ಆರೋಗ್ಯಕರ ಸಮಾಜ ನಿರ್ಮಾಣವೇ ವಿಶ್ವ ಆರೋಗ್ಯ ದಿನಾಚರಣೆ ಉದ್ದೇಶ :


ಕೊಪ್ಪಳ, : ಇಂದು ವಿಶ್ವದಾದ್ಯಂತ “ವಿಶ್ವ ಆರೋಗ್ಯ ದಿನಾಚರಣೆ” ಆಚರಿಸಲಾಗುತ್ತಿದ್ದು, ಇದರ ಉದ್ದೇಶ ಎಲ್ಲಾ ರಾಷ್ಟç ಮತ್ತು ರಾಜ್ಯಗಳಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಹೇಳಿದರು.
 ಯಲಬುರ್ಗಾದಲ್ಲಿ ಬುಧವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಛೇರಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಯಲಬುರ್ಗಾ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ವಿಶ್ವ ಆರೋಗ್ಯ ಸಂಸ್ಥೆಯು 1945ರಲ್ಲಿ ಸ್ಥಾಪನೆಯಾಯಿತು. 1948 ರಲ್ಲಿ ಜಗತ್ತಿನ 166 ರಾಷ್ಟçಗಳು ಸದಸ್ಯತ್ವ ಪಡೆದು ಸದೃಢ ರಾಷ್ಟç ನಿರ್ಮಾಣ ಮಾಡಲು ಮುಂದೆ ಬಂದವು. ಅದೇ ವರ್ಷ ಏಪ್ರಿಲ್ 07 ರಂದು “ವಿಶ್ವ ಆರೋಗ್ಯ ದಿನಾಚರಣೆ” ಕಾರ್ಯಕ್ರಮವನ್ಮ್ನ ಪ್ರತಿ ವರ್ಷ ಒಂದು ಘೋಷ ವಾಕ್ಯದೊಂದಿಗೆ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಂದಿನಿAದ ಇವತ್ತಿನವರೆಗೂ ಪ್ರತಿ ವರ್ಷ ಏಪ್ರಿಲ್-07 ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ.
 ಈ ವರ್ಷದ ಘೋಷಣೆ ಸುಂದರವಾದ ಆರೋಗ್ಯಕರ ಜಗತ್ತನ್ನು ನಿರ್ಮಿಸುವುದು ಎಂಬುವ್ಯದಾಗಿದೆ. ಅಂದರೆ ಕೋವಿಡ್-19 ಕಾಯಿಲೆಯಿಂದ ಎಲ್ಲಾ ರಾಷ್ಟçಗಳು ಆರೋಗ್ಯ ದೃಷ್ಠಿಯಿಂದ ಹಾಗೂ ಆರ್ಥಿಕವಾಗಿ ಬಲಹೀನವಾಗಿವೆ. ಕೋವಿಡ್-19 ನಿಯಂತ್ರಣ, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳಿಂದ ಜನರ ಆರೋಗ್ಯವನ್ನು ರಕ್ಷಿಸುವುದು ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಇಲಾಖೆ ಯೋಜನೆಗಳ ಸದುಪಯೋಗ ಪಡೆದುಕೊಂಡು, ದೇಶವನ್ನು ರೋಗಮುಕ್ತಗೊಳಿಸಿ ಸುಂದರವಾದ ಅಥವಾ ಆರೋಗ್ಯಕರವಾದ ವಾತಾವರಣವನ್ನು ನಿರ್ಮಿಸಿ ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಎಂಬ ಮಂತ್ರದೊAದಿಗೆ ವಿದ್ಯಾರ್ಥಿಗಳು ನಿಮ್ಮ ನಿಮ್ಮ ಗ್ರಾಮಗಳಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
 ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಚ್.ಹೆಚ್ ಮಾತನಾಡಿ, ಕೋವಿಡ್ ಕಾಯಿಲೆ ಹರಡುವಿಕೆ, ಅದರ ಲಕ್ಷಣಗಳು, ಚಿಕಿತ್ಸೆ, ಮುಂಜಾಗ್ರತಾ ಕ್ರಮ, ಕೋವಿಡ್ ಲಸಿಕೆ ಕುರಿತು ವಿವರಿಸಿದರು.
 ಹಿರಿಯ ಆರೋಗ್ಯ ಸಹಾಯಕ ಚನ್ನಬಸಯ್ಯ ಅವರು ಸಾಂಕ್ರಾಮಿಕ ರೋಗದ ಕುರಿತು, ಪ್ರಭಾರಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಶೋಕ ಆಲೂರ ಅವರು ರಾಷ್ಟಿçÃಯ ಫ್ಲೋರೋಸಿಸ್ ನಿಯಂತ್ರಣ ಹಾಗೂ ನಿವಾರಣಾ ಕಾರ್ಯಕ್ರಮ ಕುರಿತು, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಇಮ್ತಿಯಾಜ್ ನೆವಾರ್ ಇವರು ಸೊಳ್ಳೆಯಿಂದ ಹರಡುವ ಮಲೇರಿಯಾ, ಡೆಂಗ್ಯೂ, ಚಿಕನ್‌ಗೂನ್ಯ, ಆನೆಕಾಲು ರೋಗ, ಮೆದುಳು ಜ್ವರ ಕುರಿತು ಮಾತನಾಡಿದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶರಣಪ್ಪ ಬೇಲೇರಿ ವಹಿಸಿದ್ದರು. ಕಾಲೇಜಿನ ಸಹ-ಉಪನ್ಯಾಸಕರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please follow and like us:
error