ಆತ್ಮಸ್ಥೈರ್ಯ ಹೆಚ್ಚಿಸುತ್ತಿದೆ  ಗವಿಮಠದ ಕೋವಿಡ್ ಕೇರ್ ಸೆಂಟರ್

KannadanetNEWS  ಸಂಕಷ್ಟದ ಕಾಲದಲ್ಲಿ 100 ಬೆಡ್ ನ ಕೋವಿಡ್ ಆಸ್ಪತ್ರೆ ತೆರೆದಿರೋ‌ ಕೊಪ್ಪಳದ ಗವಿಮಠ, ಚಿಕಿತ್ಸಾ ವಿಧಾನದಲ್ಲೂ ಸೈ ಎನಿಸಿಕೊಂಡಿದೆ. ಶ್ರೀಮಠದ‌ ಕೋವಿಡ್ ‌ಆಸ್ಪತ್ರೆಯಲ್ಲಿನ ಸೋಂಕಿತರು ದೇಹದ ಜೊತೆಗೆ ಮನಸ್ಸಿಗೂ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಡ್ ಮೇಲೆಯೇ ಯೋಗ ಮಾಡ್ತಿರೋ ದೃಶ್ಯ. ‌ಆಸ್ಪತ್ರೆ ಆವರಣದಲ್ಲಿ ವ್ಹಾಲಿಬಾಲ್, ರಿಂಗ್ ಬಾಲ್ ಆಟದಲ್ಲಿ‌ ತೊಡಗಿರೋ ರೋಗಿಗಳು.‌ ಈ ದೃಶ್ಯ‌ಗಳು ಯಾವುದೋ ಒಂದು ಫಿಜಿಯೋ ತೆರಫಿ ಕೇಂದ್ರದ‌ಲ್ಲ. ಕೊಪ್ಪಳ ಗವಿಮಠದ ಆವರಣದಲ್ಲಿನ ಕರೋನ ಆಸ್ಪತ್ರೆಯಲ್ಲಿ ಪ್ರತಿ ದಿನ ಕಂಡು ಬರುವ ದೃಶ್ಯಗಳಿವು.

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳ ಮೇಲುಸ್ತುವಾರಿಯಲ್ಲಿ ನಡೆಯುತ್ತಿರೋ ಕೋವಿಡ್ ಆಸ್ಪತ್ರೆಯಲ್ಲಿ ಕೇವಲ ರೋಗಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿಲ್ಲ. ಬದಲಾಗಿ ಅವರ ಮನಸ್ಸಿಗೂ ಚಿಕಿತ್ಸೆ ನೀಡುವ ಮೂಲಕ ಕರೋನ ಸೋಂಕಿತರಲ್ಲಿನ ಆತಂಕ, ದುಗುಡ ದೂರ ಮಾಡುತ್ತಿದ್ದಾರೆ. ಸೋಂಕಿತರಿಗೆ ಅವರ ಆಸಕ್ತಿಗೆ ತಕ್ಕದಂತೆ‌ ಕೇರಂ ಬೋರ್ಡ್, ‌ವ್ಹಾಲಿಬಾಲ್,‌ ರಿಂಗ್ ಬಾಲ್ ಆಟ ಆಡಿಸುವ ಜೊತೆಗೆ ‌ಯೋಗ ಮಾಡಿಸುತ್ತಿದ್ದಾರೆ. ಶ್ರೀಮಠದ ಆಸ್ಪತ್ರೆಯಲ್ಲಿನ ಸೋಂಕಿತರಿಗೆ ಪ್ರತಿ ದಿನವೂ ವೈಯಕ್ತಿಕ ಆಪ್ತ ಸಮಾಲೋಚನೆ ನಡೆಯುತ್ತಿದೆ. ಆಟದ ಜೊತೆಗೆ ಸೋಂಕಿತರು ಮಾನಸಿಕವಾಗಿ ಸದೃಢವಾಗುವಂತೆ ಸ್ವತಃ ಗವಿಸಿದ್ದೇಶ್ವರ ಸ್ವಾಮೀಜಿಗಳು ಸೇರಿ ವಿವಿಧ ಸ್ವಾಮೀಜಿಗಳ ಭಾಷಣದ ‌ಧ್ವನಿ ಮುದ್ರಣ‌‌ ಪ್ಲೇ ಮಾಡುತ್ತಾರೆ. ಜೊತೆಗೆ ಆಪ್ತ ಸಮಾಲೋಚಕರು ರೋಗಿ ಕೇಳಿದಾಗಲೆಲ್ಲ ಅವರ ಮನೆಯವರಿಗೆ ವಿಡಿಯೋ ಕರೆ ಮಾಡಿ, ಮಾತನಾಡಿಸುತ್ತಾರೆ. ಇದು ರೋಗಿಗಳ ಕುಟುಂಬ‌ದವರ ಮೆಚ್ಚುಗೆಗೆ ಪಾತ್ರವಾಗಿದೆ. ಗವಿಸಿದ್ದೇಶ್ವರ ಸ್ವಾಮೀಜಿಗಳು ಇಷ್ಟಕ್ಕೆ ಸುಮ್ಮನಾಗದೇ ಮತ್ತೇ‌ 200 ಬೆಡ್ ಸಾಮರ್ಥ್ಯದ ಕೋವಿಡ್ ‌ಕೇರ್ ಸೆಂಟರ್ ಆರಂಭಿಸಿದ್ದಾರೆ. ಕೊಪ್ಪಳ ಗವಿಮಠದ ಕಾರ್ಯವನ್ನು ಸಿಎಂ ಬಿಎಸ್ ವೈ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಕೂಡ.

Please follow and like us:
error