ಬೇಸಿಗೆ ಸಮಯದಲ್ಲಿ ಆರೋಗ್ಯದ ಕಾಳಜಿ : ಸಲಹೆ


ಕೊಪ್ಪಳ ಮಾ. :   ಬಿಸಿಲಿನ ಪ್ರಕರತೆ ಮತ್ತು ತೀವ್ರತೆ ಕಂಡು ಬಂದ ಹಿನ್ನಲೆಯಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯದ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಎಸ್. ಯರಗಲ್ ಅವರು ತಿಳಿಸಿದ್ದಾರೆ.
ಅನುಸರಿಸಬೇಕಾದ ಕ್ರಮಗಳು :

ಮನೆಯಿಂದ ಹೊರಗಡೆ ಹೋಗುವಾಗ ಜೊತೆಯಲ್ಲಿ ತಪ್ಪದೇ ಶುದ್ದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಬೇಕು, ಬಿಸಿಲಿನಲ್ಲಿ ಹೊರಗಡೆ ಕಾರ್ಯನಿರ್ವಹಿಸುವುವರು ( ಜಮೀನು ಕೆಲಸ, ರಸ್ತೆ ಕಾಮಗಾರಿ ಮುಂತಾದವು) ಆದಷ್ಟು ಬೆಳಗ್ಗೆ ೧೧ ಗಂಟೆಯ ಒಳಗೆ ಮತ್ತು ಸಂಜೆ ೪ ಗಂಟೆ ನಂತರ ಕೈಗೊಳ್ಳುವುದು ಉತ್ತಮ, ಸಡಿಲವಾದ ತೆಳು ಬಣ್ಣದ ಹತ್ತಿ ಬಟ್ಟೆಯನ್ನು ದರಿಸಬೇಕು, ಆತ/ಆಕೆಯ ಹಣೆ, ಕತ್ತು, ಪಾದ, ತೊಡೆಯ ಸಂದುಗಳನ್ನು ಒದ್ದೆ ಬಟ್ಟೆಯಿಂದ ಒರೆಸಿರಿ. (ತಂಪಾದ ಅಥವಾ ಐಸ್ ನೀರಿನಿಂದ ಒರೆಸಬೇಡಿ) ಮತ್ತು ಸ್ವಲ್ಪ ನೀರನ್ನು ಕುಡಿಸಬೇಕು, ಕೈಗೆ ಸಿಗುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಿ, ಆಗಾಗ್ಗೆ ನೀದಾನವಾಗಿ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಿರಿ. ಹಣ್ಣಿನ ರಸ/ಪಾನಕಗಳನ್ನು ಕುಡಿಯಿರಿ, ಹತ್ತಿಯ ನುಣುಪಾದ ಬಟ್ಟೆ/ಟಿಸ್ಸು ಕರ ವಸ್ತ್ರದಿಂದ ಬೆವರನ್ನು ಒರೆಸಿರಿ, ನೀರು, ಮಜ್ಜಿಗೆ/ಎಳೆನೀರು ಕುಡಿಯಬಹುದು, ಬೆಚ್ಚಗಿನ, ಮಸಾಲೆ ರಹಿತ ಶುದ್ದ ಸಾತ್ವಿಕ ಆಹಾರ ಸೇವಿಸಿರಿ, ಗಾಳಿ ಯಾಡುವಂತಿರುವ ಪಾದರಕ್ಷೆಗಳನ್ನು ಧರಿಸಿರಿ, ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಸ್ಥಳಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ, ಚರ್ಮ ಕೆಂಪಾದರೆ ಬೇವರು ಕಡಿಮೆ ಆದರೆ ದೇಹದ ಉಷ್ಣತೆ ಜಾಸ್ತಿಯಾದರೆ ಧಿರ್ಘವಾದ ತೀವ್ರ ಉಸಿರಾಟ ಇದ್ದಲ್ಲಿ ತುರ್ತಾಗಿ ಸಮೀಪ ಆಸ್ಪತ್ರೆಗೆ ಕರೆದುಕೊಂಡು ಹೋಗಿರಿ.
ಈ ರೀತಿಯಾಗಿ ಮಾಡದಿರಿ : ಅತಿ ಬಿಗಿಯಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು, ಕುಷನ್‌ಯುಕ್ತ ಖುರ್ಚಿಯಲ್ಲಿ ಕುಡಬೇಡಿರಿ, ಸೋಡಾ ಇತ್ಯಾದಿ ಕಾರ್ಬೊನೆಟೆಡ್ ತಂಪು ಪಾನಿಯಗಳನ್ನು ಕುಡಿಯಬೇಡಿ, ಬೆವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸಬೇಡಿ, ಕಾಫಿ/ಟೀ ಅತಿ ಸಕ್ಕರೆ ಅಂಶವುಳ್ಳ ಪಾನಿಯಗಳನ್ನು ಅತಿಯಾಗಿ ಸೇವಿಸಬೇಡಿ, ಬಿಸಿಯಾದ ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ಮಾಂಸಹಾರ/ಮದ್ಯಪಾನ ವರ್ಜಿಸಿ, ಬಿಗಿಯಾದ ಗಾಳಿಯಾಡದ ಪಾದರಕ್ಷೆ/ಶೂಗಳನ್ನು ದರಿಸಬೇಡಿ, ಉಷ್ಣತೆಯಿಂದ ಸುಸ್ತಾದ ವ್ಯಕ್ತಿಯನ್ನು ತುಂಬಾ ತಣ್ಣಗಿನ/ಶೀಥಲಿಕರಿಸಿದ ನೀರಿನಿಂದ ಒರೆಸಬೇಡಿ. (ಇದರಿಂದ ವ್ಯಕ್ತಿಯ ಹೊರಪದರಿನಲ್ಲಿನ ರಕ್ತನಾಳಗಳು ಸಂಕುಂಚಿತಗೊಂಡು ದೇಹದ ಒಳಗಿನ ಉಷ್ಣತೆ ದೇಹದೊಳಗೆ ಬಂದಿತವಾಗಿ ಆತನ ಅಂಗಾಗಳು ನಿಷ್ಕ್ರೀಯಗೊಂಡು ಹೆಚ್ಚಿನ ಹಾನಿಯಾಗುವ ಸಾದ್ಯತೆ ಇರುತ್ತದೆ, ವ್ಯಕ್ತಿಯು ತೊದಲು ತೊದಲಾಗಿ, ವಿಚಿತ್ರವಾಗಿ ಮಾತನಾಡಿದರೆ ಆತಂಕ ಪಡಬೇಡಿ ಶಾಂತಿ ಸಮಾದಾನದಿಂದ ಶಿಘ್ರವಾಗಿ ೧೦೮ ಆಂಬುಲೇನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರಿ, ಆರೋಗ್ಯದ ಯಾವುದೇ ಸಮಸ್ಯೆ ಇದ್ದರೆ ತಮ್ಮ ಸಮೀಪದ ಆಸ್ಪತ್ರೆಯ ವೈದ್ಯರನ್ನು, ಕಿರಿಯ ಆರೋಗ್ಯ ಸಹಾಯಕರನ್ನು, ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬೇಕು, ಕಲುಷಿತ ನೀರು ಸೇವನೆ ಮಾಡಬೇಡಿ.
ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ ೧೦೪ಕ್ಕೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು