ಇಸ್ಪೇಟ್ ಅಡ್ಡೆ ಮೇಲೆ ಪೋಲಿಸರ ದಾಳಿ : ಬಂಧನ

ಗಂಗಾವತಿ :ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟು ಅಡ್ಡೆ ಮೇಲೆ ಪೊಲೀಸರ ದಾಳಿ ಮಾಡಿ ಜೂಜಾಟವಾಡುತ್ತಿದ್ದ 7 ಜನರನ್ನು ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರು ಬಳಿಯ ಮುದ್ದಲ್‌ಗುಂಡಿ ರಸ್ತೆ ಬಳಿಯ ತೆರೆದ ಭೂಮಿಯಲ್ಲಿ ಜೂಜಾಟ ಅಡ್ಡೆ ಮೇಲೆ ದಾಳಿ ಮಾಡಿ ಜೂಜಾಡುತ್ತಿದ್ದರಿಂದ ₹1,08,850 ನಗದು ಹಣ ವಶಕ್ಕೆ . 02 ಸ್ವಿಫ್ಟ್ ಡಿಸೈರ್ ಕಾರುಗಳು, 11 ಮೋಟರ್ ಬೈಕ್‌ಗಳು ಮತ್ತು 07 ಮೊಬೈಲ್ ಫೋನ್‌ಗಳ ಜಪ್ತಿ ಮಾಡಲಾಗಿದೆ.

ಆರೋಪಿಗಳಾದ ಚಂದಪ್ಪ ಹಿರೇಮನಿ, ಬಸವರಾಜ್ ರಾಥೋಡ್, ಅಮರೇಶ್ ಹಟ್ಟಿಗುದ್ದಾ, ವೀರೇಶ್ ಹೊಸಮಾನಿ, ರುದ್ರಗೌಡ ಪೊಲೀಸ್ ಪಾಟೀಲ್ ಹನುಮಂತ, ಪ್ರಕಾಶ್ ರಾಥೋಡ್ ರನ್ನು ಬಂಧಿಸಲಾಗಿದೆ

ಸುತ್ತಮುತ್ತ ಗ್ರಾಮಗಳಿಂದ ಜೂಜಾಡಲು ಬರುತ್ತಿದ್ದ ಜೂಜುಕೋರರ ಬಗ್ಗೆ ಅಡ್ಡೆ ಬಗ್ಗೆ ಖಚಿತ ಮಾಹಿತಿಯ ಮೇರೆಗೆ. ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ, ಕುಷ್ಟಗಿ ಪಿಎಸ್ ಐ ಚಿತ್ರಂಜನ್, ತಾವರಗೇರಾ ಪಿಎಸ್ ಐ ಗೀತಾಂಜಲಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ

Please follow and like us:
error