ಇಂದು 308 ಹೊಸ ಪ್ರಕರಣಗಳು : ರಾಜ್ಯದಲ್ಲಿ 3175 ಆಕ್ಟಿವ್ ಕೇಸ್ ಗಳು

ಬೆಂಗಳೂರು : ರಾಜ್ಯದಲ್ಲಿ ಕರೋನಾ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು ಇಂದು ಹೊಸದಾಗಿ 308 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಇಡೀ ರಾಜ್ಯದಲ್ಲಿ  ಸದ್ಯ 3175 ಆಕ್ಟಿವ್ ಕೇಸ್ ಗಳು  ಇವೆ. ಕೋವಿಡ್ ನಿಂದಾಗಿ 3 ಜನ ಸಾವನ್ನಪ್ಪಿದ್ದಾರೆ. ಕಲ್ಬುರ್ಗಿಯಲ್ಲಿ ಮತ್ತೆ 99 , ಯಾದಗಿರಿ 66,ಬೀದರ್ 48 ಮತ್ತು  ಉಡುಪಿಯಲ್ಲಿ 45 ಪ್ರಕರಣಗಳು ಪತ್ತೆಯಾಗಿವೆ.  ರಾಜ್ಯದಲ್ಲಿ ಒಟ್ಟು 5760 ಪಾಜಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.  ಇದರಲ್ಲಿ 2519 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 14 ಜನ ಐಸಿಯುವಿನಲ್ಲಿ ದಾಖಲಾಗಿದ್ಧಾರೆ ಎಂದು ರಾಜ್ಯ ಆರೋಗ್ಯ ಮತ್ತು  ಕುಟುಂಬ ಕಲ್ಯಾಣ  ಇಲಾಖೆ ತಿಳಿಸಿದೆ.

Please follow and like us:
error