ಅತಿಥಿ ಉಪನ್ಯಾಸಕರ ಕಾರ್ಯಚಟುವಟಿಕೆಗಳ  ಹಾಜರಾತಿಯಾಗದ ಹೊರತು ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಏರಿಕೆ ಅಸಾದ್ಯ

ಸರಕಾರಿ ಪದವಿ ಕಾಲೇಜುಗಳಲ್ಲಿ

ಕೊಪ್ಪಳ : ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಕೆಗೆ ಆದೇಶ ನೀಡಿ ಉನ್ನತ ಶಿಕ್ಷಣದ ಉನ್ನತೀಕರಣಕ್ಕಾಗಿ ಅವಕಾಶ ಮಾಡಿಕೊಡಿ. ಎಂದು  ರಾಜ್ಯ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಸರಕಾರವನ್ನು ವಿನಂತಿಸಿಕೊಂಡಿದ್ದಾರೆ.

ರಾಜ್ಯಾದ್ಯಂತ ಪೂರ್ಣ ಕಾಲಿಕ ಮತ್ತು ಅತಿಥಿ ಉಪನ್ಯಾಸಕರ ಶೇಕಡವಾರು ಸಂಖ್ಯೆ ಗಮನಿಸಿದಾಗ ಪೂರ್ಣಕಾಲಿಕ ಉಪನ್ಯಾಸಕರ ಸಂಖ್ಯೆ ಶೇ ೨೦% ರಷ್ಟು ಮತ್ತು ಅತಿಥಿ ಉಪನ್ಯಾಸಕರ ಸಂಖ್ಯೆ ಶೇ ೮೦% ರಷ್ಟು ಇರುವದು. ಕಾಲೇಜು ಶಿಕ್ಷಣ ಇಲಾಖೆಯ ಆದೇಶದಂತೆ ನವಂಬರ ೧೭ ರಂದು ಕಾಲೇಜುಗಳು ಪ್ರಾರಂಭವಾಗಿದ್ದು. ಕೇವಲ ಅಂತಿಮ ವರ್ಷದ ವರ್ಗಗಳಿಗೆ ಆಫ್ ಲೈನ್ ಕ್ಲಾಸಸ್ ಮತ್ತು ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ ವರ್ಗಗಳು ಆನ್ ಲೈನ್‌ನಲ್ಲಿ ಪ್ರಾರಂಭವಾಗಿದ್ದು ಕೇವಲ ಶೇ ೨೦% ರಷ್ಟು ಇರುವ ಪೂರ್ಣಕಾಲಿಕ ಉಪನ್ಯಾಸಕರಿಂದ ಎಲ್ಲಾ ವರ್ಗದ ಎಲ್ಲಾ ವಿಷಯಗಳು ಆಫ್ ಲೈನ್ ಮತ್ತು ಆನ್‌ಲೈನ್‌ನಲ್ಲಿ ಕ್ಲಾಸ್‌ಗಳು ನಡೆಯುವುದು ಅಸಾಧ್ಯ. ಈ ಕಾರಣಕ್ಕಾಗಿ ವಿವಿಧ ಸ್ಥಳಗಳಿಂದ ವಿದ್ಯಾರ್ಜನೆಗೆ ಬರುವ ವಿದ್ಯಾರ್ಥಿಗಳು ಕೆಲವೇ ಪಿರೇಡ್‌ಗಳು ನಡೆಯುವುದರಿಂದ ಕಾಲೇಜುಗಳ ಹಾಜರಾತಿ ಸಂಖ್ಯೆ ಏರಿಕೆ ಅಸಾಧ್ಯ.

