ಆಕ್ಟೀವ್ ಮೋಡ್‌ನಲ್ಲಿ ಕೆಲಸಮಾಡಲು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ. ಸುನೀಲ್ ಕುಮಾರ ಸೂಚನೆ


ಕೊಪ್ಪಳ ಮಾ  :  ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗಧಿಯಾಗಿದ್ದು, ನೀತಿ ಸಂಹಿತೆ ಅನುಷ್ಠಾನಕ್ಕೆ ವಿವಿಧ ತಂಡಗಳನ್ನು ರಚಿಸಲಾಗಿದೆ. ಮಾರ್ಚ್. ೧೦ ರಿಂದ ಇಲ್ಲಿಯವರೆಗೆ ನೀತಿ ಸಂಹಿತೆಯ ಉಲ್ಲಂಘನೆ ಒಂದು ಪ್ರಕರಣ ಮಾತ್ರ ದಾಖಲಾಗಿದೆ. ಎಲ್ಲಾ ತಂಡಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಚುರುಕಾಗಿ ಕೆಲಸ ಮಾಡಲು ಸಿದ್ಧರಾಗಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ. ಸುನೀಲ್ ಕುಮಾರ್ ಸೂಚನೆ ನೀಡಿದರು.
ಅವರು (ಮಾ. ೨೦) ಜಿಲ್ಲಾ ಪಂಚಾಯಾತ್ ಸಭಾಂಗಣದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ಚುನಾವಣಾ ವೆಚ್ಚ ವೀಕ್ಷಣಾ ತಂಡ, ಎಫ್.ಎಸ್.ಟಿ., ವಿವಿಟಿ ಸೇರಿದಂತೆ ಎಂ.ಸಿ.ಎಂ.ಸಿ., ಎಂ.ಸಿ.ಸಿ. ತಂಡಗಳ ನೋಡಲ್ ಅಧಿಕಾರಿಗಳು ಮತ್ತು ತಂಡದ ಮುಖ್ಯಸ್ಥರೊಂದಿಗೆ ಚುನಾವಣಾ ಸಿದ್ಧತಾ ಪ್ರಗತಿ ಪರಿಶೀಲನೆ ನಡೆಸಿದರು.
ಚುನಾವಣೆ ಅಧಿಸೂಚನೆಗೆ ಕೆಲಸವೇ ದಿನಗಳ ಮಾತ್ರ ಬಾಕಿ ಇದ್ದು, ಅಷ್ಟರೊಳಗಾಗಿ ಎಲ್ಲಾ ತಂಡಗಳು ಸಹ ಆಕ್ಟೀವ್ ಮೋಡ್‌ಗೆ ಬರಬೇಕಾಗಿದೆ. ಎಲ್ಲಾ ತಂಡಗಳು ತಮ್ಮ ವರದಿಯನ್ನು ಆಯಾ ದಿನದಲ್ಲಿ ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳಿಗೆ ವರದಿ ಮಾಡಬೇಕಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಲ್ಲಿ ಎಲ್ಲಾ ತಂಡಗಳ ಪಾತ್ರ ಪ್ರಮುಖವಾಗಿದ್ದು, ಯಾವುದೇ ಉಲ್ಲಂಘನೆಯ ಪ್ರಕರಣದ ದೂರು ನೀಡುವಾಗ ಯಾವ ಕಾಯ್ದೆಯಡಿ ಹಾಗೂ ಸೆಕ್ಷನ್ ಅಡಿ ಉಲ್ಲಂಘನೆಯಾಗಿದೆ ಎಂಬುವುದನ್ನು ಉಲ್ಲೇಖಿಸಬೇಕು. ಹಾಗಿದ್ದಲ್ಲಿ ಮಾತ್ರ ಎಫ್.ಐ.ಆರ್. ದಾಖಲಾಗುತ್ತದೆ. ಇಲ್ಲದಿದ್ದಲ್ಲಿ ಅದು ಎನ್.ಸಿ.ಆರ್ ಅಥವಾ ದೂರಾಗಿ ಉಳಿಯುತ್ತದೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಪ್ರಜಾ ಪ್ರಾತಿನಿಧಿಕ ಕಾಯ್ದೆ, ಐಪಿಸಿ ಕಾಯ್ದೆ, ಸ್ಥಳೀಯ ಕಾಯ್ದೆಗಳು ಸೇರಿದಂತೆ ಅನ್ವಯಿಸುವ ಯಾವುದೇ ಕಾಯ್ದೆಯಡಿ ದೂರು ದಾಖಲಿಸಬಹುದಾಗಿದೆ. ಕಾಯ್ದೆ, ನಿಯಮಾವಳಿಗಳ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ತಂಡಗಳು ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಚುನಾವಣಾ ಘೋಷಣೆಯಾದ ದಿನಾಂಕದಿಂದ ಎಲ್ಲಾ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ಚುರುಕಾಗಬೇಕಾಗಿದೆ. ಅಕ್ರಮವಾಗಿ ಮದ್ಯ ಮಾರಾಟ, ಸಂಗ್ರಹಣೆ ಮಾಡಿದ್ದಲ್ಲಿ ಅಂತಹ ವ್ಯಕ್ತಿಗಳ ಮೇಲೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು. ಫ್ಲೈಯಿಂಗ್ ಸ್ಕ್ವಾಡ್ ಸ್ಥಳೀಯವಾಗಿ ಹೆಚ್ಚಿನ ಅಧ್ಯಯನ ಮಾಡಬೇಕಾಗಿದ್ದು, ಮಾಹಿತಿ ಸಂಗ್ರಹಿಸಿ ಎಲ್ಲಿ ಚುನಾವಣಾ ಅಕ್ರಮಗಳು ನಡೆಯುತ್ತಿವೆ ಎಂಬ ಮಾಹಿತಿ ಇದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಬಹುದಾಗಿದೆ. ಚುನಾವಣೆಗೆ ಸಂಬಂಧಿಸಿದ ಸಭೆ, ಸಮಾರಂಭಗಳು ನಡೆಯುವ ಬಗ್ಗೆ ಎಲ್ಲಾ ತಂಡಗಳಿಗೂ ಮಾಹಿತಿ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಮಾಹಿತಿ ನೀಡುವಂತಹ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಎಂ.ಸಿ.ಸಿ. ನೋಡಲ್ ಅಧಿಕಾರಿ ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ಡಿಎಫ್‌ಒ ಯಕ್ಷಪಾಲ ಕ್ಷೀರಸಾಗರ, ಅಪರ ಜಿಲ್ಲಾಧಿಕಾರಿ ಎಸ್.ಎಲ್. ಬಾಲಚಂದ್ರ ಉಪಸ್ಥಿತರಿದ್ದರು.

Please follow and like us:
error