಿಷನ್ನಲ್ಲಿ ಇಬ್ಬರು ಪಾಕಿಸ್ತಾನಿ ಅಧಿಕಾರಿಗಳು ಗೂಡಚರ್ಯೆ ಆರೋಪ ಹಿನ್ನೆಲೆ ಗಡೀಪಾರು ಮಾಡಿದ ನಂತರ ಈ ಘಟನೆ ನಡೆದಿದೆ. ಇಬ್ಬರು ದೆಹಲಿಯ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.ಕಳೆದ ಹಲವಾರು ದಿನಗಳಿಂದ ಪಾಕಿಸ್ತಾನದ ಹಲವಾರು ಉನ್ನತ ರಾಜತಾಂತ್ರಿಕರನ್ನು ಇಸ್ಲಾಮಾಬಾದ್‌ನಲ್ಲಿ ಆಕ್ರಮಣಕಾರಿಯಾಗಿ ಫಾಲೋ ಮಾಡಲಾಗುತ್ತಿದೆ ಮತ್ತು ವಿಪರೀತ ಕಣ್ಗಾವಲು ನಡೆಸಿದ್ದರ ವಿರುದ್ದ ಭಾರತ ಪ್ರತಿಭಟನೆ ವ್ಯಕ್ತಪಡಿಸಿತ್ತು.

ಭಾರತದ ಚಾರ್ಜ್ ಡಿ ಅಫೈರ್ಸ್ ಗೌರವ್ ಅಹ್ಲುವಾಲಿಯಾ ಅವರ ವಾಹನವನ್ನು ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸದಸ್ಯ ಇತ್ತೀಚೆಗೆ ಬೆನ್ನಟ್ಟಿದ್ದರು. ಅಧಿಕಾರಿಯ ಕಾರಿನ ಹಿಂದೆ ಬೈಕರ್ ಒಬ್ಬರು ಕಾಣಿಸಿಕೊಂಡಿದ್ದಾರೆ.

 

Please follow and like us:
error