ಇಟಲಿಯಲ್ಲಿ ಒಂದೇ ದಿನ ಕೊರೋನ ವೈರಸ್ ಸೋಂಕಿಗೆ 1 ಸಾವಿರ ಮಂದಿ ಬಲಿ

ರೋಮ್,ಮಾ.28: ಇಟಲಿಯಲ್ಲಿ ಒಂದೇ ದಿನ ಕೊರೋನ ವೇರಸ್ ಸೋಂಕಿನಿಂದ ಸುಮಾರು 1 ಸಾವಿರ ಮಂದಿ ಬಲಿಯಾಗಿದ್ದಾರೆ.

ಕೊರೋನ  ಸೋಂಕಿನಿಂದ ಇಟಲಿಯಲ್ಲಿ  ಶುಕ್ರವಾರ ಒಂದೇ ದಿನ ಕೊರೋನ ವೈರಸ್  ಸೋಂಕಿನಿಂದ  1,000 ಮಂದಿ ಮೃತಪಟ್ಟಿದ್ದಾರೆ. ವಿಶ್ವದ ಯಾವುದೇ ದೇಶದಲ್ಲೂ ಒಂದೇ ದಿನ ಅಷ್ಟೊಂದು ಭಾರೀ ಪ್ರಮಾಣದಲ್ಲಿ ಸಾವು ಸಂಭವಿಸಿಲ್ಲ.  ತಜ್ಞರು ಹೇಳುವಂತೆ ಇಟಲಿಯಲ್ಲಿ  ಸೋಂಕು ಪೀಡಿತರ ಸಂಖ್ಯೆ  ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ

ಕೊರೋನ ಸೋಂಕಿತ ಪ್ರಕರಣಗಳ ಸಂಖ್ಯೆ 86,500 ಕ್ಕೆ ಏರಿದೆ. ಯುನೈಟೆಡ್ ಸ್ಟೇಟ್ಸ್ ಅಥವಾ ಚೀನಾಕ್ಕಿಂತಲೂ ಹೆಚ್ಚು  ಇಲ್ಲಿ ದಾಖಲಾಗಿದೆ.  ಡಿಸೆಂಬರ್‌ನಲ್ಲಿಮೊದಲ  ಕೊರೋನ ಸೋಂಕು ಪ್ರಕರಣ ಇಟಲಿಯಲ್ಲಿ ಪತ್ತೆಯಾಗಿತ್ತು

ಇಟಲಿಯಲ್ಲಿ  ಕೊರೋನ ಸೋಂಕಿನಿಂದ  ಸಾವಿನ  ಸಂಖ್ಯೆ 9,134 ಕ್ಕೆ ಏರಿದೆ ಎಂದು ನಾಗರಿಕ ಸಂರಕ್ಷಣಾ ಸಂಸ್ಥೆ ತಿಳಿಸಿದೆ.

ಅಮೆರಿಕದಲ್ಲಿ ಸೋಂಕಿತರು  1,04,256 ಮಂದಿ ಮತ್ತು ಸಾವು 1,704, ಚೀನಾ ಸೋಂಕಿತರು 81, 394  ಮತ್ತು ಸಾವು 3,295, ಸ್ಪೇನ್ ನಲ್ಲಿ   ಸೋಂಕಿತರು 65, 719 ಮತ್ತು ಸಾವು 5,138 ಮಂದಿ .

Please follow and like us:
error