ಸಮಾಜಕ್ಕೆ ಕೊಡುಗೆಯೇ ನಿಜವಾದ ಸೇವೆ: ಸಂಗಣ್ಣ ಕರಡಿ

. ಕುಮಾರಸ್ವಾಮಿ ಹಿರೇಮಠ್‍ಗೆ ಸಿಸಿಐಎಂ ಸದಸ್ಯತ್ವ | ಜಂಗಮ ಸಮಾಜದಿಂದ ಸನ್ಮಾನ

ಕೊಪ್ಪಳ: ಮನುಷ್ಯನ ಜೀವನದಲ್ಲಿ ಸಾಮಾಜಿಕ ಸ್ಥಾನಮಾನ ಸಿಕ್ಕಮೇಲೆ ಅದರಿಂದ ಸಮಾಜಕ್ಕೆ ಉನ್ನತ ಕೊಡುಗೆ ನೀಡುವಂತಾಗಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಮಹಾಂತಯ್ಯ ಕಲ್ಯಾಣ ಭವನದಲ್ಲಿ ಸಿಸಿಐಎಮ್ ಸದಸ್ಯ ಡಾ. ಕುಮಾರಸ್ವಾಮಿ ಹಿರೇಮಠ ಮತ್ತು ಜಿಲ್ಲೆಯ ಜಂಗಮ ಸಮಾಜ ಬಾಂಧವರಿಂದ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಡಾ. ಕುಮಾರಸ್ವಾಮಿ ಅವರು ರಾಷ್ಟ್ರಮಟ್ಟದ ವೈದ್ಯಕೀಯ ಸೇವೆಗೆ ನಾಮನಿರ್ದೇಶನ ಹೊಂದಿರುವುದು ನಮಗೆಲ್ಲ ಸಂತಸ ತಂದಿದೆ. ಇದರಲ್ಲಿ ನಮ್ಮ ಸಾಧನೆ ಏನಿಲ್ಲ. ಈ ಭಾಗದ ಸಂಸದನಾಗಿ ನಮ್ಮ ಭಾಗದ ವಿದ್ಯಾವಂತರ ಹೆಸರು ಶಿಫಾರಸು ಮಾಡುವ ಮೂಲಕ ನನ್ನ ಕರ್ತವ್ಯ ಮಾಡಿದ್ದೇನೆ. ಇದರ ಹಿಂದೆ ಅವರ ಪೂರ್ವಜರ ಪುಣ್ಯ ಮತ್ತು ಇವರಲ್ಲಿನ ವಿದ್ಯೆ, ಅದಕ್ಕೆ ಅವರು ಒಟ್ಟ ಪರಿಶ್ರಮವೇ ಕಾರಣ ಎಂದರು.
ಇದರ ನಿಜವಾದ ಕೀರ್ತಿ ಸಲ್ಲಬೇಕಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ ಅವರಿಗೆ. ಇವರ ನೆರವಿನಿಂದ ನಮ್ಮ ಭಾಗದವರೊಬ್ಬರು ನಾಮನಿರ್ದೇಶನ ಹೊಂದಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಉದಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಕುಮಾರಸ್ವಾಮಿ ಬಿ. ಹಿರೇಮಠ ಕೇಂದ್ರದ ಸಿಸಿಐಎಮ್ ಸದಸ್ಯತ್ವಕ್ಕೆ ನೇಮಿಸಲ್ಪಡುವ ಮೂಲಕ ಜಂಗಮ ಸಮಾಜಕ್ಕೆ ಹೆಮ್ಮೆ ತಂದಿದ್ದಾರೆ. ಈ ಕಮೀಟಿಗೆ ಕರ್ನಾಟಕದಿಂದ ಕೇವಲ 5 ಜನ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ಹೈದರಾಬಾದ್ ಕರ್ನಾಟಕ ಭಾಗದಿಂದ ಡಾ. ಕುಮಾರಸ್ವಾಮಿ ಹಿರೇಮಠ ಅವರು ಆಯ್ಕೆಯಾಗಿದ್ದು ಹೆಮ್ಮೆಯ ವಿಷಯ. ಈ ನೇಮಕದಲ್ಲಿ ಸಂಸದ ಸಂಗಣ್ಣ ಕರಡಿಯವರ ಸಹಕಾರ ಅಪಾರವಾಗಿದ್ದು ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬಿ.ಎಮ್. ಭೂಸನೂರಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಪರಣ್ಣ ಮನವಳ್ಳಿ, ಮಾಜಿ ಶಾಸಕ ಕೆ. ಶರಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಅಳವಂಡಿ, ತಹಶಿಲ್ದಾರ ಗುರುಬಸವರಾಜ, ರಾಘವೆಂದ್ರ ಪಾನಘಂಟಿ, ತಿಪ್ಪೆರುದ್ರಸ್ವಾಮಿ, ನಿಂಗಮ್ಮ ಸಂಗಣ್ಣ ಕರಡಿ, ಕಲ್ಲಯ್ಯ ಹಿರೇಮಠ, ಪ್ರಭು ಹೆಬ್ಬಾಳ, ಎಸ್.ರುದ್ರಯ್ಯ, ಕರಿಯಪ್ಪ ಮೇಟಿ, ಮಲ್ಲಣ್ಣ ಬಳ್ಳೊಳ್ಳಿ ಸೇರಿದಂತೆ ಜಂಗಮ ಸಮಾಜದ ಇನ್ನಿತರರು ಉಪಸ್ಥಿತರಿದ್ದರು.

Please follow and like us:
error