ರಸ್ತೆ ಬದಿಯಲ್ಲಿ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಮಹಿಳೆಯರು

ಕೊಪ್ಪಳ :

ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ 108 ವಾಹನಕ್ಕೆ ಕರೆ ಮಾಡಿದ್ದಾರೆ. ವಾಹನ ಬರಲು ವಿಳಂಭವಾದ ಕಾರ
ರಸ್ತೆ ಬದಿಯಲ್ಲಿಯೇ ಆಶಾಕಾರ್ಯಕರ್ತೆ ಹಾಗೂ ಹಲವು ಮಹಿಳೆಯರು ಸೇರಿ ಹರಿಗೆ ಮಾಡಿಸಿದ ಘಟನೆ ಜರುಗಿದೆ.

ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಸಮೀಪದ ಬಸಾಪುರ ಗ್ರಾಮದ ಹೊರಹೊಲಯದ ಗಂಗಾವತಿ ಹುಲಿಗಿ ರಸ್ತೆಯಲ್ಲಿ ಈ ಘಟನೆ ಜರುಗಿದೆ. ಮೋಡಿಕಾರ ಜನಾಂಗದ ಮಾರೆಮ್ಮ ಎನ್ನುವವರು ಭಿಕ್ಷಾಟನೆಗೆ ತೆರಳುವಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ರಸ್ತೆಯಲ್ಲಿ ಒದ್ದಾಡುವಾಗ ಅಲ್ಲೆ ಜಮೀನಿನ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯರು ಗಮನಿಸಿದ್ದಾರೆ. ಆಶಾ ಕಾರ್ಯಕರ್ತೆಯ ಗಮನಕ್ಕೆ‌ ತರಲಾಗಿದೆ. ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.ಆ್ಯಂಬುಲೆನ್ಸ್ ಬರುವಷ್ಟರಲ್ಲಿ ಹೆರಿಗೆಯಾಗಿ ಒಂದು ಮಗುವಿಗೆ ಜನ್ಮ‌ ನೀಡಿದ ತಾಯಿ, ಅವಳಿ ಮಕ್ಕಳು ಇದ್ದ ಕಾರಣ ಇನ್ನೊಂದು ಮಗುವಿಗೆ ಆ್ಯಂಬುಲೆನ್ಸ್ ನಲ್ಲಿ ಜನ್ಮನೀಡಿದ್ದಾರೆ. ಅವಳಿ ಹೆಣ್ಣುಮಕ್ಕಳಿಗೆ ಜನ್ಮನೀಡಿದ ಮಾರೆಮ್ಮ ಹಾಗೂ ಮಕ್ಕಳು ಆರೋಗ್ಯವಿದ್ದಾರೆ ಎನ್ನಲಾಗಿದೆ.

ಹಿಟ್ನಾಳ್ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು ಆರೈಕೆ ಮಾಡಲಾಗುತ್ತಿದೆ. ಆಶಾ ಕಾರ್ಯಕರ್ತೆ ವೀಣಾ, ನರ್ಸ್
ಕಮಲ, ಅಂಗನವಾಡಿ ಕಾರ್ಯಕರ್ತೆ ಭಾಗ್ಯ, ಗ್ರಾಮದ ಹಲವು ಮಹಿಳೆಯರು ಸೇರಿದಂತ ಯುವಕ ಸಮಯಪ್ರಜ್ಞೆಯಿಂದ ಮಾರೆಮ್ಮ ಅವಳಿ‌ಮಕ್ಕಳಿಗೆ ಜನ್ಮ ನೀಡಿದ್ದು ಆರೋಗ್ಯವಾಗಿದ್ದು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Please follow and like us:
error