ಅ 28, 29ರಂದು ಸಿಇಟಿ : ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಿಇಟಿ ಅಂಕಗಳನ್ನೇ ಪರಿಗಣನೆ

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಯುವ ಸಿಇಟಿ ಪರೀಕ್ಷೆ ಅಗಸ್ಟ್ 28, 29ರಂದು ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಮೊದಲ ದಿನ ಗಣಿತ, ಜೀವಶಾಸ್ತ್ರ ಹಾಗೂ ಎರಡನೇ ದಿನ ರಸಾಯನ ಶಾಸ್ತ್ರ, ಭೌತ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೂರನೇ ದಿನ ಪ್ರತ್ಯೇಕವಾಗಿ ಗಡಿನಾಡ ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜೂನ್ 15ರಿಂದ ನೋಂದಣಿ ಆರಂಭವಾಗುತ್ತದೆ. ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ದ್ವಿತಿಯ ಪಿಯು ಅಂಕ ಪರಿಗಣಿಸುವುದಿಲ್ಲ. ಸಿಇಟಿಯಲ್ಲಿ ಪಡೆದ ಅಂಕಗಳನ್ನೇ ಪರಿಗಣಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ

Please follow and like us:
error