ರೆಡ್ ಕ್ರಾಸ್ ಭವನಕ್ಕೆ ಅಡಿಗಲ್ಲು

ಕೊಪ್ಪಳ : ಕೊಪ್ಪಳದಲ್ಲಿಂದು ರೆಡ್ ಕ್ರಾಸ್ ಭವನದ ಅಡಿಗಲ್ಲು ಸಮಾರಂಭ ನೆರವೇರಿತು. ನಗರಾಭಿವೃದ್ಧಿ ಪ್ರಾದಿಕಾರದ ಕಾರ್ಯಾಲಯದ ಹಿಂಭಾಗದಲ್ಲಿನಡೆದ ಕಾರ್ಯಕ್ರಮದಲ್ಲಿ ಗುದ್ದಲಿ ಪೂಜೆಯನ್ನು ಗವಿಮಠದ ಶ್ರೀಗಳು, ಸಂಸದ ಕರಡಿ ಸಂಗಣ್ಣ, ಶಾಸಕ ಹಾಗೂ ಸಂಸದೀಯ ಕಾರ್ಯದರ್ಶಿ ರಾಘವೇಂದ್ರ ಹಿಟ್ನಾಳ ನೆರವೇರಿಸಿದರು. ಬ್ಲಡ್ ಬ್ಯಾಂಕ್, ಐ ಬ್ಯಾಂಕ್, ಸ್ಕಿನ್ ಬ್ಯಾಂಕ್ ಹಾಗೂ ದೇಹದಾನ ಕ್ಕಾಗಿ ಈ ಭವನ ನಿರ್ಮಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಕಾರ್ಯಕ್ರಮ ನಡೆಯಿತು. ವಿವಿದೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಶಿಬಿರದ ಉಪಯೋಗವನ್ನು ಪಡೆದುಕೊಂಡರು. ಕಾರ್ಯಕ್ರಮ ದಲ್ಲಿ ಮಾಜಿ ಜಿ.ಪಂ ಅದ್ಯಕ್ಷ ರಾಜಾಶೇಖರ ಹಿಟ್ನಾಳ, ತಾ.ಪಂ ಅದ್ಯಕ್ಷ ಬಾಲಚಂದ್ರನ್, ಡಾ. ಕೆ.ಜಿ.ಕುಲಕರ್ಣಿ, ಡಾ.ಕೆ.ಶ್ರೀನಿವಾಸ ಹ್ಯಾಟಿ, ರೆಡ್ ಕ್ರಾಸ್ ನ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು