fbpx

ಅಯೋಧ್ಯೆ ಪ್ರಕರಣ: ವಾದವಿವಾದಗಳ ಬಳಿಕ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಅ.16: ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿರುವ ಅಯೋಧ್ಯೆ ಪ್ರಕರಣದಲ್ಲಿ ವಾದವಿವಾದಗಳು ಇಂದು ಮುಕ್ತಾಯಗೊಂಡಿದ್ದು, ಸರ್ವೋಚ್ಚ ನ್ಯಾಯಾಲಯವು ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿದೆ.

40 ದಿನಗಳ ಕಾಲ ವಾದವಿವಾದಗಳು ನಡೆದಿದ್ದು, ಪ್ರಕರಣದಲ್ಲಿಯ ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ ಧವನ್ ಅವರು ಶ್ರೀರಾಮನ ನಿಖರ ಜನ್ಮಸ್ಥಳವನ್ನು ತೋರಿಸಲು ಬಳಸಲಾಗಿದ್ದ ಚಿತ್ರಸಹಿತ ನಕ್ಷೆಯನ್ನು ಹರಿದು ಹಾಕುವುದರೊಂದಿಗೆ ನಾಟಕೀಯ ವಿದ್ಯಮಾನಗಳಿಗೆ ಅಂತಿಮ ದಿನದ ವಿಚಾರಣೆಯು ಸಾಕ್ಷಿಯಾಯಿತು.

ಸರ್ವೋಚ್ಚ ನ್ಯಾಯಾಲಯವು ಪ್ರಕರಣದಲ್ಲಿ ಲಿಖಿತ ಹೇಳಿಕೆಗಳನ್ನು ಸಲ್ಲಿಸಲು ಕಕ್ಷಿದಾರರಿಗೆ ಮೂರು ದಿನಗಳ ಕಾಲಾವಕಾಶವನ್ನು ನೀಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ನ.17ರಂದು ನಿವೃತ್ತರಾಗಲಿದ್ದು, ಅದಕ್ಕೂ ಮುನ್ನ ಪ್ರಕರಣದ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ಪ್ರಕರಣದ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಅಯೋಧ್ಯೆ ಜಿಲ್ಲೆಯಲ್ಲಿ ಡಿ.10ರವರೆಗೆ ಕಲಂ 144ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

Please follow and like us:
error
error: Content is protected !!