ಅಯೋಧ್ಯೆ ತೀರ್ಪು: ಎಲ್ಲ 18 ಮರುಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ, ಡಿ.12: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಪುನರ್‌ಪರಿಶೀಲಿಸಲು ಸಲ್ಲಿಸಿದ್ದ 18 ಅರ್ಜಿಗಳನ್ನು ಸುಪ್ರೀಂಕೋರ್ಟ್‌ನ ಐವರು ಸದಸ್ಯರನ್ನು ಒಳಗೊಂಡ ನ್ಯಾಯಪೀಠ ಗುರುವಾರ ತಿರಸ್ಕರಿಸಿದೆ.

ಜಸ್ಟಿಸ್ ಸಂಜಯ್ ಖನ್ನಾ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಅಬ್ದುಲ್ ನಝೀರ್ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ಪುನರ್‌ಪರಿಶೀಲಿಸಲು ಸಲ್ಲಿಸಿದ್ದ ಎಲ್ಲ 18 ಅರ್ಜಿಗಳನ್ನು ತಿರಸ್ಕರಿಸಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಅವರ ನೇತೃತ್ವದ ಐವರು ಸದಸ್ಯ ನ್ಯಾಯಪೀಠದ ಈ ಆದೇಶದಿಂದಾಗಿ ನ.9ರಂದು ಮಾಜಿ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಪೀಠ ನೀಡಿದ್ದ ತೀರ್ಪು ಅಂತಿಮವಾಗಿದ್ದು, ಆದೇಶವನ್ನು ಜಾರಿಗೊಳಿಸಲು ದಾರಿ ಮಾಡಿಕೊಡಲಾಗಿದೆ.

Please follow and like us:
error