ಪೋಲಿಸರಿಂದ ಕರೋನಾ ಜಾಗೃತಿ ಕಾರ್ಯಕ್ರಮ

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಹರಡುತ್ತಿರುವುದನ್ನು ತಡೆಗಟ್ಟಲು ಪೋಲಿಸರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇಂದು ನಗರದ ವಿವಿದೆಡೆ ಜಾಗೃತಿ ಮೂಡಿಸಿದ ಪೋಲಿಸರು ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಮಾಸ್ಕ್ ಧರಿಸುವದರಿಂದ ಆರೋಗ್ಯಕ್ಕೆ ಒಳಿತಾಗುವುದರ ಕುರಿತು ಅರಿವು ಮೂಡಿಸಿದರು.ಅಶೋಕ ಸರ್ಕಲ್, ಮಾರ್ಕೆಟ್, ಗಾಂಧಿ ಸರ್ಕಲ್, ಜವಾಹರ ರಸ್ತೆಯಲ್ಲಿ ಸಾರ್ವಜನಿಕ ರಿಗೆ ಕರಪತ್ರಗಳನ್ನು ವಿತರಿಸಿ ಹಾಕಿರಿ ಮಾಸ್ಕ್ ಗೆಲ್ಲಿಸಿ ಜೀವನದ ಟಾಸ್ಜ್ , ಸಾಮಾಜಿಕ ಅಂತರ ಬದುಕು ನಿರಂತರ ಎಂದು ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸೈ ಚಂದ್ರಪ್ಪ ಎಚ್ ಸೇರಿದಂತೆ ಎಸೈ ಹಾಗೂ ನಗರಠಾಣೆಯ ಪೋಲಿಸರು ಭಾಗವಹಿಸಿ ಜಾಗೃತಿ ಮೂಡಿಸಿದರು.

Please follow and like us:
error