ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ಆನ್ಲೈನ್ ಪ್ರತಿಭಟನೆ

Koppal ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ಆನ್ಲೈನ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ದೇಶವ್ಯಾಪಿ ಲಾಕ್ಡೌನ್ ಗೊಷಿಸಿದಾಗ ಇಡೀ ದೇಶದ ಜನರೇ ಬೆಂಬಲಿಸಿದ್ದಾರೆ . ಭಾರತ ಮತ್ತು ಕರ್ನಾಟಕದ ಶಿಕ್ಷಕರು ಸಹ ಬೆಂಬಲವಾಗಿ ನಿಂತಿತ್ತು. ಶಾಲಾ ಶಿಕ್ಷಕರು ಅತಿಥಿ ಉಪನ್ಯಾಸಕರು ವೃತ್ತಿಪರ ಕಾಲೇಜುಗಳ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಸಾಮಾಜಿಕ ಕಲ್ಯಾಣಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಯಾವಾಗಲೂ ಮುಂಚೂಣಿಯಲ್ಲಿದ್ದಾರೆ. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಶಿಕ್ಷಕರು  ಸೇರಿದಂತೆ ಎಲ್ಲರನ್ನೂ ದಿನನಿತ್ಯದ ಸಮಸ್ಯೆಗಳು ಬೆಂಬಿಡದೆ ಬಾಧಿಸುತ್ತಿವೆ. ಉದ್ಯೋಗ ನಾಶ, ಜೀವನದ ಅಭದ್ರತೆ,  ಇತ್ಯಾದಿ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಬೌದ್ಧಿಕ ತರಬೇತಿ ನೀಡುವ ಶಿಕ್ಷಕರ ಸಮಸ್ಯೆಗಳು ಒಂದೆಡೆಯಾದರೆ ವಿದ್ಯಾರ್ಥಿಗಳ ಸಮಸ್ಯೆಗಳು ಕೂಡ ದಿನನಿತ್ಯ ಹೆಚ್ಚುತ್ತಿವೆ.
ಸರ್ಕಾರ ಲಾಕ್ಡೌನ್ ಸಂದರ್ಭದಲ್ಲಿ  ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ತರುತ್ತಿದೆ. ಆನ್ಲೈನ್ ಪರೀಕ್ಷೆಗಳು ಮತ್ತು ಎನ್. ಇ. ಪಿ
2019 ಹೊಸ ಶಿಕ್ಷಣ ನೀತಿ ಜಾರಿ ಮಾಡುತ್ತಿದೆ. ಹಾಗೂ ಬಡವಿದ್ಯಾರ್ಥಿಗಳ ವಿರೋಧಿ ವಿಶೇಷ ಆನ್ಲೈನ್ ಶಿಕ್ಷಣ ಪರೀಕ್ಷೆ ಕೂಡಲೇ ಕೈ ಬಿಡಬೇಕು. ಹಾಗೂ ಖಾಸಗಿ ಕಾಲೇಜುಗಳ ವೃತ್ತಿಪರ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪರಿಹಾರ ಪ್ಯಾಕೇಜ್ ಘೋಷಿಸಬೇಕು, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಬೋಧಕರಿಗೆ ಪರಿಹಾರ ಘೋಷಿಸಬೇಕು, ಖಾಸಗಿ ಶಾಲಾ-ಕಾಲೇಜುಗಳ ಎಲ್ಲಾ ಬೋಧಕರ ಸಿಬ್ಬಂದಿಗೆ ಪರಿಹಾರ ನಿಧಿ ನೀಡಬೇಕು, ಲಾಕ್ಡೌನ್ ಅವಧಿಯಲ್ಲಿ ವೇತನ ನೀಡುವುದನ್ನು ಖಾತ್ರಿಪಡಿಸಿ ಸಂಬಳ ಕಡಿಯದಂತೆ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಬೇಕು, ಎಲ್ಲಾ ಶಿಕ್ಷಣ ಸಂಸ್ಥೆಗಳ ಬೋಧಕರು ಉಪನ್ಯಾಸಕರು ಅತಿಥಿ ಉಪನ್ಯಾಸಕರು ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಉದ್ಯೋಗ ಖಾತ್ರಿ ಪಡಿಸಬೇಕು. ಎಲ್ಲ ಬೇಡಿಕೆಗಳನ್ನು  ಇಟ್ಟುಕೊಂಡು ಇಡೀ ದೇಶವ್ಯಾಪಿ ಆನ್ ಲೈನ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಅತಿಥಿ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊಪ್ಪಳದಲ್ಲಿ ಕೂಡ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ಈ ಆನ್ ಲೈನ್ ಹೋರಾಟದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹಾಗೂ ಅತಿಥಿ ಉಪನ್ಯಾಸಕರಾದ ರಮೇಶ್ ವಿದ್ಯಾರ್ಥಿ ಸಂಘಟಕರಾದ ಮೌಲಾಸಾಬ್ ರಮೇಶನ್ ವಂಕಲ ಕುಂಟೆ ಶರಣು ಗಡ್ಡಿ ಭಾಗವಹಿಸಿದ್ದರು.
Please follow and like us:
error