ಅಬುಧಾಬಿ ಕರ್ನಾಟಕ ಸಂಘದ ಆದ್ಧೂರಿ ೬೨ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ

ಡಾ| ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ,   ಶೇಖರ್ ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿಯವರಿಗೆ  ಡಾ| ದ. ರಾ. ಬೇಂದ್ರೆ ಪ್ರಶಸ್ತಿ ಪ್ರಧಾನ
ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಆಶ್ರಯದಲ್ಲಿ ನಡೆಸಲಾಗುವ ಪ್ರಾದೇಶಿಕ ಸಮಾರಂಭ ೬೨ನೇ ಕರ್ನಾಟಕ ರಾಜ್ಯೋತ್ಸವ ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ೨೦೧೭ ನವೆಂಬರ್ ೩ನೇ ತಾರೀಕು ಶುಕ್ರವಾರ ಬೆಳಿಗ್ಗೆ ೧೦.೩೦ಕ್ಕೆ ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಸರ್ವರ ಮನಸೆಳೆಯಿತು.

ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ
ಸಮಾರಂಭದ ಉದ್ಘಾಟನೆಯನ್ನು ಯು.ಎ.ಇ. ಕನ್ನಡಿಗರ ಮಹಾಪೋಷಕರಾದ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಇಂಡಿಯಾ ಸೋಶಿಯಲ್ ಸೆಂಟರ್‌ನ ಅಧ್ಯಕ್ಷರು   ಜಯಚಂದ್ರ ನಾಯರ್ ಮತ್ತು ಪ್ರಧಾನ ಕಾರ್ಯದರ್ಶಿ   ಎಂ. ಎ. ಸಲಾಂ ಹಾಗೂ ಅತಿಥಿಯಾಗಿ ಆಗಮಿಸಿದ್ದ ಶಾಯರಿ ಸಾಮ್ರಾಟ್ ಅಸಾದುಲ್ಲಾ ಬೇಗ್ ರವರ ಸಮ್ಮುಖದಲ್ಲಿ ಉದ್ಘಾಟಿಸಿದರು. ಅಧ್ಯಕ್ಷರಾದ   ಸರ್ವೋತ್ತಮ ಶೆಟ್ಟಿಯವರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಉಪಸ್ತಿತರಿದ್ದರು. ಸರ್ವರನ್ನು   ಮನೋಹರ್ ತೋನ್ಸೆಯವರು ಸ್ವಾಗತಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀಮತಿ ದಿವ್ಯಾಶರ್ಮಾ ತಂಡದವರಿಂದ ಪ್ರಾರ್ಥನೆ, ಮತ್ತು ಅಬುಧಾಬಿ ಬ್ರಾಹ್ಮಣ ಸಮಾಜ ತಂಡ ಒಂದು ಮತ್ತು ಎರಡು ವಿಭಾಗದ ಮಹಿಳಾ ಸದಸ್ಯರಿಂದ ಸಮೂಹ ಗೀತೆ ಮತ್ತು ಸುಮಾ ಅಶೋಕ್ ರವರಿಂದ ಸ್ವಾಗತ ಭರತನಾಟ್ಯಪ್ರದರ್ಶನ ನೀಡಿದರು.
ಪ್ರೇಕ್ಷಕರ ಮನ ಸೆಳೆದ ಶಾಯರಿ ಸಾಮ್ರಾಟ್ ಅಸಾದುಲ್ಲಾ ಬೇಗ್ ರವರ ಶಾಯರಿ
ಊರಿನಿನಿಂದ ಆಗಮಿಸಿದ ಪ್ರಖ್ಯಾತ ಶಾಯರಿ ಸಾಮ್ರಾಟ್ ಅಸಾದುಲ್ಲಾ ಬೇಗ್ ರವರ ತಮ್ಮದೇಆದ ಶೈಲಿಯಲ್ಲಿ ಹಾಸ್ಯಮಿಶ್ರಿತ ಶಾಯರಿಗಳ ಮೂಲಕ ಸರ್ವರ ಮನಗೆದ್ದರು.

