ಆಡಿಯೋ ಪ್ರಕರಣ ಕುಮಾರಸ್ವಾಮಿ ಎ೧ ಆರೋಪಿ- ಜಗದೀಶ ಶೆಟ್ಟರ್

Koppal ಯಡಿಯ್ಯೂರಪ್ಪನವರ ಸಂಭಾಷಣೆಯನ್ನು ಸಿಎಂ ರೆಕಾರ್ಡ್ ಮಾಡಿಸಿ ಪೋನ್ ಕದ್ದಾಳಿಕೆ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರೇ ನಂಬರ್ 1 ಆರೋಪಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಸಿಡಿ ಬಿಡುಗಡೆಯಲ್ಲಿ ಮುಖ್ಯ ಪಾತ್ರಧಾರಿ ಸಿಎಂ ಕುಮಾರಸ್ವಾಮಿಯವರು, ಸಿಎಂ ಶರಣಗೌಡನಿಗೆ ರೆಕಾರ್ಡ್ ಮಾಡಲು ಹೇಳಿರುವುದು ಅಪರಾದ. ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಸಂಭಾಷಣೆ ಕೇಳಿರುವುದು ಕದ್ದಾಲಿಕೆಯಿಂದ. ಈ ಹಿಂದೆ ರಾಮಕೃಷ್ಣ ಹೆಗ್ಡೆ ಅವರು ಇಂತಹದ್ದೆ ಪ್ರಕರಣದಲ್ಲಿ ರಾಜೀನಾಮೆ ನೀಡಿದ್ದಾರೆ.

ಈ ಕಾರಣಕ್ಕಾಗಿಯೇ ಈ ಪ್ರಕರಣದಲ್ಲಿ ಕುಮಾರಸ್ವಾಮಿಯೇ ನಂಬರ್ 1 ಆರೋಪಿ ಎಂದ್ರು ವಾಗ್ದಾಳಿ ನಡೆಸಿದ್ರು. ನಾವೇನು ತನಿಖೆ ಮಾಡೋದು ಬೇಡ ಎಂದಿಲ್ಲ. ಆದ್ರೆ ಸಿಎಂ ಅವರು ರಾಜಕೀಯ ದ್ವೇಷ ಸಾಧನೆಗೆ ಎಸ್ಐಟಿ ತನಿಖೆ ಮಾಡಲು ಹೊರಟಿದ್ದಾರೆ, ಇದರಲ್ಲಿಯೂ ಸಹ ಸಿದ್ದರಾಮಯ್ಯನವರ ದ್ವಂದ ನಿಲುವು ಸ್ಪಷ್ಟವಾಗಿದೆ ಎಂದ್ರು. ನಮ್ಮೀಂದ ಯಾವುದೇ ಆಪರೇಷನ್ ಕಮಲ ನಡೆದಿಲ್ಲ. ಅವರಲ್ಲಿ ಭಿನ್ನಮತ ಇದೆ, ಭಿನ್ನಮತಿಯರೇ ಸರ್ಕಾರ ಪತನ ಮಾಡಿಕೊಂಡ್ರೆ ನಾವೇನು ಮಾಡೋಕೆ ಆಗಲ್ಲ ಎಂದು ಸಮ್ಮೀಶ್ರ ಸರ್ಕಾರಕ್ಕೆ ಶಾಕ್ ನಿಡಿದ್ರು. ಅಲ್ಲದೇ ದೇಶದ ಯೋಧರ ಮೇಲೆ ಉಗ್ರರು ದಾಳಿಗೆ ಪಾಕಿಸ್ತಾನದ ಕುಮ್ಮಕ್ಕು ಇದ್ದು, ಮೋದಿಯವರು ಉಗ್ರಗಾಮಿಗಳಿಗೆ, ಪಾಕಿಸ್ತಾನಕ್ಕೆ ಶಿಘ್ರದಲ್ಲಿಯೇ ತಕ್ಕಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಎ೧ ಕುಮಾರಸ್ವಾಮಿ ಎಂದು ಹೇಳಿದ ಜಗದೀಶ ಶೆಟ್ಟರ್ ಎ೨ ಮತ್ತು ಎ೩ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹೇಳಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಹಾಲಪ್ಪ ಆಚಾರ್, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಜಿ.ಪಂ ಅದ್ಯಕ್ಷ ವಿನಯಕುಮಾರ್ ಮೇಲಿನಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು‌

Please follow and like us:
error