ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅವಶ್ಯ- ರಾಘವೇಂದ್ರ ಹಿಟ್ನಾಳ

ಎರಡೇ ಬಾಲಿಗೆ ಔಟಾದ ಶಾಸಕ ಹಿಟ್ನಾಳ : ಕೆ.ಎಂ.ಸಯ್ಯದ್ ಮ್ಯಾನ್ ಆಫ್ ದಿ ಮ್ಯಾಚ್

 

ಕೊಪ್ಪಳ : ಆಟ ಎಂದರೆ ಕೇವಲ ಕ್ರಿಕೆಟ್ ಒಂದೇ ಎನ್ನುವಂತಾಗಿದೆ. ಜನ ಎಲ್ಲ ಕೆಲಸಗಳನ್ನು ಬಿಟ್ಟು ಟಿವಿಮುಂದೆ ಕೂಡುತ್ತಾರೆ. ಆದರೆ ನಮ್ಮ ಗ್ರಾಮೀಣ ಕ್ರಿಡೆಗಳಾದ ಲಗೋರಿ, ಚಿನ್ನಿದಾಂಡು, ಖೋಖೋ, ಕಬಡ್ಡಿಯಂತಹ ಆಟಗಳನ್ನು ಆಡಬೇಕು. ಒಳ್ಳೆಯ ಆರೋಗ್ಯಕ್ಕಾಗಿ ಕ್ರೀಡೆ ಬಹಳ ಮುಖ್ಯ. ಕ್ರೀಡಾಂಗಣ ಬಹಳಷ್ಟು ಇನ್ನೂ ಡೆವಲಪ್ ಆಗಬೇಕಿದೆ. ತಾಲೂಕು ಮಟ್ಟದಲ್ಲಿ ಒಳ್ಳೆಯ ಕ್ರೀಡಾಂಗಣ ಅಭಿವೃದ್ದಿ ನಮ್ಮ ಕನಸಾಗಿದೆ. ಕರೋನಾ ಕಾರಣದಿಂದ ಅನುದಾನ ಕಡಿಮೆ ಬಂದಿದೆ.  ಸ್ಪೇಕ್ಟೇಟರ್ ಗ್ಯಾಲರಿ ಮಾಡೋಣ ಎಂದು ಶಾಸಕ ರಾಘವೇಂದ್ರ  ಹಿಟ್ನಾಳ ಹೇಳಿದರು.

ಶ್ರೀಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ರಾಜ್ಯಮಟ್ಟದ ಹಾರ್ಡ್ ಟೆನಿಸ್ ಕ್ರಿಕೆಟ್ ಪಂದ್ಯವನ್ನು  ಉದ್ಘಾಟನೆ ಮಾಡಿದ ನಂತರ ಮಾತನಾಡಿದರು. ನಂತರ ನಡೆದ ಪೋಲಿಸರೊಂದಿಗಿನ ಪ್ರೆಂಡ್ಲಿ ಮ್ಯಾಚಿನಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಬ್ಯಾಟಿಂಗ್ ಮಾಡಲು ಪಿಚ್ ಗೆ ಇಳಿದಿರು.ಬಹಳಷ್ಟು ನಿರೀಕ್ಷೆಯೊಂದಿಗೆ ಅಖಾಡಕ್ಕಿಳಿದಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.  ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ವಿಶೇಷ ಆಸಕ್ತಿ ಇರುವ ಶಾಸಕ ರಾಘವೇಂದ್ರ ಹಿಟ್ನಾಳರ ಬಗ್ಗೆ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಮೂಡಿತ್ತು.     ಒಂದು ಬಾಲ್ ನ್ನು ಎದುರಿಸಿದ ನಂತರ ಎರಡನೇ ಬಾಲ್ ನ್ನು ಎದುರಿಸುವ ವೇಳೆ  ಬಾಲರ್ ಮಲ್ಲನಗೌಡರ ಕೈಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.  ಇದು ಹಿಟ್ನಾಳ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಇದಕ್ಕೂ ಮೊದಲು ಪಂದ್ಯಾವಳಿಯನ್ನು ಉದ್ಘಾಟಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್  ಮಾತನಾಡಿ ಆಯೋಜಕರು ಮತ್ತು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.  ಆಟದಲ್ಲಿ ಸೋಲು ಗೆಲವು ಸಹಜ ಅದನ್ನು ಸ್ವೀಕರಿಸುವ ಮನಸ್ಥಿತಿ ಕ್ರೀಡಾಪಟುಗಳಿಗೆ ಇರಬೇಕು ಎಂದು ಹೇಳಿದರು.  ಆಯೋಜಕರವತಿಯಿಂದ ಎಸ್ಪಿ ಟಿ.ಶ್ರೀಧರ, ಶಾಸಕ ರಾಘವೇಂದ್ರ ಹಿಟ್ನಾಳ, ಕೆ.ಎಂ.ಸಯ್ಯದ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಮಾನ್ವಿ ಪಾಷಾ, ಸಾಧಿಕ್ ಅತ್ತಾರ್, ರಾಜು ನಾಯಕ್ ( ಕುಕನೂರು), ಸೇರಿದಂತೆ ಇತರರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.  40 ತಂಡಗಳು ನೋಂದಣಿ ಮಾಡಿಕೊಂಡಿವೆ

ಕೆ.ಎಂ.ಸಯ್ಯದ್ ರ ಅದ್ಭುತ ಬಿರುಗಾಳಿ ಬೌಲಿಂಗ್ ಗೆ ಪೊಲಿಸ ತಂಡ ತತ್ತರಿಸಿದರೆ, ರಾಜು ನಾಯಕ ಕುಕನೂರ ಅದ್ಬುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು.   ಅಂತಿಮವಾಗಿ  ಮಹಾಂತೇಶ ಮೈನಳ್ಳಿ ನಾಯಕತ್ವದ ಶಾಸಕರ  ತಂಡ 5 ರನ್ ಗಳಿಂದ ಜಯ ಸಾಧಿಸಿತು.  ಕೆ.ಎಂ.ಸಯ್ಯದ್ ಮ್ಯಾನ್ ಆಫ್ ದಿ ಮ್ಯಾಚ್ ಆದರು. 3 ಓವರನಲ್ಲಿ 2 ಓವರ ಮೇಡನ್ ಮಾಡಿ 2 ವಿಕೆಟ್ ಪಡೆದರು.  ಶಾಸಕರ ತಂಡ 64, ಪೋಲಿಸರ ತಂಡ 59 ಆಲ್ ಔಟ್ ಆದರು.

ಈ ಸಂದರ್ಭದಲ್ಲಿ ಡಾ.ಮಹೇಂದ್ರ  ಕಿಂದ್ರೆ, ಕಾಟನ್ ಪಾಷಾ,  ಗವಿಸಿದ್ದಪ್ಪ ಕರಡಿ, ಆದಿಲ್ ಪಟೇಲ್ ಶ್ರವಣಕುಮಾರ್, ಮಹೆಮೂದ ಹುಸೇನ್ ( ಬಲ್ಲೆ),  ಚಿಕನ್ ಪೀರಾ ಸೇರಿದಂತೆ ಇತರರು ವೇದಿಕೆಯಮೇಲಿದ್ದರು.

Please follow and like us:
error