ಆಶಾ ಕಾರ್ಯಕರ್ತೆಯರ ರಾಜ್ಯವ್ಯಾಪಿ ಅನಿರ್ದಿಷ್ಟ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ

ಆಶಾ ಕಾರ್ಯಕರ್ತೆಯರ ರಾಜ್ಯವ್ಯಾಪಿ ಅನಿರ್ದಿಷ್ಟ ಆರೋಗ್ಯ ಸೇವೆ ಸ್ಥಗಿತಗೊಳಿಸಿ  ಹೋರಾಟ– ಡಿ.ಎಚ್.ಓ ಮನವಿ.

ಇಂದು ರಾಜ್ಯವ್ಯಾಪಿ ಆಶಾ ಕಾರ್ಯಕರ್ತೆಯರ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟದ ಭಾಗವಾಗಿ ಕೊಪ್ಪಳದ ನೂರಾರು ಆಶಾ ಕಾರ್ಯಕರ್ತೆಯರು ಮಾನ್ಯ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.  ನಿಂಗರಾಜ್ ಅವರಿಗೆ ಸಲ್ಲಿಸಿದರು. ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿ ಹಿಂದಿನಿಂದ ನಾವು ಯಾವುದೇ ಕೆಲಸಕ್ಕೆ ಹಾಜರಾಗುವುದಿಲ್ಲ ಇಂಥ ನಿರ್ಧಾರಕ್ಕೆ ಬರಲು ಸರ್ಕಾರವೇ ಹೊಣೆ ಹಾಗಾಗಿ ನಾವು ಅನಿರ್ದಿಷ್ಟ ಮುಂದಾಗಿದ್ದೇವೆ ಎಂದು  ತಮ್ಮ ಸಮಸ್ಯೆಗಳನ್ನುಅಧಿಕಾರಿಗಳ ಮುಂದೆ ಬಿಚ್ಚಿಟ್ಟರು.
ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹12000 ರೂ  ಖಾತ್ರಿಪಡಿಸಬೇಕು, ಕೋವಿಡ್ 19 ರ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷಣಾ ಸಾಮಗ್ರಿಗಳನ್ನು ನೀಡಬೇಕು, ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಎ.ಐ.ಯು.ಟಿ.ಯು.ಸಿ ಸಂಯೋಜಿತ ಗೊಂಡಿರುವ ಕೇಂದ್ರ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ರಾಜ್ಯವ್ಯಾಪಿಯಾಗಿ ಜೂನ್ 30ರಂದು ಮತ್ತು ಕಳೆದ ಒಂದು ವಾರದಿಂದ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ  ಮತ್ತು ರಾಜ್ಯದ ಹಲವಾರು ಸಚಿವರಿಗೆ ಮತ್ತು ಶಾಸಕರಿಗೆ ಖುದ್ದಾಗಿ ಆಶಾ ಕಾರ್ಯಕರ್ತೆಯರು ಅವರವರ ಕ್ಷೇತ್ರಗಳಲ್ಲಿ ಮನವಿ ಸಲ್ಲಿಸಿ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗಿತ್ತು.

