fbpx

ಇಂದು 189 ಪಾಜಿಟಿವ್ ,ಇಬ್ಬರ ಸಾವು : ಒಟ್ಟು ಪಾಜಿಟಿವ್ ಪ್ರಕರಣಗಳು 2222

ಕನ್ನಡನೆಟ್  ನ್ಯೂಸ್ ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಹಾವಳಿ ಮುಂದುವರೆದಿದ್ದು ಇಂದು 189 ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಇಡೀ ಜಿಲ್ಲೆಯಲ್ಲಿ ಇದುವರೆಗೆ 2222 ಪ್ರಕರಣಗಳು ವರದಿಯಾದಂತಾಗಿದೆ. ಇಂದು ಇಬ್ಬರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಗಂಗಾವತಿ ತಾಲೂಕಿನಲ್ಲಿ 90, ಕೊಪ್ಪಳ ತಾಲೂಕಿನಲ್ಲಿ 62, ಕುಷ್ಟಗಿ 26, ಯಲಬುರ್ಗಾ ತಾಲೂಕಿನಲ್ಲಿ 11 ಪ್ರಕರಣಗಳು ಬಂದಿವೆ. ಇಂದು 110 ಜನರನ್ನು ಡಿಸ್ಚಾರ್ಜ ಮಾಡಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 1170ಕ್ಕೆ ಏರಿದೆ. 643 ಜನ ಹೋಮ್ ಐಸೋಲೇಷನ್ ನಲ್ಲಿದ್ದಾರೆ.  ಇನ್ನೂ 1799 ಜನರ ರಿಜಲ್ಟ್ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್  ವಿಶಾಲ್ ಕಿಶೋರ್ ತಿಳಿಸಿದ್ಧಾರೆ.

Please follow and like us:
error
error: Content is protected !!