ಆಶಾ ಕಾರ್ಯಕರ್ತೆಯರು ನಮ್ಮ ಜೀವವನ್ನು ಕಾಪಾಡಲು ವಿರುದ್ಧ ಹೋರಾಡುತ್ತಿದ್ದಾರೆ-ಶಾರದಾ ಪಾನಘಂಟಿ

Kannadnaet ನಮ್ಮ ಯೋಧರು ಗಡಿಯಲ್ಲಿ ನಮ್ಮನ್ನು ರಕ್ಷಿಸುತ್ತಿದ್ದರೆ ಇಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು ನಮ್ಮ ಜೀವವನ್ನು ಕಾಪಾಡಲು ಕೊರೋನಾ ಮತ್ತು ಇತರ ಖಾಯಿಲೆಗಳ ವಿರುದ್ಧವಾಗಿ ಹೋರಾಡುತ್ತಿದ್ದಾರೆ ಹಾಗಾಗಿ ಇವರನ್ನು ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಹೆಮ್ಮೆಯ ಕಾರ್ಯವಾಗಿದೆ ಎಂದು ಇನ್ನರ್‌ವೀಲ್‌ಕ್ಲಬ್ ಭಾಗ್ಯನಗರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಪಾನಘಂಟಿಯವರು ಹೇಳಿದರು.

ದಿ ೨೧ ಭಾಗ್ಯನಗರ ಇನ್ನರ್‌ವೀಲ್ ಕ್ಲಬ್ ವತಿಯಿಂದ ವಿಶ್ವಶಾಂತಿ ದಿನದ ಅಂಗವಾಗಿ ಭಾಗ್ಯಾನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಭಾಗ್ಯನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮುಖಾಂತರ ಉದ್ಘಾಟನೆ ಮಾಡಿ ಮಾತನಾಡಿದರು.

ಭಾಗ್ಯನಗರದ ಎಲ್ಲಾ ೧೯ ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿಗಳಿಗೆ ಅವರ ಕೊರೋನಾ ಕಾಲದ ಕಾರ್ಯವನ್ನು ಶ್ಲಾಘಿಸಿ ಅವರಿಗೆ ಮಾಸ್ಕ್, ಗ್ಲೌಸ್, ಫೇಸ್‌ಶೀಲ್ಡ್, ಬೆಡ್‌ಶೀಟ್‌ನೀಡಿ ಸನ್ಮಾನಿಸಲಾಯಿತು. ಇವುಗಳನ್ನು ಬೆಂಗಳೂರಿನ ಸಮಾಜ ಸೇವಕರಾದ ಜಗದೀಶ್ ಹೊಗೆತೊಪ್ಪಲ್ ಮತ್ತು ಬಾಲಾಜಿ ಹೊಗೆ ತೊಪ್ಪಲ್ ಸಹೋದರರು ಕಳುಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆರೋಗ್ಯ ಕೇಂದ್ರದ ಸಿಸ್ಟರ್ ರೋಜಾ ಹನ್ನಾ, ಗೋವಿಂದಪ್ಪ, ಸಾವಿತ್ರಿ ಮಹೇಂದ್ರಕರ್, ಮತ್ತು ಸಂಜೀವ್ ಆಗಮಿಸಿದ್ದರು. ಭಾಗ್ಯಾನಗರ ಇನ್ನರ್‌ವೀಲ್ ಕ್ಲಬ್ ಸದಸ್ಯರಾದ ಶೀಲಾ ಹಾಲ್ಕುರಿಕೆ, ಪದ್ಮಾ ಪಾನಘಂಟಿ, ಸುಮಾ ಮಹೇಶ್, ರೇಣುಕಾ ಶಾವಿ, ರೂಪಾ, ದೀಪಾ, ಸುಜಾತಾ, ಶಾಂತಾ ಗೌರಿಮಠ್, ಶುಭಾ, ಇವರುಗಳು ಆಶಾ ಕಾರ್ಯಕರ್ತೆಯರ ಕಾರ್ಯಕ್ಕೆ ಧನ್ಯವಾದಗಳನ್ನು ತಿಳಿಸಿದರು. ಜಯಮಾಲಾ ಶೆಡ್ಮಿ, ಕಾರ್ಯದರ್ಶಿಗಳಾದ ಸುನೀತಾ ಅಂಟಾಳಮರದ ವಂದನಾರ್ಪಣೆಯನ್ನು ಮಾಡಿದರು.

Please follow and like us:
error