ಅತ್ಯಾಚಾರ,ಕೊಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಕನ್ನಡನೆಟ್ ಕೊಪ್ಪಳ: ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಜರುಗಿದ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಬಣಜಿಗ ಸಮಾಜ ರಾಜ್ಯಪಾಲರಾದ ವಜುಭಾಯಿವಾಲಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ.‌ ಈ ಬಗ್ಗೆ ಕೊಪ್ಪಳ ತಹಶೀಲ್ದಾರ ಅಮರೇಶ್ ಬಿರಾದಾರ್ ಅವರ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿರುವ ಬಣಜಿಗ ಸಮಾಜದ ಮುಖಂಡರು, ಇತ್ತೀಚಿಗೆ ಹುಣಸಗಿ ಪಟ್ಟಣದ ಕುಮಾರಿ ಸಂಗೀತಾ ನಿಂಗಣ್ಣ ಆಲಾಳ್ ಎನ್ನುವ ಬಾಲಕಿ‌ಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಬಾಲಕಿಯನ್ನು ಪುಸಲಾಯಿಸಿ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಲಾಡ್ಜ್ ವೊಂದರಲ್ಲಿ ನಾಲ್ಕು‌ ಜನ ಯುವಕರು ಅತ್ಯಾಚಾರ ನಡೆಸಿ,ಕೊಲೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಬೇಕೆಂದು ಬಣಜಿಗ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಇನ್ನು ಈ ವೇಳೆ ಬಣಜಿಗ ಸಮಾಜದ ಜಿಲ್ಲಾ ಅಧ್ಯಕ್ಷರಾದ ವಿಶ್ವನಾಥ್ ಬಳ್ಳೊಳ್ಳಿ,ತಾಲೂಕ ಅಧ್ಯಕ್ಷರಾದ ಸಮಾಜದ ವೀರಣ್ಣ ಬುಳ್ಳಾ, ಮುಖಂಡರಾದ ಗವಿಸಿದ್ದಪ್ಪ ಕೊಪ್ಪಳ, ಬಸವರಾಜ ಬಳ್ಳೊಳ್ಳಿ, ಮಹೇಶ್ ಮಿಟ್ಟಲಕೋಡ್, ರಾಜೇಶ್ ಅಂಗಡಿ, ಶಿವಕುಮಾರ್ ಪಾವಲಿಶೆಟ್ಟರ್,ಈಶ್ವರಪ್ಪ ಬಮ್ಮನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error