ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ- ಆರ್.ಎಸ್ ಉಜ್ಜಿನಕೊಪ್ಪ

 

ಕೊಪ್ಪಳ : ಗಂಗಾವತಿ ಉಪವಿಭಾಗದಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಜನರ ಸಹಕಾರ ಹಾಗೂ ಇಲಾಖೆಯ ಅಧಿಕಾರಿಗಳ ಜೊತೆ ಇದಕ್ಕೇಲ್ಲಾ ಕಡಿವಾಣ ಹಾಕಲಾಗುವುದು ಎಂದು ಡಿವೈಎಸ್ಪಿ ಆರ್.ಎಸ್ ಉಜ್ಜಿನಕೊಪ್ಪ ಹೇಳಿದರು. ಅವರು ಬುಧುವಾರದಂದು ಜಿಲ್ಲೆಯ ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಆಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಮಾತನಾಡಿ, ಗಂಗಾವತಿಯನ್ನು ಮಿನಿ ಮುಂಬೈ ಎಂದು ಕರೆಯಲಾಗುತ್ತಿದೆ. ಅಲ್ಲದೆ ಇಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಇದೆ. ಮರಳು ದಂಧೆ, ಇಸ್ಪೀಟು, ಮಟ್ಕಾ ಸೇರಿದಂತೆ ಅರಣ್ಯಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಸಹ ಇದೆ. ಇದರಿಂದ ನನ್ನ ಉಪವಿಭಾಗದ ಎಲ್ಲಾ ಪೊಲೀಸ್ ಅಧಿಕಾರಿಗಳ & ಸಿಬ್ಬಂದಿಗಳ ಸಭೆ ನಡೆಸಿ ಅಕ್ರಮ ಕಡಿವಾಣಕ್ಕೆ ಸೂಚಿಸಲಾಗುವುದು ಎಂದರು. ಇನ್ನು ಜಿಲ್ಲೆಯ ಎಸಿಬಿಯಲ್ಲಿ ಕಾರ್ಯನಿರ್ವಹಿಸಿದ ಅನುಭದ ಜೊತೆಗೆ ಜನರ ಸಹಕಾರ ತೆಗೆದುಕೊಂಡು ಉತ್ತಮ ಆಡಳಿತ ನೀಡಲಾಗುವುದು ಎಂದರು..

Please follow and like us:
error