ಅಕ್ಷರದಾಸೋಹ ನೌಕರರ ಸಂಘದ ನಾಯಕರನ್ನು ಹೋರಾಟಗಾರರ ಬೇಷರತ್ ಬಿಡುಗಡೆಗೆ ಆಗ್ರಹ

ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ .

ಅಕ್ಷರ ದಾಸೋಹ ನೌಕರರು ಕಳೆದ ಐದು ತಿಂಗಳಿಂದ ತಮ್ಮ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಅನೇಕ ಮನವಿ ಪತ್ರಗಳನ್ನು ನೀಡಿದ್ದಾರೆ. ರಾಜ್ಯದ ಆಯಾ ಜಿಲ್ಲೆ ಮತ್ತು ತಾಲೂಕಿನಲ್ಲಿ ಸ್ವಾತಂತ್ರ್ಯ ಉತ್ಸವದ ದಿನದ ತನಕ ಐದು ದಿನ ಉಪವಾಸ ಸತ್ಯಾಗ್ರಹ, ಧರಣ ಇತ್ಯಾದಿ ಹೋರಾಟ ಮಾಡಿದ್ದಾರೆ. ಆದರೆ ಇದೂವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಇಲ್ಲದ ಪ್ರಯುಕ್ತ, ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಮಾನ್ಯ ಶಿಕ್ಷಣ ಸಚಿವರನ್ನು ಭೇಟಿಯಾಗಲು ದೈಹಿಕ ಅಂತರ ಕಾಯ್ದುಕೊಂಡು ಅವರ ಮನೆ ಮುಂದೆ ಹೋಗುವಾಗ ಪೋಲಿಸರು ಅಲ್ಲಿದ್ದ ನಮ್ಮ ಸದಸ್ಯರನ್ನೆಲ್ಲ ಬಂಧನ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಮತ್ತು ಅಸಾಂವಿಧಾನಿಕ ಹಾಗೂ ಅಪ್ರಜಾಸತ್ತಾತ್ಮಕ ಕ್ರಿಯೆಯಾಗಿದೆ. ಬೇಡಿಕೆ ಕೇಳಿದರೆ ಬಂಧಿಸುವ ಸರ್ಕಾರದ ನೀತಿಯನ್ನು ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ. ಮತ್ತು ಬಂಧಿತರನ್ನು ಈ ಕೂಡಲೇ ಬೇಷರತ್ ಬಿಡುಗಡೆಗೆ ಒತ್ತಾಯಿಸುತ್ತೇವೆ.ಸಿಐಟಿಯು ಸಂಯೋಜಿತ ಅಕ್ಷರ ದಾಸೋಹ ನೌಕರರ ಸಂಘಟನೆಯು ಸರಕಾರದ ಮುಂದಿಟ್ಟ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸುತ್ತೇವೆ. ಬಡ ದುಡಿಯುವ ಮಹಿಳೆಯರ ಸಂವಿಧಾನಾತ್ಮPÀ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಒತ್ತಾಯಿಸುತ್ತೇವೆ.
¨ÉÃrPÉUÀ¼ÀÄ

1) ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಎಲ್ಲಾ ನಾಯಕರನ್ನು ಹೋರಾಟಗಾರರನ್ನು ಬೇಷರತ್ ಬಿಡುಗಡೆಗೆ ಮಾಡಬೇಕು೨) ಈ ಕೂಡಲೆ ಅಕ್ಷರ ದಾಸೋಹ ನೌಕರರ ೬ ತಿಂಗಳ ವೇತನ ಬಿ????? ಮಾಡಬೇಕು೨೩) ಪಿಂಚಣಿ ಯೋಜನೆ ಜಾರಿ ಮಾಡಬೇಕುವಂದನೆಗಳೊಂದಿಗೆ

ಲಕ್ಷ್ಮೀದೇವಿ ಸೋನಾರ್ ಅನ್ನಪೂರ್ಣ ಕುಷ್ಟಗಿ ಶಿವನಗೌಡ ಮಾಲಿ ಪಾಟೀಲ್ ಅಧ್ಯಕ್ಷರು ಖಜಾಂಚಿ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಸಮಿತಿ ಕೊಪ್ಪಳ ಜಿಲ್ಲಾ ಸಮಿತಿ ಕೊಪ್ಪಳ ಜಿಲ್ಲಾ ಸಮಿತಿ ಕೊಪ್ಪಳ

Please follow and like us:
error