ಅಜಿತ್ ಜೊತೆ ತೆರಳಿದ್ದ 10 ಶಾಸಕರ ಪೈಕಿ ಮೂವರು ವಾಪಸ್!

ಮುಂಬೈ, ನ.23: ಇಂದು ಬೆಳಗ್ಗೆ ಅಜಿತ್ ಪವಾರ್ ಜೊತೆ ಬಿಜೆಪಿಗೆ ಬೆಂಬಲ ಸೂಚಿಸಲು ರಾಜಭವನಕ್ಕೆ ತೆರಳಿದ್ದ 10 ಎನ್‌ಸಿಪಿ ಶಾಸಕರ ಪೈಕಿ ಮೂವರು ಇಂದು ಮಧ್ಯಾಹ್ನ ಶರದ್ ಪವಾರ್ ನಡೆಸಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡರು.

ಶರದ್ ಪವಾರ್ ನಮ್ಮ ನಾಯಕರು. ನಾವು ಅವರು ಜೊತೆಗೆ ಇರುತ್ತೇವೆ. ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಈ ಮೂವರು ಶಾಸಕರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅಜಿತ್ ಜೊತೆ ತೆರಳಿರುವ ಇನ್ನುಳಿದ ಶಾಸಕರು ವಾಪಸ್ ಬರುತ್ತಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ಅನರ್ಹಗೊಳಿಸಲಾಗುತ್ತದೆ ಎಂದು ಪವಾರ್ ಎಚ್ಚರಿಕೆ ನೀಡಿದ್ದಾರೆ.

 

Please follow and like us:
error