ಲಾಕ್ ಡೌನ್ ಸಮಯವನ್ನು ಹಿರಿಯರಿಂದ ಕಿರಿಯರವರೆಗೂ ಸಾರ್ಥಕ ರೀತಿಯಲ್ಲಿ ಬಳಸಬೇಕು

ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಸಮಯ ಕಳೆಯುವುದು ತುಂಬಾನೇ ಕಷ್ಟವಾಗಿದೆ, ದಿನನಿತ್ಯ ಕೆಲಸ ಶಾಲೆ ಕಾಲೇಜು ಹಾಗೂ ಇತರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ನಾವು ಏಕಾಏಕಿ ಮನೆಯಲ್ಲಿ ಖಾಲಿ ಇರಬೇಕೆಂದರೆ ಅದು ಬಹಳ ಕಷ್ಟಕರ ಸಂಗತಿ. ಅದಕ್ಕೆ ನಾವು ಇದನ್ನ ಧನಾತ್ಮಕವಾಗಿ ನೋಡಬೇಕು ಅಂದರೆ ಈ ಸಮಯವನ್ನು ನಮ್ಮ ಮನೆಯವರಿಗೆ ಮೀಸಲಿಟ್ಟು ಮತ್ತು ಅವರನ್ನು ಇನ್ನೂ ಹೆಚ್ಚಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಿಕ್ಕಿರುವ ಒಂದು ಸದಾವಕಾಶ ಅಂದುಕೊಳ್ಳಬೇಕು.

ಮನೆಯಲ್ಲಿ ನಮ್ಮ ಹಿರಿಯರ ಜೊತೆ ಹಚ್ಚು ಮಾತಾಡಿ ಅವರ ಹಳೆಯ ನೆನಪುಗಳನ್ನು ಅವರಿಗೆ ನೆನಪಿಸಿ ಅವರೊಂದಿಗೆ ಖುಷಿಯಾಗಿ ಮಾತನಾಡುತ್ತಾ ಸಮಯವನ್ನು ಕಳೆಯಬೇಕು ಹಾಗೂ ಇತರರೊಂದಿಗೆ ಮನೆಯ ಇದರ ಕೆಲಸಗಳಾದ ಅಡುಗೆ, ಸ್ವಚ್ಛತೆ ಮಾಡುವುದರಲ್ಲಿ ಅವರಿಗೂ ಸಹಾಯ ಮಾಡುತ್ತಾ ಅವರ ಜೊತೆ ನಗುನಗುತ್ತ ಮಾತನಾಡುತ್ತಾ ಸಮಯವನ್ನು ಉಪಯೋಗಿಸಿಕೊಳ್ಳಬೇಕು ಇನ್ನು ಮಕ್ಕಳ ಜೊತೆ ಆಟವಾಡುತ್ತಾ ಅವರಿಗೆ ಒಳಾಂಗಣ ಆಟದ ಮಹತ್ವದ ಅರಿವನ್ನು ಮೂಡಿಸಬೇಕು. ಮಕ್ಕಳಿಗೆ ಒಳ್ಳೆಯ ನೀತಿ ಕಥೆಗಳನ್ನು ಹೇಳಿಕೊಡುತ್ತಾ ಅವರಿಗೆ ಉನ್ನತ ಬುದ್ಧಿಯನ್ನು ರೂಪಿಸಬೇಕು.
