ಅಟೋರಿಕ್ಷಾ ಗಾಲಿಗಳ ಕಳ್ಳತನ : ಕಳ್ಳರ ಬಂಧನ

ಕನ್ನಡನೆಟ್ ನ್ಯೂಸ್ : ಆಟೋರಿಕ್ಷಾ ಗಾಲಿಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರ ಬಂಧಿಸಿ , ಬಂಧಿತರಿಂದ 01 ಆಟೋ ರಿಕ್ಷಾ , ಒಂದು ಮೋಟಾರ್ ಸೈಕಲ್ , ಸುಮಾರು 30,000 / – ರೂಪಾಯಿ ಬೆಲೆ ಬಾಳುವ 15 ಆಟೋ ರಿಕ್ಷಾ ಗಾಲಿಗಳ ವಶಪಡಿಸಿಕೊಳ್ಳುವಲ್ಲಿ ಕೊಪ್ಪಳ ನಗರ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.

ಕಳೆದ ಒಂದು ವಾರದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಯ ಬದಿಯಲ್ಲಿ ಎಲ್ಲಿಸಿದ ಆಟೆಲ್ಲಾ ಗಾಲಿಗಳನ್ನು ಕಳ್ಳರು ಬಿಚ್ಚಿಕೊಂಡು ಹೋಗಿದ್ದು , ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ 12 ಪ್ರಕರಣಗಳು ದಾಖಲಾಗಿದ್ದವು . ಆರೋಪಿತರ ಜಾಡು ಹಿಡಿದು ಮತ್ತು ಖಚಿತ ಮಾಹಿತಿ ಮೇರೆಗೆ 15-12-2020 ರಂದು ಬೆಳಗಿನ ಜಾವ ಕಳ್ಳತನ ಮಾಡಿದ ಗಾಲಿಗಳನ್ನು ಬೇರೆಯವರಿಗೆ ಮಾರಾಟ ಮಾಡಲು ಹೊರಟಿದ್ದ ವೇಳೆಯಲ್ಲಿ ಆರೋಪಿತರಾದ ಶ್ರೀನಿವಾಸ ತಂದೆ ನಿಂಗಪ್ಪ ಮಠದ ವಯಾ : 21 ವರ್ಷ , ಉ : ಆಟೋರಿಕ್ಷಾ ಚಾಲಕ ಶಿವಯ್ಯ ತಂದೆ ಪರಮೇಶ್ವರಯ್ಯ ಮಠದ ಹಿರೇಸಿಂಧೋಗಿ , ಗುರುಲಿಂಗಯ್ಯ : ಹಿರೇಸಿಂದೋಗಿ ತಾ : ಕೊಪ್ಪಳ ರವರನ್ನು ದಸ್ತಗಿರಿ ಮಾಡಿ ಕಳ್ಳತನಕ್ಕೆ ಉಪಯೋಗಿಸಿದ ಒಂದು ಆಟೋ ರಿಕ್ಷಾ , ಒಂದು ಮೋಟಾರ್ ಸೈಕಲ್ , ಸುಮಾರು 34.4YAJI- ವಾಜು ಬೆಲೆ ಬಾಳುವ 15 ಆಟೋರಿಕ್ಷಾ ಗಾಲಿಗಳನ್ನು ಜಪ್ತಿ ಮಾಡಲಾಗಿದೆ. ಸದರಿ ಪ್ರಕರಣದಲ್ಲಿ . ಶ್ರೀಧರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು , ವೆಂಕಟಪ್ಪ ನಾಯಕ್ ಉಪಾಧೀಕ್ಷಕರು ಉಪವಿಭಾಗ ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಮಾರುತಿ ಎಸ್ . ಗುಳ್ಳಾರಿ ಪೊಲೀಸ್ ಇನ್ಸಪೇಕ್ಷರ ಕೊಪ್ಪಳ ನಗರ ಪೊಲೀಸ್ ಠಾಣೆ , ಮಹಾಂತಪ್ಪ ಮ ಪಿ.ಎಸ್.ಐ. ( ೬.೨ ) , ಬಸವರಾಜ ಹೆಚ್.ಸಿ. ಹನುಮಂತಪ್ಪ ಸಿಪಿಸಿ , ಐದು ಸಜ್ಜನ ಏ.ಸಿ. ದೇವೇಂದ್ರಪ್ಪ ಸಿಪಿಸಿ , ಆನಂದ ಸಿಪಿಸಿ , ನಿರುಪಾದಪ್ಪ ಸಿಪಿಸಿ ರವರು ಆರೋಪಿತರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Please follow and like us:
error