ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರಿಂದ ರಾಜ್ಯದಾದ್ಯಂತ ಆನ್ಲೈನ್ ಭಿತ್ತಿಪತ್ರ ಚಳುವಳಿ

ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರಿಂದ
ದಿ:೧೦-೦೭-೨೦೨೦ರಂದು ರಾಜ್ಯದಾದ್ಯಂತ ಆನ್ಲೈನ್ ಭಿತ್ತಿಪತ್ರ ಚಳುವಳಿ ನಡೆಸಲಾಯಿತು.

ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರ ಮೂರು ಮುಖ್ಯ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಿ:೧೦ ರಂದು ರಾಜ್ಯದಾದ್ಯಂತ ಆನ್ಲೈನ್ ಭಿತ್ತಿಪತ್ರ ಚಳುವಳಿಯನ್ನು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು ಹಾಗು ಶಿಕ್ಷಕರ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಸಲಾಯಿತು.
ಬಾಕಿ ಉಳಿದಿರುವ ವೇತನವನ್ನು ಒಂದೇ ಬಾರಿಗೆ ಈ ಕೂಡಲೇ ಪಾವತಿಸಬೇಕು, ಕೊರೊನಾ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ‘ಪರಿಹಾರ ಪ್ಯಾಕೇಜ್’ನ್ನು ಘೋಷಿಸಬೇಕು ಹಾಗೂ ಎಲ್ಲಾ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂಬ ಬೇಡಿಕೆಗಳನ್ನಿಟ್ಟುಕೊಂಡು ಈ ಹೋರಾಟಕ್ಕೆ ಕರೆ ನೀಡಲಾಗಿದೆ.
ನಮ್ಮ ರಾಜ್ಯದಲ್ಲಿ ಈಗಾಗಲೇ ೮ ಜನ ಅತಿಥಿ ಉಪನ್ಯಾಸಕರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲದೇ ಎಷ್ಟೋ ಜನ ಶಿಕ್ಷಕರು ಮತ್ತು ಉಪನ್ಯಾಸಕರು ಹೇಳಿಕೊಳ್ಳಲಾಗದ ನೋವನ್ನು ಒಳಗೊಳಗೇ ಅನುಭವಿಸುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಕುಗ್ಗಿಹೋಗಿದ್ದಾರೆ. ಕಳೆದ ೩-೪ ತಿಂಗಳಿನಿಂದ ಸಂಸಾರಗಳನ್ನು ನಡೆಸಲಾಗದೇ ಎಷ್ಟೋ ಜನರು ಅನಿವಾರ್ಯವಾಗಿ ಬೇರೆ ಕೆಲಸಗಳನ್ನು ಹುಡಿಕಿಕೊಂಡಿದ್ದಾರೆ. ಎಷ್ಟೇ ಕಷ್ಟಗಳು ಬಂದರೂ ನುಂಗಿಕೊಂಡು ತಮ್ಮ ಸೇವೆ ಒದಗಿಸಿದ್ದಾರೆ.
ನೆಟ್, ಸೆಟ್, ಪಿಎಚ್‌ಡಿ ಇನ್ನಿತರ ಎಲ್ಲಾ ಅರ್ಹತೆಗಳನ್ನು ಪಡೆದು ಇಂದು ಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ಉನ್ನತ ವ್ಯಾಸಂಗ ಮಾಡಿಕೊಂಡು ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿದ್ದಾರೆ, ತರಕಾರಿ ಮಾರಾಟ ಮಾಡುತ್ತಿದ್ದಾರೆ ಎಂಬ ವರದಿಗಳು ಪ್ರಕಟವಾಗಿವೆ. ಈ ಎಲ್ಲಾ ಬೆಳವಣಿಗೆಗಳು ಬಹಲ ನೋವುಂಟು ಮಾಡುತ್ತವೆ. ಆದ್ದರಿಂದ ರಾಜ್ಯ ಸರ್ಕಾರ ಈ ಕೂಡಲೇ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ನೆರವಿಗೆ ಧಾವಿಸಬೇಕಾಗಿದೆ.
ಸರ್ಕಾರದ ಮೇಲೆ ಒತ್ತಡ ತರಲು ಮಹತ್ವದ ಈ ಹೋರಾಟದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕೆಂದು ಈ ಮೂಲಕ ಮನವಿ.

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿಗಳು,

(ಶರಣಬಸವ ಪಾಟೀಲ್)
ಹೋರಾಟ ಸಮಿತಿ ಪರವಾಗಿ.

ವೀರಣ್ಣ ಸಜ್ಜನರ್
ಮಹೇಶ
ಹನುಮಂತಪ್ಪ ಎಚ್.ಎಸ್
ಪಂಚಾಕ್ಷರಿ
ಬೀರಪ್ಪ ಬಂಡಿ
ಮಾನಪ್ಪ

Please follow and like us:
error