ಹೋಳಿ ಹಬ್ಬ ಸಮೂಹ ಆಚರಣೆಯಿಂದ ದೂರವಿರಲು ಸಿಎಂ ಕರೆ

ಬೆಂಗಳೂರು : ಹೋಳಿ ಹಬ್ಬದ ನಿಮಿತ್ಯ ಜನತೆಗೆ ಟ್ವಿಟರ್ ಮೂಲಕ ಶುಭ ಕೋರಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಂಕ್ರಾಮಿಕ ರೋಗದ ಭೀತಿಯ ಹಿನ್ನೆಯಲ್ಲಿ ಸಮೂಹ ಆಚರಣೆಗಳಿಂದ ದೂರವಿರಿ ಎಂದು ಕರೆ ನೀಡಿದ್ದಾರೆ.

ನಾಡಿನ ಸಮಸ್ತ ಜನರಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬಣ್ಣದ ಓಕುಳಿಯ ರಂಗು ನಮ್ಮೆಲ್ಲರ ಬಾಳನ್ನು ಅರ್ಥಪೂರ್ಣವಾಗಿ ತುಂಬಲಿ. ಬಣ್ಣ ಮೈಮೇಲಿರುವುದಕ್ಕಿಂತ ಮುಖ್ಯವಾಗಿ ಬದುಕಿನಲ್ಲಿರಲಿ. ಸುರಕ್ಷಿತ ಆಚರಣೆಗೆ ಮಹತ್ವ ಕೊಡೋಣ. ಸಾಂಕ್ರಾಮಿಕ ರೋಗದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಸಮೂಹ ಆಚರಣೆಗಳಿಂದ ದೂರವಿರೋಣ.

Please follow and like us:
error