ನಾಳೆಯಿಂದ ಕೋವಿಡ್ -19 ಲಸಿಕಾ ಕಾರ್ಯಕ್ರಮ

ಕೋವಿಡ್ -19 ಲಸಿಕಾ ಕಾರ್ಯಕ್ರಮ > ಕೊಪ್ಪಳ ಜಿಲ್ಲೆಯಲ್ಲಿ ದಿನಾಂಕ 16.01.2021 ರಿಂದ ಕೋವಿಡ್ -19 ವ್ಯಾಕ್ಸಿನೇಶನ್ ಲಸಿಕಾ ಕಾರ್ಯಕ್ರಮವನ್ನು 03 ಹಂತಗಳಲ್ಲಿ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ .

> ಮೊದಲನೆ ಹಂತದಲ್ಲಿ ಹೆಲ್ತ್ಕೇರ್ ವರ್ಕರ್ , 2 ನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರು ಹಾಗೂ

3 ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು ಮತ್ತು 50 ವರ್ಷದೊಳಗಿನ ಸಹವ್ಯಾಧಿ ರೋಗಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುವುದು . > ಜಿಲ್ಲೆಯಲ್ಲಿ ದಿನಾಂಕ : 16.01.2021 ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಆಸ್ಪತ್ರೆ ಕೊಪ್ಪಳ , ಎಂ.ಸಿ.ಹೆಚ್ ಆಸ್ಪತ್ರೆ ಗಂಗಾವತಿ , ತಾಲೂಕಾ ಆಸತ್ರೆ ಯಲಬುರ್ಗಾ ಹಾಗೂ ತಾಲೂಕಾ ಆಸ್ಪತ್ರೆ ಕುಷ್ಟಗಿಯಲ್ಲಿ ಲಸಿಕೆಗೆ ಚಾಲನೆ ನೀಡಲಾಗುತ್ತದೆ . > ಜಿಲ್ಲೆಯಲ್ಲಿ ಒಟ್ಟು 11747 ಹೆಲ್ತ್ಕೇರ್ ವರ್ಕರ್ ಫಲಾನುಭವಿಗಳಲ್ಲಿ , ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿಗಳ ಸಂಖ್ಯೆ 9046 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ 2701 ಗುರಿತಿಸಿ ಲಸಿಕೆ ನೀಡಲು ಗುರಿ ಹೊಂದಲಾಗಿದೆ . > ಜಿಲ್ಲೆಗೆ ರಾಜ್ಯದಿಂದ 6500 ಡೋಸ್ ಕೋವಿಶೀಲ್ ಲಸಿಕೆ ಹಾಗೂ 37800 ಸಿರೀಂಜ್‌ಗಳು ಸರಬರಾಜು ಆಗಿದ್ದು , ಅದರಂತೆ ಮೊದಲನೆ ಹಂತದಲ್ಲಿ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿನದಲ್ಲಿ ಬರುವ ಕಛೇರಿಯಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 5481 ಅಧಿಕಾರಿಗಳಿಗೆ ಹಾಗೂ ವೈದ್ಯಾಧಿಕಾರಿಗಳಿಗೆ , ಸಿಬ್ಬಂದಿ ವರ್ಗದವರಿಗೆ ಮತ್ತು ಆಶಾ ಕಾರ್ಯಕರ್ತೆಯರುಗಳಿಗೆ ಅಲ್ಲದೆ 1019 ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು . > ಜಿಲ್ಲೆಯಲ್ಲಿ ಒಟ್ಟು 14 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಹಾಗೂ 30 ಲಸಿಕಾ ತಂಡಗಳನ್ನು ರಚಿಸಲಾಗಿರುತ್ತದೆ . ಪ್ರತಿ ತಂಡದಲ್ಲಿ 05 ಜನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ . > ಅರ್ಹ ಫಲಾನುಭವಿಗಳು ಚುನಾವಣೆ ಮಾದರಿಯಲ್ಲಿ ಗುರುತಿಸಿ ಅವರುಗಳಿಗೆ ನಿಗದಿತ ಲಸಿಕಾ ಕೇಂದ್ರಗಳಿಗೆ ಹಾಗೂ ಲಸಿಕಾ ತಂಡಗಳಿಗೆ ಲಿಂಕ್ ಮಾಡಲಾಗಿದ್ದು ಸಂಬಂಧಿಸಿದ ಫಲಾನುಭವಿಗಳಿಗೆ ಎಸ್.ಎಂ.ಎಸ್ . ಮೂಲಕ ಮಾಹಿತಿ ಸ್ವಯಂಚಾಲಿತವಾಗಿ ತಲುಪುತ್ತದೆ . ಕಾರಣ ಸಂಬಂಧಿಸಿದ ಫಲಾನುಭವಿಗಳು ನಿಗದಿತ ದಿನಾಂಕದಂದು ನಿಗದಿತ ಲಸಿಕಾ ಕೇಂದ್ರಗಳಿಗೆ ತೆರಳಿ ನಿಗದಿತ ತಂಡದವರಿಂದ ಲಸಿಕೆ ಪಡೆಯಬೇಕಾಗಿರುತ್ತದೆ . > ಲಸಿಕಾ ಮೇಲ್ವಿಚಾರಣೆಗಾಗಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳನ್ನು ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳನ್ನು ನೇಮಿಸಲಾಗಿರುತ್ತದೆ . ಇನ್ನುಳಿದಂತೆ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡು ಲಸಿಕೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ

Please follow and like us:
error