 

ಉನ್ನತ ಶಿಕ್ಷಣ ಇಲಾಖೆಯು ನವಂಬರ ೧೭ ರಿಂದಲೇ ಶೈಕ್ಷಣಿಕ ವರ್ಷಕ್ಕೆ ಸೇವೆ ಮುಂದುವರೆಸುವ ಆದೇಶ ಹೊರಡಿಸಿದ್ದರೂ ಈ ಆದೇಶ ಕಾಲೇಜುಗಳಿಗೆ ಕಳುಹಿಸಿರುವುದಿಲ್ಲ ಕಾರಣ ಆಯಾ ಕಾಳೇಜು ಪ್ರಾಂಶುಪಾಲರು ಅತಿಥಿ ಉಪನ್ಯಾಸಕರನ್ನು ತರಗತಿಗಳ ಪಾಠ ಪ್ರವಚನ ಮಾಡಲು ಅವಕಾಶ ನೀಡುತ್ತಿಲ್ಲ. ಕಾರಣ ರಾಜ್ಯಾಂದ್ಯಂತ ಕೋಡಲೇ ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಕೆ ಆದೇಶವನ್ನು ಆಯಾ ಕಾಲೇಜುಗಳಿಗೆ ಕಳುಹಿಸಿ ಅತಿಥಿ ಉಪನ್ಯಾಸಕರ ಸೇವೆಗೆ ಅವಕಾಶ ಮಾಡಿಕೊಟ್ಟಲ್ಲಿ, ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಏರಿಕೆ ಸಾದ್ಯ. ಎಲ್ಲಾ ವಿದ್ಯಾರ್ಥಿಗಳ ಹಾಜರಾತಿ  ಎಲ್ಲಾ ವಿಷಯಗಳ ತರಗತಿ ಪ್ರಾರಂಭದ ಮೇಲೆ ಅವಲಂಬನ ಎಲ್ಲಾ ವಿಷಯಗಳ ತರಗತಿಗಳ ಪ್ರಾರಂಭ ರಾಜ್ಯಾಂದ್ಯಂತ ಅತಿಥಿ ಉಪನ್ಯಾಸಕರ ಕಾರ್ಯಚಟುವಟಿಕೆಗಳ ಹಾಜರಾತಿ ಮೇಲೆ ಅವಲಂಬನ ಕೂಡಲೇ ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಕೆಗೆ ಆದೇಶ ನೀಡಿ ಉನ್ನತ ಶಿಕ್ಷಣದ ಉನ್ನತೀಕರಣಕ್ಕಾಗಿ ಅವಕಾಶ ಮಾಡಿಕೊಡಿ. ಎಂದು

ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು

ಡಾ|| ವೀರಣ್ಣ ಸಜ್ಜನರ, ವಾಸುದೇವ ಬುರ್ಲಿ, ಪ್ರಕಾಶ ಜಡಿ , ವಿಜಯ ತೋಟದ, ಶಿವಣ್ಣ ಸರ್, ಪ್ರಕಾಶಬಳ್ಳಾರಿ, ಸಣ್ಣದೇವೇಂದ್ರಸ್ವಾಮಿ, ಯಂಕಮ್ಮ.ಆರ್, ಗೀತಾ ಬನ್ನಿಕೊಪ್ಪ, ಗಿರಿಜಾ ತುರುಮರಿ, ರವಿಹಿರೇಮಠ, ಕಲ್ಲೇಶ ಅಬ್ಬಿಗೇರಿ, ಶಿವಪ್ರಸಾದ ಹಾದಿಮನಿ, ಬಸವರಾಜ ಹುಳಕಣ್ಣವರ, ಜ್ಞಾನೇಶ್ವರಪತ್ತಾರ, ಗೋಣಿಬಸಪ್ಪ ಹಡಪದ, ಅಣ್ಣಪ್ಪ ಪೂಜಾರ, ಬುಡ್ಡನಗೌಡರ. ಮಾರಕಂಡೆಯ ಹಂದ್ರಾಳ, ರವಿನಾಯಕ, ಖಾಜಾವಲಿ ಸರ್, ಮಹಾಂತೇಶ ನೆಲಗಣಿ ಕೋರಿದ್ದಾರೆ.

Please follow and like us:
error