ಆರ್ಥಿಕತೆಯ ದೊಡ್ಡ ಭಾಗ ಮುಕ್ತವಾಗಿದೆ, ಜನರು ಹೆಚ್ಚು ಜಾಗರೂಕತೆಯಿಂದಿರುವ ಅಗತ್ಯವೂ ಇದೆ-ಪ್ರಧಾನಿ ಮೋದಿ

ಹೊಸದಿಲ್ಲಿ, ಮೇ 31: ಆರ್ಥಿಕತೆಯ ದೊಡ್ಡ ಭಾಗ ಮುಕ್ತವಾಗಿದೆ. ಆರ್ಥಿಕತೆ ತೆರೆಯುತ್ತಿದ್ದಂತೆಯೇ ಹೆಚ್ಚಿನ ಎಚ್ಚರಿಕೆವಹಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒತ್ತಿ ಹೇಳಿದರು. ತಮ್ಮ ಮಾಸಿಕ ಭಾಷಣ ‘ಮನ್‌ಕೀ ಬಾತ್‌’ನಲ್ಲಿ ರವಿವಾರ ಮಾತನಾಡಿದ ಪ್ರಧಾನಿ ಮೋದಿ, ಆರ್ಥಿಕತೆಯ ದೊಡ್ಡ ಭಾಗ ಮುಕ್ತವಾಗಿದೆ. ಜನರು ಹೆಚ್ಚು ಜಾಗರೂಕತೆಯಿಂದಿರುವ ಅಗತ್ಯವೂ ಇದೆ ಎಂದರು. ಶನಿವಾರ ಕೇಂದ್ರ ಸರಕಾರವು ಐದನೆ ಹಂತದ ಲಾಕ್‌ಡೌನ್‌ನ್ನು ಜೂನ್ 30ರ ತನಕ ವಿಸ್ತರಿಸಿತ್ತು. ಜೂನ್ 8ರಿಂದ ಮಾರುಕಟ್ಟೆಗಳು ಮುಕ್ತವಾಗಿದ್ದು, ರೈಲು, ರಸ್ತೆ ಹಾಗೂ ವಾಯು ಮಾರ್ಗಗಳ ಸಾರಿಗೆಯನ್ನು ಮರು ಆರಂಭಿಸಲಾಗುತ್ತದೆ. ಮಾಲ್‌ಗಳು, ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಪೂಜಾಸ್ಥಳಗಳು ಮತ್ತೆ ಆರಂಭವಾಗಲಿದೆ. ಹೆಚ್ಚಿನ ಕೊರೋನ ವೈರಸ್ ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಇವೆಲ್ಲವುದಕ್ಕ್ಕೆ ಅವಕಾಶವಿಲ್ಲ. ಈ ಹಿಂದೆ ನಿಷೇಧಿಸಲಾಗಿದ್ದ ಎಲ್ಲ ಚಟುವಟಿಕೆಗಳನ್ನು ಹಂತಹಂತವಾಗಿ ಸಡಿಸಲಾಗುತ್ತಿದ್ದು, ಗೃಹ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ನೀಡಿದೆ.

Please follow and like us:
error