೨೦೧೭ನೇ ಸಾಲಿನಪ್ರತಿಷ್ಠಿತ ಡಾ| ದ. ರಾ. ಬೇಂದ್ರೆ ಪ್ರಶಸ್ತಿ   ಶೇಖರ್ ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿ ಯವರಿಗೆ ಪ್ರಧಾನ
ಅಬುಧಾಬಿ ಕರ್ನಾಟಕ ಸಂಘ ಪ್ರತಿವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುತಿರುವ ೨೦೧೭ನೇ ಸಾಲಿನಪ್ರತಿಷ್ಠಿತ ಡಾ|ದ. ರಾ. ಬೇಂದ್ರೆ ಪ್ರಶಸ್ತಿಯನ್ನು ಯು.ಎ.ಇ.ಯಲ್ಲಿ ಯಕ್ಷಗಾನ ಕಲೆಗೆ ಶಾಸ್ತ್ರೀಯ ಸ್ಪರ್ಶನೀಡಿ ದುಬಾಯಿಯಲ್ಲಿರುವಹವ್ಯಾಸಿ ಕಲಾವಿದರು ಮತ್ತು ಹಲವಾರು ಮಕ್ಕಳಿಗೆ ಅತ್ಯುತ್ತಮ ತರಬೇತಿ ನೀಡಿ, ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಾ ಬರುತ್ತಿರುವಯಕ್ಷಗಾನ ಕಲಾವಿದರು, ಗುರುಗಳಾಗಿರುವ ಶ್ರೀ ಶೇಖರ್ ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿ ಯವರಿಗೆ ಸರ್ವ ಸದಸ್ಯರು ಹಾಗೂ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಪ್ರಧಾನಿಸಿದರು.
ಸಮಾರಂಭಕ್ಕೆ ಬೆಂಬಲ ಪ್ರೋತ್ಸಾಹ,ಸಹಕಾರ ನೀಡಿದ ಪ್ರಾಯೋಜಕರನ್ನು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ತರು, ಮಾಧ್ಯಮ ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು
ಊರಿನಿಂದ ಆಗಮಿಸಿದ ಪ್ರಖ್ಯಾತ ಯುವ ಗಾಯಕಿ ಕು. ಲಹರಿ ಕೋಟ್ಯಾನ್ ಮತ್ತು ಯು.ಎ.ಇ. ಯ ಪ್ರಖ್ಯಾತ ಗಾಯಕರಾದ ಶ್ರೀ ಹರೀಶ್ ಶೇರಿಗಾರ್ ಇವರುಗಳು ತಮ್ಮ ಸುಮಧುರ ಕಂಠಸಿರಿಯಲ್ಲಿ ಕನ್ನಡ ಗೀತಾ ಗಾಯನದ ಮೂಲಕ ಸಭಿಕರ ಮನ ಮುದಗೊಳಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಯು.ಎ.ಇ. ಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಇನ್ನಿತರ ವಿಭಾಗಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅವರ ಮಾತಾಪಿತರ ಸಮ್ಮುಖದಲ್ಲಿ ಪದಕ ನೀಡಿ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಗೌರವಿಸಿದರು.
ಅಬ್ದುಲ್ ಸಲಾಮ್ ದೇರಳಕಟ್ಟೆಯವರ ವಿದ್ಯಾರ್ಥಿಗಳು ಮತ್ತು ವ್ಯಕ್ತಿತ್ವ ವಿಕಸನ ಪುಸ್ತಕವನ್ನು ಡಾ. ಬಿ. ಆರ್. ಶೆಟ್ಟಿಯವರು ಬಿಡುಗಡೆ ಮಾಡಿದರು.
ಯಕ್ಷಮಿತ್ರರು ಬಾಲಕಲಾವಿದರ ತಂಡದಿಂದ ಯಕ್ಷಗಾನ “ಸರಸೇತು ಬಂದನ”
ಯಕ್ಷಮಿತ್ರರು ದುಬಾಯಿ ಹಿರಿಯ ಕಲಾವಿದರ ಹಿಮ್ಮೇಳದಲ್ಲಿ ಹಾಗೂ ಬಾಲಕಲಾವಿದ ತಂಡದವರಿಂದಯಕ್ಷಗಾನ “ಸರಸೇತು ಬಂದನ” ಕನ್ನಡ ಪೌರಾಣಿಕ ಕಥಾಪ್ರಸಂಗವನ್ನು ಪ್ರದರ್ಶಿಸಲಾಯಿತು.
ಶ್ರೀಮತಿ ವೀಣಾ ಮಲ್ಯರವರ ನಿರ್ದೇಶನ ಮತ್ತು ವೇಷಧಾರಿಣಿಯಾಗಿ ಮಕ್ಕಳ ಸಹಿತ ಹುಲಿವೇಷ ನೃತ್ಯ ತುಳುನಾಡಿನ ಕಲಾಪರಂಪರೆಯನ್ನು ಪ್ರತಿಬಿಂಭಿಸಿತ್ತು.
ಇತ್ತಿಚೇಗೆ ಯು.ಎ.ಇ. ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಸ್ವಸ್ತಿಕ್ ಆಚಾರ್ಯ ನಿರ್ದೇಶನದಲ್ಲಿ ನಾಟ್ಯಾಸಂ ತಂಡದವರಿಂದ “ವೀರಗಾಸೆ” ಅಕರ್ಷಣಿಯ ಪ್ರದರ್ಶನ ನಡೆಯಿತು.

ಸ್ವಸ್ತಿಕ್ ಆಚಾರ್ಯ ನಿರ್ದೇಶನದಲ್ಲಿ ಗಾಂಧಿಜಿಯ ತತ್ವಗಳು ಹಾಸ್ಯ ಪ್ರಹಸನ ಸರ್ವರ ಮನಸೆಳೆಯಿತು.

