ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಃ ಡಿಸಿ

ಕೊಪ್ಪಳ
ರಕ್ತ ಪೂರೈಕೆ, ಆರೋಗ್ಯ ಚಿಕಿತ್ಸಾ ಶಿಬಿರ ನಡೆಸುತ್ತಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ
ಕೊಪ್ಪಳ ಶಾಖೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಅವರು ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಜೆ.ಎಚ್. ಪಟೇಲ ಸಭಾಂಗಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಯಾದಗಿರಿಯಲ್ಲಿ ಇದ್ದ ವೇಳೆಯಲ್ಲಿ ರಕ್ತದ ಸಮಸ್ಯೆ ತೀವ್ರವಾಗಿತ್ತು. ರಕ್ತ ಸಿಗದೆ ಒಂದೆರಡು ಸಾವುಗಳು
ಸಂಭವಿಸಿದ್ದವು. ಅಲ್ಲಿ ರೆಡ್ ಕ್ರಾಸ್ ಸಂಸ್ಥೆ ಪ್ರಾರಂಭಿಸಿ, ರಕ್ತ ನಿಧಿ ಸ್ಥಾಪನೆ ಮಾಡುವ ಪ್ರಯತ್ನ ಕೈಗೂಡಲೇ ಇಲ್ಲ.

ಆದರೆ, ಕೊಪ್ಪಳದಲ್ಲಿ ಮಾತ್ರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಅದರ ಕಾರ್ಯವೈಖರಿ ಮೆಚ್ಚಿ ಎರಡು ಬಾರಿ ರಾಜ್ಯಪಾಲರ ಪ್ರಶಸ್ತಿಯನ್ನು ನೀಡಲಾಗಿದೆ.

ಈಗ ನಾನು ಸಹ ಇದರ ಭಾಗವಾಗಿರುವುದು ಹೆಮ್ಮೆಯ ಸಂಗತಿಯೇ ಸರಿ. ಇನ್ನು ಇದರಡಿಯಲ್ಲಿ ಏನೇನು ಸಮಾಜಮುಖಿ ಕಾರ್ಯ ಮಾಡಲು ಸಾಧ್ಯವಿದೆಯೋ ಅವುಗಳೆಲ್ಲನವನ್ನು ಒಟ್ಟಾಗಿ ಮಾಡೋಣ. ಇದೊಂದು ಅಸಹಾಯಕರಿಗೆ ಸಹಾಯ ಮಾಡುವ ಸಂಸ್ಥೆಯಾಗಿದ್ದು, ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಅವರು, ಕಳೆದ ವರ್ಷದ ವಾರ್ಷಿಕ ವರದಿ ಓದಿ, ನಡೆದಬಂದ ದಾರಿ ವಿವರಿಸಿದರು. ಕಳೆದ ಬಾರಿಯ ವಾರ್ಷಿಕ ಮಹಾಸಭೆಯಲ್ಲಿ ನಡೆದ ನಿರ್ಣಯ ಹಾಗೂ ಅವುಗಳ ಅನುಷ್ಠಾನ ಮಾಡಿರುವ ಕುರಿತು ವಿವರಣೆ ಮಾಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮುಂದೆ ಹಲವು ಗುರಿಗಳು ಇವೆ. ಅವುಗಳಲ್ಲಿ ಈಗಾಗಲೇ ಕೆಲವನ್ನು ಕಾರ್ಯಗತ ಮಾಡಿದ್ದು, ಮುಂದಿನ ದಿನಗಳಲ್ಲಿ ಉಳಿದವುಗಳನ್ನು ಕಾರ್ಯಗತ ಮಾಡಲು ಶತಾಯ ಶ್ರಮಿಸಲಾಗುವುದು ಎಂದ ಅವರು, ನೇತ್ರ ಸಂಗ್ರಹಣಾ ಘಟಕ ಪ್ರಾರಂಭಿಸಲಾಗಿದ್ದು, ಐ ಬ್ಯಾಂಕ್ ಸ್ಥಾಪನೆಗಾಗಿ ರೆಡ್ ಕ್ರಾಸ್ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವೈಸ್ ಚೇರಮನ್ ಡಾ. ಚಂದ್ರಶೇಖರ ಕರಮುಡಿ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದುವರೆಗೂ ಅನೇಕ ಜನಪರ ಸೇವಾ ಕಾರ್ಯಕ್ರಮ ಮಾಡಿದ್ದು, ಮುಂದೆಯೂ ಮಾಡುವ ಉದ್ಧೇಶ ಹೊಂದಿದೆ ಎಂದರು. ಇದಕ್ಕೆ ಇನ್ನು ದೊಡ್ಡ ಪ್ರಮಾಣದ ಸಹಕಾರ ನಾವು ನಿರೀಕ್ಷೆ ಮಾಡುತ್ತಿz್ದÉೀವೆ ಎಂದರು.
2016-17 ಹಾಗೂ 2017-18ನೇ ಸಾಲಿನ ಲೆಕ್ಕಪತ್ರ ಹಾಗೂ ಮುಂಗಡ ಆಯಆಯವ್ಯಯದ ಕುರಿತು ಮಾಹಿತಿಯನ್ನು ಖಜಾಂಚಿ ಸುಧೀರ ಅವರಾದಿ ಅವರು ಮಂಡಿಸಿ, ಸರ್ವಾನುಮತದಿಂದ ಅನುಮೋದನೆ ಪಡೆದರು.
ಪ್ರಾರಂಭದಲ್ಲಿ ಸಹನಾ ಸಜ್ಜನ ಮತ್ತು ಕೀರ್ತಿ ಪಾಟೀಲ ಅವರು ಪ್ರಾರ್ಥಿಸಿದರು. ಸಂತೋಷ ದೇಶಪಾಂಡೆ ನಿರೂಪಿಸಿದರು. ರಾಜೇಶ ಯಾವಗಲ್ ಸ್ವಾಗತಿಸಿದರು. ಜಿ.ಎಸ್. ಗೌಡರ ಅವರು ವಂದಿಸಿದರು.
12ಕೆಪಿಎಲ್21
ಕೊಪ್ಪಳ ನಗರದ ಜಿಲ್ಲಾ ಪಂಚಾಯಿತಿ ಜೆ.ಎಚ್. ಪಟೇಲ ಸಭಾಂಗಣದಲ್ಲಿ ನಡೆದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ವರದಿಯನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.

Please follow and like us:

Related posts