15 ದಿನಗಳ ಜೀವನ್ಮರಣ ಹೋರಾಟದಲ್ಲಿ ಗುಣಮುಖರಾದ ಸ್ವಾಮೀಜಿ

ಶ್ರೀ ಗವಿಸಿದ್ದೇಶ್ವರ ಅಜ್ಜನ ಪವಾಡ..!

ಕನ್ನಡನೆಟ್ ನ್ಯೂಸ್ : ಕೊಪ್ಪಳದ ಗವಿಮಠದ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಕರೋನಾ ಸೋಂಕಿನಿಂದ ದಾಖಲಾಗಿದ್ದ ಸ್ವಾಮೀಜಿಯೊಬ್ಬರು 15 ದಿನಗಳ ಕಾಲ ಜೀವನ್ಮರಣದ ಜೊತೆ ಹೋರಾಡಿ ಗುಣಮುಖರಾಗಿದ್ದಾರೆ. ಹೌದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಅಮೋಘ ಶ್ರೀಸಿದ್ದೇಶ್ವರ ಸ್ವಾಮಿಗಳ ಮಠದ ಮಹಾದೇವ ಸ್ವಾಮಿಜೀಯವರು ಗುಣಮುಖರಾಗಿದ್ದು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೊಪ್ಪಳದ ಗವಿಮಠದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಇವರು ಆಸ್ಪತ್ರೆಗೆ ದಾಖಲಾದಾಗ ಇವರ ಸ್ಯಾಚುರೇಶನ್ 40ರ ಮಟ್ಟದಲ್ಲಿತ್ತು.
ಬದುಕುಳಿಯುವ ಸಾಧ್ಯತೆಗಳು ಬಹಳ ಕಡಿಮೆ ಇದ್ದವು. ಆದರೆ ವೈದ್ಯರ ಚಿಕಿತ್ಸೆ ಮತ್ತು ಶ್ರೀಗವಿಸಿದ್ದೇಶ್ವರ ಅಜ್ಜನ ಆಶೀರ್ವಾದ ಹಾಗೂ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆತ್ಮಸ್ಥೈರ್ಯ ನುಡಿಗಳಿಂದ ಗುಣಮುಖರಾಗಿದ್ದಾರೆ.
ಮಂಗಳವಾರದಂದು ಆಸ್ಪತ್ರೆಯಿಂಧ ಡಿಸ್ಚಾರ್ಜ್ ಆಗುವಾಗ ಭಾವುಕರಾದ ಮಹಾದೇವ ಸ್ವಾಮಿಗಳು,
ನಿಮ್ಮ ಜೊತೆ ನಾನು ಮತ್ನಾಡುತ್ತಿದ್ದೇನೆ ಅಂದ್ರೆ ಇಲ್ಲಿನ ವೈದ್ಯರ ಸಿಬ್ಬಂದಿಯ ಆರೈಕೆ ಹಾಗೂ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದ ಎಂದರು. ಇದರ ಜೊತೆಗೆ
ಕೊರೊನಾ ಗೆಲ್ಲುವುದಕ್ಕೆ ಚಿಕಿತ್ಸೆಗಿಂತ ಆತ್ಮಸ್ಥೈರ್ಯ ಹಾಗೂ ಮನೋಧೈರ್ಯ ಮುಖ್ಯ ಅಂತಾ ಹೇಳಿದರು.
ಒಟ್ನಲ್ಲಿ ಗವಿಮಠದ ಕೊವೀಡ್ ಆಸ್ಪತ್ರೆ ಇದೀಗ ಎಲ್ಲಾರಿಗೂ ಸಂಜೀವಿನಿ ಆಗ್ತಾ ಇರೋದು ಅಜ್ಜನ ಪವಾಡವೇ ಸರಿ

Please follow and like us:
error