ಬೆಂಗಳೂರು : ವಿಧಾನಮಂಡಲದ ಅಧಿವೇಶನವನ್ನು ಮೂರು ವಾರಗಳ ಕಾಲ ಅಂದರೆ ಅ.15ರ ವರೆಗೆ ವಿಸ್ತರಿಸಬೇಕೆಂದು ವಿಧಾನಸಭಾ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಈ ಅಧಿವೇಶನದಲ್ಲಿ 35ಕ್ಕಿಂತ ಹೆಚ್ಚು ಮಸೂದೆ ಮಂಡನೆಯಾಗಲಿದೆ, ಇದರ ಜೊತೆಗೆ ಕೊರೊನಾ, ಅತಿವೃಷ್ಟಿ, ಹದಗೆಟ್ಟಿರುವ ಆರ್ಥಿಕ ಸ್ಥಿತಿ, ಡ್ರಗ್ಸ್ ಹಗರಣ ಹೀಗೆ ವಿಸ್ತೃತ ಚರ್ಚೆಗೆ ಸಾಕಷ್ಟು ವಿಷಯಗಳಿವೆ. ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ 2005ರ ಸೆಕ್ಷನ್ 3ರಂತೆ ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕೆಂದಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಈ ನಿಯಮವನ್ನು ಗಾಳಿಗೆ ತೂರಿ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಿರುವುದು ಸಂಸದೀಯ ವ್ಯವಸ್ಥೆಗೆ ಮಾಡುತ್ತಿರುವ ಅಪಚಾರ ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ
ವಿಧಾನಮಂಡಲದ ಅಧಿವೇಶನವನ್ನು ಮೂರು ವಾರಗಳ ಕಾಲ ಅಂದರೆ ಅ.15ರ ವರೆಗೆ ವಿಸ್ತರಿಸಬೇಕೆಂದು ವಿಧಾನಸಭಾ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ.
ಈ ಅಧಿವೇಶನದಲ್ಲಿ 35ಕ್ಕಿಂತ ಹೆಚ್ಚು ಮಸೂದೆ ಮಂಡನೆಯಾಗಲಿದೆ, ಇದರ ಜೊತೆಗೆ ಕೊರೊನಾ, ಅತಿವೃಷ್ಟಿ, ಹದಗೆಟ್ಟಿರುವ ಆರ್ಥಿಕ ಸ್ಥಿತಿ, ಡ್ರಗ್ಸ್ ಹಗರಣ ಹೀಗೆ ವಿಸ್ತೃತ ಚರ್ಚೆಗೆ ಸಾಕಷ್ಟು ವಿಷಯಗಳಿವೆ.
1/2 pic.twitter.com/WbNKo3tdwT— Siddaramaiah (@siddaramaiah) September 9, 2020