ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ


ನ್ಯೂ
ದೆಹಲಿ: ನವೆಂಬರ್ ತಿಂಗಳಿನಲ್ಲಿ 12.8 ಲಕ್ಷ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು ನಾಲ್ಕು ತಿಂಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಅಂತೆಯೇ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಐದು ತಿಂಗಳಲ್ಲಿ ಕನಿಷ್ಠ ಎನಿಸಿದೆ.ನವೆಂಬರ್ ತಿಂಗಳಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 15,494. ಇದು ಅಕ್ಟೋಬರ್‌ನಲ್ಲಿ ದಾಖಲಾದ 23,472ಕ್ಕೆ ಹೋಲಿಸಿದರೆ ತೀರಾ ಕಡಿಮೆ. ಜೂನ್‌ನಲ್ಲಿ ಸೋಂಕಿನಿಂದ 11,988 ಮಂದಿ ಮೃತಪಟ್ಟಿದ್ದನ್ನು ಹೊರತುಪಡಿಸಿದರೆ ಆ ಬಳಿಕ ಐದು ತಿಂಗಳಲ್ಲಿ ದಾಖಲಾದ ಕನಿಷ್ಠ ಸಂಖ್ಯೆ ಇದಾಗಿದೆ .

ಹಿಂದಿನ ತಿಂಗಳಿಗೆ ಹೋಲಿಸಿದರೆ ಕೋವಿಡ್-19 ಪ್ರಕರಣಗಳ ಸಂಖ್ಯೆ ಶೇಕಡ 32ರಷ್ಟು ಕಡಿಮೆಯಾಗಿದೆ. ಅಕ್ಟೋಬರ್‌ನಲ್ಲಿ 18.8 ಲಕ್ಷ ಹೊಸ ಪ್ರಕರಣಗಳು ದಾಖಲಾಗಿದ್ದವು. ಸೆಪ್ಟಂಬರ್‌ನಲ್ಲಿ ಗರಿಷ್ಠ ಅಂದರೆ 26.2 ಲಕ್ಷ ಪ್ರಕರಣ ದಾಖಲಾದ ಬಳಿಕ ಸತತ ಎರಡು ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.ಅಂತೆಯೇ ಸೆಪ್ಟಂಬರ್‌ನಲ್ಲಿ 33,255 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಆ ಬಳಿಕ ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆ.

 

Please follow and like us:
error