ಅಂಜನಾದ್ರಿ ಬೆಟ್ಟದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಸಂಸದರ ಒತ್ತಾಯ

೨೦ ರಂದು ಸಂಸದರು ಸಂಸತ್ ಅಧಿವೇಶನದಲ್ಲಿ ಮಾತನಾಡಿ ಅಂಜನಾದ್ರಿ ಬೆಟ್ಟವು ಶ್ರೀ ಹನುಮಾನ ಜನ್ಮ ಸ್ಥಳವಾಗಿದ್ದು ಪ್ರತಿನಿತ್ಯ ಸಾವಿರಾರು ಭಕ್ತಾಧಿಗಳು ದೇಶದ ನಾನಾ ಭಾಗಗಳಿಂದ ಆಗಮಿಸುತ್ತಿದ್ದಾರೆ. ಇಲ್ಲಿ ಬರುವ ಯಾತ್ರಿಕರಿಗೆ ಮೂಲಭೂತ ಸೌಲಭ್ಯಗಳು ಇಲ್ಲಾ. ಇದೊಂದು ಸಾಂಪ್ರದಾಯಿಕ ಧಾರ್ಮಿಕ ಯಾತ್ರಾ ಸ್ಥಳವಾಗಿದೆ. ಇಲ್ಲಿ ಚಾಲುಕ್ಯರು, ಕದಂಬರರು, ರಾಷ್ಟ್ರಕೂಟರು ಆಳಿದಂಥಹ ಐತಿಹಾಸಿಕ ಸ್ಥಳವಾಗಿದೆ. ಇದರ ಸುತ್ತಮುತ್ತಲೂ ವಿಜಯನಗರ

ಸಾಮ್ರಾಜ್ಯ ಮತ್ತು ಜೈನ ಬಸದಿಗಳ ತಾಣವಾಗಿದೆ. ಅಲ್ಲದೇ ಅನೆಗೊಂದಿ ಕೋಟೆ, ಕೊಪ್ಪಳ ಕೋಟೆ ಮತ್ತು ಕಂಪ್ಲಿ ಕೋಟೆಗಳು ಇವೆ. ಆನೆಗೊಂದಿಯ ಪಂಪಾ ಸರೋವರ ಮತ್ತು ದುರ್ಗಾಬೆಟ್ಟ, ನವ ಬೃಂದಾವನಗಳು ಯಾತ್ರಿಕರ ಸಂದರ್ಶನ ಸ್ಥಳವಾಗಿವೆ. ಹೀಗಾಗಿ ಯಾತ್ರಿಕರ ವಾಸ್ತವ್ಯಕ್ಕಾಗಿ ಒಂದು ಸುಸಜ್ಜಿತ ಯಾತ್ರಿ ನಿವಾಸದ ಅವಶ್ಯವಾಗಿದೆ ಎಂದು ಸಂಸತ್ತಿನಲ್ಲಿ ಶ್ರೀ ಕರಡಿ ಸಂಗಣ್ಣ ಸಂಸದರು ಒತ್ತಾಯಿಸಿದ್ದಾರೆ.

Please follow and like us:
error