ಜನಮನ ಗೆದ್ದ ಆದರ್ಶ ದಂಪತಿಗಳು ಸ್ಪರ್ಧೆ
ಈ ವರ್ಷದ ವಿಶೇಷ ಆಕರ್ಷಣೆಯಾಗಿ ಕನ್ನಡಿಗ ದಂಪತಿಗಳಿಗೆ ಆದರ್ಶ ದಂಪತಿ ಸ್ಪರ್ಧೆ ಏರ್ಪಡಿಸಲಾಗಿದ್ದು ಹಲವು ಜೋಡಿಗಳು ಭಾಗವಹಿಸಿ ವೈವಿಧ್ಯಮಯ ಸ್ಪರ್ಧೆಗಳ ಮೂಲಕ ತಮ್ಮ ತಮ್ಮ ಚಮತ್ಕಾರಿಕ ಪ್ರತಿಭೆಯನ್ನು ಪ್ರದರ್ಶಿಸಿ ಜನಮನ ಗೆದ್ದರು.
ಪ್ರಥಮ ಸ್ಥಾನ : ಶ್ರೀ ಮತ್ತು ಶ್ರೀಮತಿ ವಿಜಯರಾವ್ ಹೇಮಾ ದಂಪತಿಗಳು
ದ್ವಿತೀಯಾ ಸ್ಥಾನ : ಶ್ರೀ ಮತ್ತು ಶ್ರೀಮತಿ ಶ್ರೀಕೃಷ್ಣ ರಕ್ಷಿತಾ ದಂಪತಿಗಳು
ತೃತಿಯಾ ಸ್ಥಾನ: ಶ್ರೀ ಮತ್ತು ಶ್ರೀಮತಿ ಉದಯಾ ಗೀತಾ ನಾಯಕ್ ದಂಪತಿಗಳು
ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಉಡುಗೊರೆಯನ್ನು ನೀಡಲಾಯಿತು.

ಬೆಳಗಿನಿಂದ ಸಂಜೆಯವರೆಗೆ ಅತ್ಯಂತ ಅಕರ್ಷಕ ಕಾರ್ಯಕ್ರಮ ವಿರೂಪಣೆಯನ್ನು ಊರಿನಿಂದ ಆಗಮಿಸಿದ್ದ ಶ್ರೀ ಸಾಯೀಲ್ ರೈಯವರು ಮತ್ತು ಶ್ರೀಮತಿ ರಜನಿ ಭಟ್ ನಡೆಸಿಕೊಟ್ಟರು.
ಈ ವರ್ಷದ ಅದ್ಧೂರಿ ಸಮಾರಂಭಕ್ಕೆ ವೇದಿಕೆಯಲ್ಲಿ ಬೃಹತ್ ಎಲ್. ಇ. ಡಿ. ಡಿಜಿಟಲ್ ಡಿಸ್ಪ್ಲೆ ಪರದೆಯನ್ನು ಅಳವಡಿಸಲಾಗಿದ್ದು ದಿನ ಪೂರ್ತಿ ಅಬುಧಾಬಿ ಕರ್ನಾಟಕ ಸಂಘದ ಹೆಜ್ಜೆ ಗುರುತುಗಳು, ಕನ್ನಡ ನಾಣುಡಿಗಳು, ಕನ್ನಡದ ಕಣ್ಮಣಿಗಳ ಭಾವಚಿತ್ರಗಳು, ನುಡಿಮುತ್ತುಗಳು ಮಿಂಚಿ ಮಾಯವಾಗುತಿದ್ದು ಸರ್ವರ ಗಮನ ಸೆಳೆಯಿತು.
ಕೊನೆಯಲ್ಲಿ ಸಾಂಸ್ಕೃತಿಕ ಪ್ರದರ್ಶನ ನೀಡಿರುವ ತಂಡಗಳ ನಿರ್ದೇಶಕರು ಮತ್ತು ಮಕ್ಕಳು ಹಾಗೂ ರಾಜ್ಯೋತ್ಸವ ಸಮಾರಂಭದ ಅಹ್ವಾನ ಪತ್ರ,ಸನ್ಮಾನ ಪತ್ರ, ಡಿಜಿಟಲ್ ಡಿಸ್ಪ್ಲೆ ವಿನ್ಯಾಸಗಾರರಾದ ಶ್ರೀ ಗಣೇಶ್ ರೈಯವರಿಗೆ ಶ್ರೀ ಸರ್ವೋತ್ತಮ ಶೆಟ್ಟಿಯವರು ಸ್ಮರಣಿಕೆ ನೀಡಿ ಗೌರವಿಸಿದರು. ಅಬುಧಾಬಿ ಕರ್ನಾಟಕ ಸಂಘದ ಅದ್ಧೂರಿ ರಾಜ್ಯೋತ್ಸವ ಸಮಾರಂಭವನ್ನು ಸರ್ವರಿಗೂ ವಂದನೆಗಳನ್ನು ಅರ್ಪಿಸುವುದರ ಮೂಲಕ ಮುಕ್ತಾಯಗೊಳಿಸಲಾಯಿತು.

 

Related posts