ಅಂಬಿ ನಿಂಗ್ ವಯಸ್ಸಾಯ್ತೋ- ವಯಸ್ಸಾಗಿರೋದು ದೇಹಕ್ಕೆ ಪ್ರೀತಿಗಲ್ಲ.

ಅಂಬಿ ನಿಂಗ್ ವಯಸ್ಸಾಯ್ತೋ ಚಲನಚಿತ್ರದ ತೆರೆಕಂಡಿದೆ. ಚಲನಚಿತ್ರ ಸಂಪೂರ್ಣ ಅಂಬರೀಷ ಅವರು ಆವರಿಸಿಕೊಳ್ಳುತ್ತಾರೆ. ಚಲನಚಿತ್ರದಲ್ಲಿ ಆಧುನಿಕ ಯುಗದಲ್ಲಿ ವಯಸ್ಸಾದ ತಂದೆಯನ್ನು ಮಕ್ಕಳು ನೋಡಿಕೊಳ್ಳುವ ರೀತಿ, ಕೊಡುವ ಪ್ರೀತಿ ಇಲ್ಲಿ ತೋರಿಸಿದ್ದಾರೆ. ಅಂಬರೀಷ ಮತ್ತು ದಿಲೀಪರಾಜ ತಂದೆ ಮಕ್ಕಳ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತನ್ನದೇ ಶೈಲಿಯಲಿ ಸಾಹಸ ಕಲಾವಿದನಿಂದ, ಸಾಹಸ ನಿರ್ದೇಶಕನಾಗಿ ಹಂತ ಹಂತವಾಗಿ ಬೆಳೆದ ಅಂಬಿ. ಮನೆಯ ವಾತವರಣ ಹಿಡಿಸದೆ ಪ್ರೀತಿಯನ್ನು ಹುಡುಕುತ್ತಾ ಬುಲೆಟ್ ಹತ್ತುತ್ತಾನೆ. ಪ್ರೇಯಸಿ ನಂದಿನಿ ಕೇರಳದಲ್ಲಿರುವುದನ್ನು ಪತ್ತೆಹಚ್ಚಿದ ಅಂಬಿ. ನಂದಿನಿ( ಸುಹಾಸಿನಿ) ಹುಡುಕಿಕೊಂಡು ಕೇರಳ ತಲುಪುತ್ತಾನೆ. ಅಂಬಿಗೆ ಇಳಿವಯಸ್ಸಿನಲ್ಲೂ ಪ್ರೀತಿ ಸಿಗುತ್ತಾ, ಮಕ್ಕಳು, ಮೊಮ್ಮಕ್ಕಳು ಅಂಬಿಯನ್ನು ಸೇರುತ್ತಾರಾ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕಿದ್ದರೆ ಚಲನಚಿತ್ರ ವೀಕ್ಷಿಸಿ. ಸುಹಾಸಿನಿ, ಸುದೀಪ, ಶ್ರುತಿ ಹರಿಹರನ್,ರಿಷಬ್ ಶೆಟ್ಟಿ, ರವಿವರ್ಮ, ರಾಕಲೈನ್ ವೆಂಕಟೇಶ, ಶಿವರಾಜ ಕೆ.ಆರ್.ಪೇಟೆ, ಗೀತಾ, ಅವಿನಾಶ, ತಾರಾಗಣದಲ್ಲಿದ್ದಾರೆ. ಸಂಗೀತ ಅರ್ಜುನ ಜನ್ಯ, ಹೇ ಜಲೀಲ ಹಾಡು ಗುನುಗುವಂತಿದೆ, ನಿರ್ದೇಶನ ಗುರುದತ್ ಗಾಣಿಗ ಅವರದು ಇನ್ನಷ್ಟು ಸಾಣೆಹಿಡಿದಿದ್ದರೆ ಅಂಬರೀಷ ಚಿತ್ರಜೀವನದ ಮಹತ್ವದ ಚಿತ್ರಗಳಲ್ಲೊಂದಾಗುತ್ತಿತ್ತು.

-ನಾಗರಾಜನಾಯಕ ಡಿ.ಡೊಳ್ಳಿನ
ಕೊಪ್ಪಳ

Please follow and like us:
error