ಭಾರತದಲ್ಲಿ ಕರೋನಾದಿಂದ ಸತ್ತವರ ಸಂಖ್ಯೆ ಎಷ್ಟು ಗೊತ್ತಾ?


ಕನ್ನಡನೆಟ್ ನ್ಯೂಸ್ : ದೇಶದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಇಳಿಕೆ ಹಾದಿಯಲ್ಲಿ ಸಾಗಿದ್ದರೂ, ಭಾರತ ಕೋವಿಡ್-19 ಸೋಂಕು ಪ್ರಕರಣಗಳ ವಿಚಾರದಲ್ಲಿ ಶುಕ್ರವಾರ ಎರಡು ಮೈಲುಗಲ್ಲು ದಾಟಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 84 ಲಕ್ಷದ ಗಡಿ ದಾಟಿರುವುದು ಒಂದಾದರೆ, ಸೋಂಕಿಗೆ ಬಲಿಯಾದವರ ಸಂಖ್ಯೆ 1.25 ಲಕ್ಷ ದಾಟಿರುವುದು ಇನ್ನೊಂದು. ಅಕ್ಟೋಬರ್ 2ರಂದು ಭಾರತದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿತ್ತು.

ಈ ವಾರದಲ್ಲಿ ಎರಡನೇ ಬಾರಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಶುಕ್ರವಾರ ದೇಶಾದ್ಯಂತ 50,314 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 84,61,771ಕ್ಕೇರಿದೆ. ಕಳೆದ 35 ದಿನಗಳಲ್ಲಿ 25 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಈ ಮಧ್ಯೆ ಅಮೆರಿಕದಲ್ಲಿ ಮೂರನೇ ಅಲೆ ಸ್ಪಷ್ಟವಾಗಿ ಗೋಚರಿಸಿದ್ದು, ಒಂದೇ ದಿನ 1.27 ಲಕ್ಷ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸತತ ಮೂರನೇ ದಿನ ಲಕ್ಷಕ್ಕಿಂತ ಅಧಿಕ ಪ್ರಕರಣಗಳು ದೃಢಪಟ್ಟಂತಾಗಿವೆ. ಯೂರೋಪ್‌ನಲ್ಲಿ ಕೊರೋನ ವೈರಸ್‌ಗೆ ಬಲಿಯಾದವರ ಸಂಖ್ಯೆ 3 ಲಕ್ಷ ದಾಟಿದ್ದು, 12 ದಶಲಕ್ಷ ಪ್ರಕರಣಗಳು ವರದಿಯಾಗಿವೆ.

 

 

Please follow and like us:
error