ಹಂದಿಮರಿ ಜೊತೆ ಬ್ಯಾಂಕ್ ಸರತಿ ಸಾಲಲ್ಲಿ ನಿಂತ ನಟ !

ಹೈದರಾಬಾದ್, ನ.24: ಸೆಲೆಬ್ರಿಟಿಗಳು ನಿಂತರೂ ಸಾಕು, ಕೂತರೂ ಸಾಕು ಅದು ಸುದ್ದಿಯಾಗಿ ಬಿಡುತ್ತದೆ. ಹಾಗಿರುವಾಗ ಖ್ಯಾತ ಸಿನೆಮಾ ನಟನೋರ್ವ cinema_star_with_pig_in_atmಹಂದಿಮರಿ ಜೊತೆ ಎಟಿಎಂ ಎದುರು ಕ್ಯೂ ನಿಂತರೆ ಕೇಳಬೇಕೇ.. ಕ್ಯೂನಲ್ಲಿದ್ದ ಜನರ ಜೊತೆ ದಾರಿಯಲ್ಲಿ ನಡೆದು ಹೋಗುತ್ತಿದ್ದ ಜನ ಕೂಡಾ ಒಮ್ಮೆ ನಿಂತು ಇತ್ತ ನೋಡಿ ಮುಂದುವರಿಯುತ್ತಿದ್ದರು.

ಈ ಘಟನೆ ನಡೆದಿದ್ದು ಹೈದರಾಬಾದಿನಲ್ಲಿ. ದಕ್ಷಿಣ ಭಾರತದ ಖ್ಯಾತ ಸಿನೆಮಾ ನಟ ರವಿ ಬಾಬು ತನ್ನ ಕಂಕುಳಡಿ ಹಂದಿಮರಿಯೊಂದನ್ನು ಇರಿಸಿಕೊಂಡು ಎಟಿಎಂ ಎದುರಿಗಿನ ಸರದಿ ಸಾಲಿನಲ್ಲಿ ನಿಂತು ಹಣ ಪಡೆಯಲು ಕಾಯುತ್ತಿದ್ದರು. ಸಾಲಿನಲ್ಲಿದ್ದ ಮಂದಿಗೆ ಹಣ ಪಡೆಯುವ ತಲೆಬಿಸಿಯ ಜೊತೆಗೆ ಒಂದಿಷ್ಟು ಕುತೂಹಲ.. ಅಷ್ಟಕ್ಕೂ ರವಿ ಬಾಬುಗೇಕೆ ಹಂದಿಮರಿ ಮೇಲೆ ಇಷ್ಟೊಂದು ಪ್ರೀತಿ ಅಂತ. ವಿಷಯ ಏನೆಂದರೆ, ರವಿ ಬಾಬು ಅಭಿನಯದ ಮುಂದಿ ತೆಲುಗು ಸಿನೆಮಾದ ಹೆಸರು ‘ಅಧಿಗೊ’. ಇದರಲ್ಲಿ ಹಂದಿಮರಿಗೂ ಒಂದು ವಿಶೇಷ ಪಾತ್ರ ಇದೆಯಂತೆ. ಈ ಕಾರಣದಿಂದ ಅವರು ಹಂದಿಮರಿಯ ಜೊತೆ ಕಂಪ್ಯೂಟರ್ ಗ್ರಾಫಿಕ್ಸ್ ಲ್ಯಾಬ್‌ಗೆ ಹೋಗುತ್ತಿದ್ದರು. ಆ ವೇಳೆ ಕಿಸೆಯಲ್ಲಿ ಹಣ ಇಲ್ಲ ಎಂಬುದು ನೆನಪಾಗಿದೆ. ಸರಿ, ಕಾರಿನಿಂದ ಇಳಿದವರೇ ಹಂದಿಮರಿಯೊಂದಿಗೆ ಎಟಿಎಂ ಎದುರು ಕ್ಯೂನಲ್ಲಿ ನಿಂತಿದ್ದಾರೆ.

ಸರತಿ ಸಾಲಿನಲ್ಲಿ ಇವರೆದುರು ನಿಂತಿದ್ದ ನಾಲ್ವರಿಗೆ ತಮ್ಮ ಹಿಂದೆ ಸ್ಟಾರ್ ನಟನೋರ್ವ ನಿಂತಿದ್ದಾರೆ. ಅವರ ಕಂಕುಳಲ್ಲಿ ಒಂದು ಹಂದಿಮರಿ ಇದೆ ಎಂಬ ವಿಷಯಕ್ಕಿಂತಲೂ, ತಮಗೆ ಈ ದಿನ ಹಣ ಸಿಗುತ್ತದೆಯೇ ಇಲ್ಲವೇ ಎಂಬ ವಿಷಯವೇ ಹೆಚ್ಚಿನ ಮಹತ್ವದ್ದಾಗಿತ್ತು . ಕಡೆಗೂ ಹಂದಿಮರಿ ಸಹಿತ ಎಟಿಎಂ ಒಳಹೊಕ್ಕ ರವಿ ಬಾಬು ಹಣ ಪಡೆದರು. ಬಳಿಕ ಹಂದಿಮರಿ ಕುರಿತು ವಿವರಿಸಿದರು.

ಎಟಿಎಂ ಎದುರು ಕ್ಯೂ ನಿಲ್ಲುವಾಗ ನನ್ನ ಸಹಾಯಕನ ಬಳಿ ಹಂದಿಮರಿ ನೀಡಿದೆ. ಆದರೆ ಆತನ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಾನೇ ಹಿಡಿದುಕೊಳ್ಳಬೇಕಾಯಿತು. ಹಂದಿಮರಿಯನ್ನು ಹಿಡಿದುಕೊಳ್ಳುವುದು ಸುಲಭವಲ್ಲ. ಅದರ ಮುಂಗಾಲಿನ ನಡುವೆ ಕೈಯಿಂದ ಹಿಡಿದುಕೊಂಡು ನಮ್ಮ ಮೈಗೆ ಒತ್ತಿಹಿಡಿದರೆ ಆರಾಮವಾಗಿರುತ್ತದೆ ಎನ್ನುತ್ತಾರೆ. ಈ ಹಂದಿಮರಿ ಹೆಸರು ಬಂಟಿ ಅಂತ. ಹಂದಿಮರಿಗಳಿಗೆ ಸದಾ ತಿನ್ನುತ್ತಿರುವ ಅಭ್ಯಾಸ. ಆದ್ದರಿಂದಲೇ ವೇಗವಾಗಿ ಕೊಬ್ಬಿ ಬೆಳೆಯತ್ತದೆ. ಸಿನೆಮಾದಲ್ಲಿ ಹಂದಿಮರಿಯ ಪಾತ್ರ ಬದಲಾಗದಿರಲಿ ಎಂಬ ಕಾರಣಕ್ಕಾಗಿ, ಸಿನೆಮಾ ತಂಡದವರು 25 ಹಂದಿಮರಿಗಳನ್ನು ‘ಬುಕ್’ ಮಾಡಿಟ್ಟುಕೊಂಡಿದ್ದಾರೆ.

Please follow and like us:
error