fbpx

ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ : ವಾಹನ, ಮರಳು ವಶಕ್ಕೆ

ಜಿಲ್ಲಾ ಉಸ್ತುವಾರಿ ಸಚಿವರ ಪತ್ರಿಕಾಗೋಷ್ಠಿಯಲ್ಲಿ  ಪ್ರಸ್ತಾಪವಾದ ಹಿನ್ನೆಲೆಯ ಎಫೆಕ್ಟ್

ಗಂಗಾವತಿ : ಉಪವಿಭಾಗಾಧಿಕಾರಿಗಳು ಕೊಪ್ಪಳ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗಂಗಾವತಿ ತಾಲೂಕಿನ ತುಂಗಭದ್ರಾ ನದಿ ದಂಡೆಯ ವಿವಿಧ ಕಡೆಗಳಲ್ಲಿ ದಾಳಿ ಮಾಡಲಾಗಿ ಬಸವನದುರ್ಗ ಗ್ರಾಮದಲ್ಲಿ  ಮರಳು ಸಮೇತ ಕೃತ್ಯಕ್ಕೆ ಬಳಸಿದ ಒಂದು ಟ್ರ್ಯಾಕ್ಟರ್ ಹಾಗೂ ಒಂದು ಮೊಟರಬೈಕ್ ವಾಹನ ಚಾಲಕನ ಸಮೇತ ವಶಕ್ಕೆ ಪಡೆದು ವಾಹನದ ಮಾಲಿಕ ಹಾಗೂ ಚಾಲಕನ ಮೆಲೆ ಪ್ರಕರಣ ದಾಖಲು ಮಾಡಲಾಗಿದೆ.

ಗಂಗಾವತಿ ತಾಲೂಕಿನಲ್ಲಿ ಅಕ್ರಮ ಮರಳು ದಂದೆ ನಡೆಯುತ್ತಿದೆ ಅದೂ ಸಹ ಜಿಲ್ಲಾ ಉಸ್ತುವಾರಿ ಸಚಿವರ ಹೆಸರೇಳಿಕೊಂಡು ಕೆಲವರು ಅಕ್ರಮ ದಂದೆ ನಡೆಸುತ್ತಿದ್ದಾರೆ ಎನ್ನುವ ವಿಷಯ ಜಿಲ್ಲಾ ಉಸ್ತುವಾರಿ ಸಚಿವರ ಪತ್ರಿಕಾಗೋಷ್ಠಿಯಲ್ಲಿ  ಪ್ರಸ್ತಾಪವಾದ ಹಿನ್ನೆಲೆಯ ಎಫೆಕ್ಟ್ ಎಂದು ಹೇಳಲಾಗುತ್ತಿದೆ.

 ನಾಗರಹಳ್ಳಿ ಗ್ರಾಮದ ತುಂಗಭದ್ರ ನದಿ ದಂಡೆಯ ದಡದಲ್ಲಿ 3 ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿದ ಸುಮಾರು ೦೫ ಟಿಪ್ಪರ್ ಅನಧಿಕೃತ ಮರಳನ್ನು  ಸೀಜ್ ಮಾಡಲಾಗಿರುತ್ತದೆ ಹಾಗೂ ಚಿಕ್ಕಜಂತಕಲ್ ಗ್ರಾಮದ ಕಂಪ್ಲಿ ಬ್ರೀಡ್ಜ್ ಹತ್ತಿರ ಮರಳು ಎತ್ತಲು ಬಳಸುವ 4 ತೆಪ್ಪ (ದೊಣಿ) ವಶಕ್ಕೆ ಪಡೆಯಲಾಗಿದ್ದು, ಮತ್ತು ಹಂಪಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಮಲ್ಲಾಪೂರ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ  ನಡೆಯುವ ಜಾಗೆ ಪರಿಶೀಲಿಸಲಾಯಿತು ಸ್ಥಳದಲ್ಲಿದ್ದ ದ್ರಾಕ್ಷಿ ತೋಟಕ್ಕೆ ಬಳಸುವ ಕಲ್ಲುಗಳನ್ನು ನಾಶಪಡಿಸಲಾಯಿತು ಸದ್ರಿ ದಾಳಿಯಲ್ಲಿ ಮಾನ್ಯ ಸಹಾಯಕ ಆಯುಕ್ತರು ಕೊಪ್ಪಳ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಸೈಯದ್ ಫಾಸಿಲ್ , ಗಂಗಾವತಿ ತಹಸೀಲ್ದಾರರಾದ ಶ್ರೀಮತಿ ಕವಿತಾ ಹಾಗೂ ಗಂಗಾವತಿ ಕಂದಾಯ ನಿರೀಕ್ಷಕರಾದ ಮಂಜುನಾಥ್ ಹಿರೇಮಠ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Please follow and like us:
error
error: Content is protected !!