ಅಪಘಾತದ ಕುರಿತು ಜನರಲ್ಲಿ ಅರಿವು ಅತ್ಯವಶ್ಯ : ವಸಂತ ಕುಮಾರ

ಕೊಪ್ಪಳ ಫೆ. : ಸಾರ್ವಜನಿಕರಲ್ಲಿ ಅಪಘಾತದ ಕುರಿತು ಜಾಗೃತಿ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಸಂಸ್ಥೆಯ ಹಿರಿಯ ಮೋಟಾರ ವಾಹನ ನಿರೀಕ್ಷಕ ವಸಂತ ಕುಮಾರ ಅವರು ಹೇಳಿದರು.
30ನೇ ರಾಷ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗಾವಗಿ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಹೊಸಪೇಟೆ ರಸ್ತೆಯ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರದಂದು ಆಯೋಜಿಸಲಾದ ಕಾಂiÀರ್iಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಜನರು ಭೀಕರ ಖಾಯಿಲೆಗಳಿಗೆ ಹೆದರುತ್ತಿದ್ದರು. ಆದರೆ ಪ್ರಸ್ತುತ ದಿನದಲ್ಲಿ ಜನರು ಅಪಘಾತಗಳಿಗೆ ಹೆದರುತ್ತಿದ್ದಾರೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತಲೇ ಇದೆ. ಆದರೆ ರಸ್ತೆಗಳ ಸ್ಥಿತಿ ಮಾತ್ರ ಇನ್ನೂ ಸುಧಾರಿಸಿಲ್ಲ. ಇದರಿಂದ ಅನೇಕ ಅಪಘಾತಗಳಾಗಿ ಸಾವು-ನೋವು, ನಷ್ಡಗಳು ಸಂಬವಿಸುತ್ತಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಪಘಾತಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಇಲ್ಲದಿರುವುದು. ಅಪಘಾತಗಳು ಸಂಬಂವಿಸಬಾರದು ಎಂದರೆ ಸಾರಿಗೆ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವುದು ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಮಧ್ಯಪಾನ ಮಾಡಿ ವಾಹನವನ್ನು ಚಲಾಯಿಸಬಾರದು. ಹೆಲ್ಮೆಟ್ ಧರಿಸುವುದನ್ನು ರೂಡಿ ಪಡಿಸುವುದಲ್ಲದೇ ಅದನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ಅಲ್ಲದೇ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಸೀಟ್ ಬೆಲ್ಟ್ ಧರಿಸುವುದು, ಮೊಬೈಲ್ ಫೋನ್ ಬಳಕೆ ಮಾಡದಿರುವುದು, ಲೋಭಿಮ್ ಲೈಟ್ ಬಳಸುವುದು, ರಸ್ತೆ ನಿಯಮಗಳನ್ನ ಪಾಲಿಸುವುದು, ಜಿಬ್ರಾ ಕ್ರಾಸ್ ದಾಟುವ ವೇಳೆ ಎಚ್ಚರವಯಿಸುವುದು, ಇವು ಎಲ್ಲಾ ನಿಯಮಗಳನ್ನು ಪಾಲಿಸಿದಾಗ ಮಾತ್ರ ಅಪಘಾತಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಅಲ್ಲದೇ ಈ ಪ್ರಮುಖ ಘೋಷಣೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು Á್ರದೇಶಿಕ ಸಾರಿಗೆ ಸಂಸ್ಥೆಯ ಹಿರಿಯ ಮೋಟಾರ ವಾಹನ ನಿರೀಕ್ಷಕ ವಸಂತ ಕುಮಾರ ಅವರು ಹೇಳಿದರು.
ಇನ್ನೋರ್ವ ಹಿರಿಯ ಮೋಟಾರ ವಾಹನ ನಿರೀಕ್ಷಕ ಜೆ.ಪಿ. ಪ್ರಕಾಶ ಮೋವಾನಿ ಅವರು ಮಾತನಾಡಿ, ಸಂವಿಧಾನದಲ್ಲಿ ಪ್ರತಿಯೊಂದಕ್ಕೂ ಕಾನೂನು ಇದೆ. ಅದೇ ರೀತಿಯಾಗಿ ಸಾರಿಗೆ ವ್ಯವಸ್ಥೆಗೂ ಕೂಡ ಕಾನೂನು ಇದೆ. ಅವುಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಪಘಾತ ಯಾರಿಗೆ ಯಾವ ಸಮಯದಲ್ಲಿ ಹೇಗೆ ಸಂಭವಿಸುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಆದ್ದರಿಂದ ಜನರು ಸಾರಿಗೆ ಕಾನೂನುಗಳನ್ನು ಸರಿಯಾಗಿ ಪಾಲಿಸಿ, ಅಪಘಾತವಾಗುವುದನ್ನು ತಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ ಮಹಮ್ಮದ ಬಾಷಾ, ಅವರು ವಹಿಸಿದ್ದರು. ಕೊಪ್ಪಳ ಸಂಚಾರಿ ಪೋಲಿಸ್ ಠಾಣೆಯ ಪಿ.ಎಸ್.ಐ ರಾಮಚಂದ್ರಪ್ಪ, ಎನ್.ಈ.ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ನಾರಯಣ ಗೌಡಗೇರಿ, ಹಿರಿಯ ಮೋಟಾರ ವಾಹನ ನಿರೀಕ್ಷಕರಾದ ಪಿ.ಎಂ. ಶಾನಭಾಗ, ಸಿ.ಎಸ್. ಪ್ರಮುತೇಶ್, ದಿಲೀಪ ಮಹೇಂದ್ರಕರ್, ಟಿ.ಎಸ್. ಸತೀಶ ಬಾಬು, ಸಾರಿಗೆ ಇಲಾಖೆಯ ಅದೀಕ್ಷಕ ಗೊವಿಂದರಾಜು ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(

Please follow and like us:
error