 ಹಾಗೆಯೇ ಕಳೆದ ಜನವರಿ ತಿಂಗಳಿನಿಂದ ಸರ್ಕಾರಕ್ಕೆ 10 ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.. ಆಶಾ ಕಾರ್ಯಕರ್ತೆಯರ ಸಂಘದ ಮನವಿ ಪತ್ರ ಗಳಲ್ಲಿನ ವಿಷಯಗಳ ಕುರಿತು ಚರ್ಚಿಸಲು ಈ ವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ರಾಜ್ಯದಾದ್ಯಂತ 10 ಜುಲೈ 2020ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರ ತೀವ್ರ ಹೋರಾಟ ನಡೆಸಲಿದ್ದಾರೆ. ಇತ್ತೀಚಿಗೆ ಕೇಂದ್ರ ಆರೋಗ್ಯ ಸಚಿವಾಲಯ ಕೋರೋನ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿರುವುದಕ್ಕೆ ಆಶಾ ಕಾರ್ಯಕರ್ತೆಯರ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಪತ್ರಿಕಾ ಬಿಡುಗಡೆ ಮಾಡಿದೆ. ಕೋರೋನ  ತಡಿಯುವ  ಹೋರಾಟದ ಯಶಸ್ಸಿಗೆ ಆಶಾ ಕಾರ್ಯಕರ್ತೆಯರು ಆಧಾರಸ್ತಂಭಗಳು. ರಾಜ್ಯದ 42000 ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿ ಅಂತರ್ರಾಜ್ಯ ಪ್ರಯಾಣಿಕರು ವಲಸೆ ಕಾರ್ಮಿಕರು ಮತ್ತು ಸ್ಕ್ರೀನಿಂಗ್ ಮಾಡಿ ಸೋಂಕು ಪತ್ತೆ ಹಚ್ಚುವಲ್ಲಿ ಸಕ್ರಿಯವಾಗಿರುವ ಎಂದು ಕೊಂಡಾಡಿದ್ದಾರೆ. ಹಿರಿಯ ನಾಗರಿಕರು ಹೈ ರಿಸ್ಕ್  ವರ್ಗದವರ ಸಮೀಕ್ಷೆ ನಡೆಸಿ ಗಂಭೀರ ರೋಗ ಇರುವವರನ್ನು ಪತ್ತೆಹಚ್ಚಲಾಗಿದೆ. ಸುಮಾರು 1.59 ಕೋಟಿ ಮನೆಗಳ ಸಮೀಕ್ಷೆ ನಡೆಸಿರುತ್ತಾರೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ಮಾಹಿತಿ ಸಂಗ್ರಹಿಸುವುದರಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗಿದೆ ಎಂದು ಶ್ಲಾಗಿಸಲಾಗಿದೆ. ಜೊತೆಗೆ ಸ್ಥಳೀಯ ಮಟ್ಟದಲ್ಲಿ ಟಾಸ್ಕ್ ಫೋರ್ಸ್  ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಫೀವರ್,  ಕ್ಲೀನಿಕ್ ಸ್ವಾಬ್ ಸಂಗ್ರಹ ಕೇಂದ್ರಗಳಲ್ಲಿ ಅಂತರಾಷ್ಟ್ರೀಯ ಅಂತರರಾಜ್ಯ ಚೆಕ್ ಪೋಸ್ಟ್ ಗಳಲ್ಲೂ ಇವರು ಸ್ಕ್ರೀನಿಂಗ್ ತಂಡಗಳ ಜೊತೆಗೆ ಕೆಲಸ ಮಾಡಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಇಂತಹ ಇನ್ನೂ ಹಲವಾರು ಅಪಾಯಕಾರಿ ಕೆಲಸಗಳಲ್ಲಿ ಎದೆಗುಂದದೆ ಕಾರ್ಯನಿರ್ವಹಿಸಿರುತ್ತಾರೆ. ಕೇವಲ ಚಪ್ಪಾಳೆ ಹೂಮಳೆ ಈ ರೀತಿಯ ಮೆಚ್ಚುಗೆಗೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಖಂಡಿತವಾಗಿಯೂ ಸಂತಸವಿದೆ. ಆದರೆ ಕರೋನ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿರುವ ಆಶಾ ಕಾರ್ಯಕರ್ತೆಯರು ವೇತನವಿಲ್ಲದೆ, ರಕ್ಷಣೆಯಿಲ್ಲದೆ,  ಸಾಫ್ಟ್ವೇರ್ ಅವ್ಯವಸ್ಥೆಯಿಂದಾಗಿ ಬಳಲಿ ಬೆಂಡಾಗಿದ್ದಾರೆ . ದುಡಿತಕ್ಕೆ ತಕ್ಕ ಪ್ರತಿಫಲವಿಲ್ಲದೆ ಆಶಾಗಳು ಅನಿಶ್ಚಿತ ವೇತನದಿಂದ ಹೈರಾಣಾಗಿದ್ದು  ಸರ್ಕಾರ ಕೂಡಲೇ ಗೌರವಧನ ಹಾಗೂ ಪ್ರೋತ್ಸಾಹ ಧನ ಎರಡನ್ನು ಸೇರಿಸಿ ಹಾಗು ಆಶಾ ಕಾರ್ಯಕರ್ತೆಯರ ಸೇವೆಗೆ ಸಂದ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಾಸಿಕ ಕನಿಷ್ಠ 12000 ವೇತನವನ್ನು ನಿಗದಿ ಪಡಿಸಬೇಕು ಎಂಬುದು ರಾಜ್ಯದ ಸಮಸ್ತ ಆಶಾ ಕಾರ್ಯಕರ್ತೆಯರ ಒಕ್ಕೊರಲಿನ ಬೇಡಿಕೆ. ಆಶಾ ಕಾರ್ಯಕರ್ತೆಯರು ತಮ್ಮ ಜೀವನವನ್ನು ಪಣವಾಗಿಟ್ಟು ತಮ್ಮ ಜೀವನವನ್ನು ಅಪಾಯ ಒಡ್ಡುವುದರ  ಮೂಲಕ ಕೋವಿಡ್ -19ರ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಂಕಿತರ ನಡುವೆ ದಿನನಿತ್ಯವೂ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಯ ಜವಾಬ್ದಾರಿ ಸರಕಾರದ್ದಾಗಿದೆ. ಆಶಾ ಕಾರ್ಯಕರ್ತರನ್ನು ಆಯುಧಗಳಿಲ್ಲದೆ ಯುದ್ಧಕ್ಕೆ ಕಳಿಸಿದಂತಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಆರೋಗ್ಯವನ್ನು ರಕ್ಷಿಸಲು ಅಗತ್ಯವಿರುವ ರಕ್ಷಣಾ ಸಾಮಾಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಬೇಕೆಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ  ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ  ಸಂಘದ   ಎ.ಐ.ಯು.ಟಿ.ಯು.ಸಿ ಜಿಲ್ಲಾ ಅಧ್ಯಕ್ಷರು ಶರಣು ಗಡ್ಡಿ ಜಿಲ್ಲಾ ಕಾರ್ಯದರ್ಶಿಗಳಾದ ಕೌಶಲ್ಯ,  ಕಾರ್ಯಕರ್ತೆಯರಾದ ದ್ರಾಕ್ಷಾಯಿಣಿ, ವಿಜಯಲಕ್ಷ್ಮಿ, ರಜಿಯಾಬೇಗಂ, ಹುಲಿಗೆಮ್ಮ, ವಿಜಯಲಕ್ಷ್ಮಿ, ಲಲಿತ ಹಿರೇಮಠ್, ರೇಣುಕಾ, ಮುಂತಾದ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Please follow and like us:
error