ಕೊರೋನಾ ಯಿಂದ ಆಗಿರುವ ಈ ಲಾಕ್ ಡೌನ್ ಅನ್ನು ಶಿಕ್ಷ ಅಂದುಕೊಳ್ಳದೆ ನಮ್ಮ ಪ್ರೀತಿಪಾತ್ರರ ಒಡನೆ ಎಲ್ಲರೂ ಮನೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಾ, ಊಟ ಮಾಡುತ್ತಾ, ಒಳಾಂಗಣದ ಆಟವಾದ ಚೆಸ್, ಕೇರಂ, ಹಾವು ಏಣಿ, ಅಳಗುಳಿಮನೆ, ಚೌಕಬಾರ, ಅಂತ್ಯಕ್ಷರಿ, ಇನ್ನು ಮುಂತಾದ ಆಟಗಳ ಜೊತೆ ನಗುತ್ತಾ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ಮನೆಯಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹೆಚ್ಚು ಆತ್ಮೀಯತೆ, ಪ್ರೀತಿ, ವಿಶ್ವಾಸ, ಗೌರವ, ನಂಬಿಕೆ ಬೆಳೆಯುತ್ತದೆ. ಪುಸ್ತಕ ಓದುವ ಹವ್ಯಾಸವಿರುವವರು ಈ ಸಮಯವನ್ನು ಉಪಯೋಗಿಸಿಕೊಂಡು ಹೆಚ್ಚು-ಹೆಚ್ಚು ಪುಸ್ತಕವನ್ನು ಓದಿ ತಮ್ಮ ಜ್ಞಾನವನ್ನು ಇನ್ನೂ ಹೆಚ್ಚು ಬೆಳೆಸಿಕೊಳ್ಳಬಹುದು. ಈ ಸಮಯವನ್ನು ಹಿರಿಯರಿಂದ ಕಿರಿಯರವರೆಗೂ ಸಾರ್ಥಕ ರೀತಿಯಲ್ಲಿ ಬಳಸಬೇಕು ಎನ್ನುವುದು ಎಲ್ಲರ ಇಚ್ಛೆಯಾಗಿದೆ. ಈ ಸಮಯವನ್ನು ಹೆಚ್ಚು ಸಕಾರಾತ್ಮಕವಾಗಿ ಬಳಕೆ ಮಾಡಿಕೊಂಡು ನಾವು ನಡೆದುಬಂದ ಹಾದಿಯಲ್ಲಿ ತಪ್ಪನ್ನು ಸರಿಮಾಡಿಕೊಂಡು ನಮ್ಮ ನಮ್ಮ ಗುರಿ ಮುಟ್ಟಲು ಮುಂದಿನ ಯೋಜನೆಗಳನ್ನು ರೂಪಿಸಿಕೊಳ್ಳುವ ಬಗ್ಗೆ ಧನಾತ್ಮಕ ಚಿಂತನೆ ನಡೆಸುತ್ತಾ ಹಾಗೂ ವೇಗವಾಗಿ ಓಡುತ್ತಿದ್ದ ಬದುಕಿಗೆ ಒಂದು ಪುಟ್ಟ ವಿರಾಮ ಸಿಕ್ಕಂತಾಗಿದೆ ಇದನ್ನು ಎಲ್ಲಾ ರೀತಿಯ ಒಳಿತಿಗಾಗಿ ಉಪಯೋಗಿಸಿಕೊಳ್ಳಿ ಹಾಗೂ ನಮಗೋಸ್ಕರ ನಮ್ಮನ್ನು ಕಾಪಾಡುವುದಕೋಸ್ಕರ ತಮ್ಮ ಮನೆಯವರನ್ನು ಬಿಟ್ಟು ತಮ್ಮ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಿರುವ ಪೊಲೀಸ್ ರವರಿಗೆ, ಡಾಕ್ಟರ್ಸ್ ಗಳಿಗೆ, ಸೈನಿಕರಿಗೆ ಮತ್ತು ಇತರ ಸಂಬಂಧಿತ ಇಲಾಖೆಗಳಿಗೆ ನಮ್ಮದೊಂದು ಗೌರವಾನ್ವಿತ ಸಲ್ಯೂಟ್. ಅವರ ಕರ್ತವ್ಯವನ್ನು ನೆನಸಿ ಅವರ ತ್ಯಾಗವನ್ನು ಅರಿತು ನಾವೆಲ್ಲರೂ ಮನೆಯಲ್ಲೇ ಇದ್ದು ಅವರಿಗೆ ಬೆಂಬಲಿಸೋಣ ಮತ್ತು ಕೊರೋನಾ ಲಾಕ್ ಡೌನ್ ಅನ್ನು ಎಲ್ಲರೂ ಒಟ್ಟಿಗೆ ಸೋಂಕಿನ ಜೊತೆಗೆ ಯುದ್ಧವನ್ನು ಗೆಲ್ಲೋಣ.
ದಿವ್ಯಶ್ರೀ.ವಿ
ಬೆಂಗಳೂರು
Please follow and like us:
error