Koppal ಮಹಿಳೆಯರು ನಲ್ಕುಗೋಡೆಯನ್ನು ದಾಟಿ ಸಾಕಷ್ಟು ಮುಂದುವರಿದಿದ್ದಾಳೆ ಅವಳ ಏಳಿಗೆಗೆ ಮುಟ್ಟು ತಡೆಯಾಗಬಾರದು. ಇದು ಅವಳ ಹಕ್ಕಾಗಿದೆ. ಹಾಗಾಗಿ ಮಹಿಳೆಯರೆಲ್ಲರೂ ಸ್ಯಾನಿಟರಿ ಪ್ಯಾಡ್ಗಳನ್ನು ಬಳಸಿ ಆರೋಗ್ಯವಂತ ಜೀವನ ನಡೆಸಬೇಕು ಎಂದು ಕೊಪ್ಪಳದ ಇನ್ನರ್ವೀಲ್ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಸುಜಾತಾ ಪಟ್ಟಣಶೆಟ್ಟಿ. ಹೇಳಿದರು. ಅವರು ಇನ್ನರ್ ವೀಲ್ ಕ್ಲಬ್ ಕೊಪ್ಪಳ ಹಾಗೂ ಪ್ರಕೃತಿ ಸೇವಾ ಸಂಸ್ಥೆಯ ಸಂಗಿನಿ ಪಿಂಕ್ ಪ್ಯಾಡ್ ವತಿಯಿಂದ ಶಿರಸಪ್ಪಯ್ಯನ ಮಠ ಕೊಪ್ಪಳ ಇಲ್ಲಿ ಕೊಪ್ಪಳದ ವಿವಿಧ ವಾರ್ಡ್ಗಳಿಂದ ಆಯ್ದ ೫೦ ಕಿಶೋರಿಯರಿಗೆ ಮುಟ್ಟಿನ ಅರಿವು ಮತ್ತು ಉಚಿತ ಸ್ಯಾನಿಟರಿ ಪ್ಯಾಡ್ಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಕ್ಕಳ ರಕ್ಷಣಾ ಅಧಿಕಾರಿ ಸಿಂಧು ಎಲಿಗಾರ್ ಇವರು ಮಾತನಾಡುತ್ತಾ, ಇದರಲ್ಲಿ ಮಹಿಳೆಯರು ಮುಜುಗರ ಪಡುವುದೇನಿಲ್ಲ. ಇದು ನೈಸರ್ಗಿಕ ಕ್ರಿಯೆ ಅಷ್ಟೇ ಅಲ್ಲದೇ ಇವು ಸಾವಯವ ಪ್ಯಾಡ್ಗಳಾಗಿದ್ದು ಆರೋಗ್ಯಕ್ಕೂ ನಿಸರ್ಗಕ್ಕೂ ಪೂರಕವಾಗಿದೆ ಎಂದರು. ಭಾರತಿ ಗುಡ್ಲಾನೂರು ಇವರು ಮಾತನಾಡುತ್ತಾ, ಮಹಿಳೆ ತನ್ನ ಮುಟ್ಟಿನ ವಿಚಾರಗಳನ್ನು ಯಾವುದೇ ಮುಜುಗರವಿಲ್ಲದೇ ಮಾತನಾಡುವುದು ಹಾಗೂ ಇದಕ್ಕೆ ಗಂಡಿನ ಸಹಕಾರ ಹೊಂದುವಂತೆ ಮಾಡುವುದು ನಮ್ಮ ಕಾರ್ಯಕ್ರಮದ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಕೊಪ್ಪಳದಲ್ಲಿ ಈ ನಿಟ್ಟಿನಲ್ಲಿ ಮುಟ್ಟಿನ ಕ್ರಾಂತಿಯಾಗಬೇಕು, ಅದಕ್ಕೆ ಈ ಕಾರ್ಯಕ್ರಮಕ್ಕೆ ಮುನ್ನುಡಿಯಾಗಬೇಕು ಎಂದರು. ಶೀಲಾ ಹಾಲ್ಕುರಿಕೆಯವರು ಮುಟ್ಟಿನ ಕುರಿತು ಹಾಡನ್ನು ಹಾಡಿದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಸಂಸ್ಥೆಯ ಎಲ್ಲಾ ಸದಸ್ಯರು ಪಾಲ್ಗೊಂಡು ನೆರೆದಿದ್ದ ೫೦ ಹೆಣ್ಣು ಮಕ್ಕಳಿಗೆ ಒಂದು ವರ್ಷಕ್ಕಾಗುವಷ್ಟು ೬೦೦ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸಿದರು.
ಮುಟ್ಟು ಮಹಿಳೆಯರ ಏಳಿಗೆಗೆ ತಡೆಯಾಗಬಾರದು-ಸುಜಾತಾ ಪಟ್ಟಣಶೆಟ್ಟಿ
Please follow and like us: